ಆ್ಯಪ್ನಗರ

ನ್ಯಾಯಾಧೀಶರು ನಿರ್ಭೀತಿಯಿಂದ ಕಾರ್ಯನಿರ್ವಹಿಸಬೇಕು..! ಜಗನ್‌ ಆರೋಪಕ್ಕೆ ನ್ಯಾ. ರಮಣ ತೀಕ್ಷ ತಿರುಗೇಟು

ನ್ಯಾ. ರಮಣ ಅವರ ವಿರುದ್ಧ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಪತ್ರಕ್ಕೆ ಮೊದಲ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್‌.ವಿ. ರಮಣ ನ್ಯಾಯಾಧೀಶರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

Agencies 18 Oct 2020, 11:33 pm
ಹೊಸದಿಲ್ಲಿ: ''ದೇಶದ ನಾಲ್ಕು ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದೆನಿಸಿರುವ ನ್ಯಾಯಾಂಗ ವ್ಯವಸ್ಥೆಗೆ ಜನರು ಅದರ ಮೇಲೆ ಇರಿಸಿರುವ ವಿಶ್ವಾಸವೇ ದೊಡ್ಡ ಶಕ್ತಿಯಾಗಿದೆ. ಈ ನಂಬಿಕೆಯನ್ನು ನ್ಯಾಯಾಂಗ ವ್ಯವಸ್ಥೆಯು ಉಳಿಸಿಕೊಳ್ಳಬೇಕು. ನ್ಯಾಯಾಧೀಶರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕು,'' ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಹೇಳಿದ್ದಾರೆ.
Vijaya Karnataka Web supreme court judge nv ramana says faith acceptability have to be earned not commanded
ನ್ಯಾಯಾಧೀಶರು ನಿರ್ಭೀತಿಯಿಂದ ಕಾರ್ಯನಿರ್ವಹಿಸಬೇಕು..! ಜಗನ್‌ ಆರೋಪಕ್ಕೆ ನ್ಯಾ. ರಮಣ ತೀಕ್ಷ ತಿರುಗೇಟು


ನ್ಯಾ. ರಮಣ ಅವರ ವಿರುದ್ಧ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಈ ಹೇಳಿಕೆ ಮಹತ್ವ ಪಡೆದಿದೆ. ಈ ವಿಚಾರದ ಬಗ್ಗೆ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

''ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ಇಡೀ ದೇಶದ ಜನತೆಗೆ ತುಂಬಾ ಗೌರವ, ನಂಬಿಕೆ ಮತ್ತು ವಿಶ್ವಾಸವಿದೆ. ಇದಕ್ಕೆ ಚ್ಯುತಿ ಬಾರದಂತೆ ನ್ಯಾಯಾಧೀಶರು ನಡೆದುಕೊಳ್ಳಬೇಕು. ತೀರ್ಪು ನೀಡುವಾಗ ನಿರ್ಭೀತಿಯಿಂದ ನ್ಯಾಯ ನಿರ್ಣಯ ಮಾಡಬೇಕು. ಈ ವಿಷಯದಲ್ಲಿಯಾವುದೇ ರಾಜಿ-ಸಂಧಾನ ಇರಬಾರದು,'' ಎಂದು ಅವರು ಕರೆ ನೀಡಿದರು.

ಆ.27ರಂದು ನಿಧನರಾದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ಲಕ್ಷ್ಮಣನ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿನ್ಯಾ.ರಮಣ ಮಾತನಾಡಿದರು. ''ಸತ್ಯವನ್ನು ಮತ್ತು ವಾಸ್ತವ ಸಂಗತಿಯನ್ನು ಬದಲಿಸಲು ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನಂಬಿಕೆ, ವಿಶ್ವಾಸ ಮತ್ತು ನ್ಯಾಯ ನಿರ್ಣಯವನ್ನು ಬದಲಿಸಲಾಗದು. ಇವೆಲ್ಲವನ್ನೂ ನಾವು ಗಮನದಲ್ಲಿಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು,'' ಎಂದರು.

ಆಂಧ್ರ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ: ಸಂಚಲನ ಸೃಷ್ಟಿಸಿದ ಸಿಜೆಐಗೆ ಜಗನ್ ರೆಡ್ಡಿ ಬರೆದ ಪತ್ರ!

''ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಜಡ್ಜ್‌ಗಳು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಎಲ್ಲ ಕಾನೂನು ಪಾಲಕರು ಯಾವುದೇ ನಿರ್ಧಾರ ಕೈಗೊಳ್ಳುವಾಗ, ತೀರ್ಪು ನೀಡುವಾಗ, ನ್ಯಾಯ ನಿರ್ಣಯಿಸುವಾಗ ಒತ್ತಡ ಅಥವಾ ಅಂಜಿಕೆಗೆ ಒಳಗಾಗಬೇಕಿಲ್ಲ. ನಿರ್ಭೀತಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು,'' ಎಂದು ಅವರು ಹೇಳಿದರು.

ಮಂಗಳವಾರ ಜಗನ್‌-ಮೋದಿ ಭೇಟಿ..! ಎನ್‌ಡಿಎ ಭಾಗವಾಗುತ್ತಾ ವೈಎಸ್‌ಆರ್‌ ಕಾಂಗ್ರೆಸ್‌..?

''ಒಬ್ಬ ವ್ಯಕ್ತಿಯು ಉತ್ತಮ ಎಂದು ಕರೆಸಿಕೊಳ್ಳುವ ಜೀವನ ನಡೆಸಬೇಕೆಂದರೆ ಆತನಿಗೆ ಸಾಕಷ್ಟು ಗುಣಗಳು ಇರಬೇಕು. ಮಾನವೀಯತೆ, ತಾಳ್ಮೆ, ಕರುಣೆ, ಬಲವಾದ ವೃತ್ತಿಪರ ನೈತಿಕತೆ ಮತ್ತು ಸತತ ಕಲಿಕೆ ಹಾಗೂ ತನ್ನನ್ನು ತಾನು ಸುಧಾರಿಸಿಕೊಳ್ಳುವ ಗುಣಗಳು ಬಹಳ ಮುಖ್ಯ,'' ಎಂದು ಅಭಿಪ್ರಾಯಪಟ್ಟರು.

ಆಂಧ್ರ ಹೈಕೋರ್ಟ್‌ ವಿರುದ್ಧ ಟೀಕೆ; ಸಿಎಂ ಜಗನ್‌ಗೆ ಸಿಬಿಐ ಸಂಕಷ್ಟ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ