ಆ್ಯಪ್ನಗರ

ಅಯೋಧ್ಯೆ ತೀರ್ಪು ನಮಗೆ ತೃಪ್ತಿ ನೀಡಿಲ್ಲ : ಸುನ್ನಿ ವಕ್ಫ್‌ ಬೋರ್ಡ್‌ ಅಸಮಾಧಾನ

ಐತಿಹಾಸಿಕ ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಇದೀಗ ಅಂತಿಮ ಘಟ್ಟ ತಲುಪಿದ್ದು. ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿದ್ದೆ. ಆದರೆ, ಈ ಕುರಿತು ಇಗಾಗಲೇ ವಕ್ಫ್ ಬೋರ್ಡ್‌ನಿಂದ ಅಸಮಾಧಾನ ವ್ಯಕ್ತವಾಗಿದೆ.

Vijaya Karnataka Web 9 Nov 2019, 1:00 pm
ಹೊಸದಿಲ್ಲಿ: ಐತಿಹಾಸಿಕ ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಅಂತಿಮ ಘಟ್ಟ ತಲುಪಿದ್ದು. ಅಂತಿಮ ತೀರ್ಪು ಪ್ರಕಟಗೊಂಡಿದೆ. ಈ ಕುರಿತು ಸುನ್ನಿ ವಕ್ಫ್ ಬೋರ್ಡ್‌ನಿಂದ ಅಸಮಾಧಾನ ವ್ಯಕ್ತವಾಗಿದೆ.
Vijaya Karnataka Web supreme court orders central govt within 3 month setting up trust
ಅಯೋಧ್ಯೆ ತೀರ್ಪು ನಮಗೆ ತೃಪ್ತಿ ನೀಡಿಲ್ಲ : ಸುನ್ನಿ ವಕ್ಫ್‌ ಬೋರ್ಡ್‌ ಅಸಮಾಧಾನ




ನಾವು ಸುಪ್ರೀಂ ಕೋರ್ಟ್‌ ತೀರ್ಪನ್ನು ಗೌರವಿಸುತ್ತೇವೆ. ಆದರೆ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಮುಂದೆ ಏನು ಮಾಡಬಹುದು ಎಂಬುದನ್ನು ನಿರ್ಧಸರಿಸಲಾಗುವುದು ಎಂದು ಸುನ್ನಿ ವಕ್ಫ್‌ ಬೋರ್ಡ್‌ ವಕೀಲ ಝಾಫರ್ ಆಯಾಬ್‌ ಜಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ಮಹಾ ತೀರ್ಪು: ರಾಜಕೀಯ ಮುಖಂಡರ ಪ್ರತಿಕ್ರಿಯೆ ಹೀಗಿದೆ

ಸುನ್ನಿ ವಕ್ಫ್ ಬೋರ್ಡ್‌ಗೆ ಪ್ರತ್ಯೇಕ ಜಾಗ ಭೂಮಿ ನೀಡಿವಂತೆ ಸೂಪ್ರೀಂ ಕೋರ್ಟ್‌ ಸೂಚಿಸಿದೆ. ಆದರೆ, ಮಸೀದಿ ನಿರ್ಮಾಣಕ್ಕೆ ಬೇರೊಂದು ಜಾಗದಲ್ಲಿ ಪರ್ಯಾಯ ಭೂಮಿ ನೀಡುತ್ತಿರುವುದು ಸರಿಯಲ್ಲ. ತೀರ್ಪನ್ನು ಪೂರ್ಣವಾಗಿ ಪರಿಶೀಲಿಸಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಿರ್ಧರಿಸಲಾಗುವುದು ಎಂದು ವಕೀಲ ಜಿಲಾನಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ