ಆ್ಯಪ್ನಗರ

ಮಹಾರಾಷ್ಟ್ರ ಚುನಾವಣೆಗೂ ಮುನ್ನ ಫಡ್ನವೀಸ್‌ಗೆ ಹಿನ್ನಡೆ, ಸಿಎಂ ವಿಚಾರಣೆಗೆ ಸುಪ್ರೀಂ ಅಸ್ತು

1996 ಮತ್ತು 1998ರಲ್ಲಿ ದೇವೇಂದ್ರ ಫಡ್ನವೀಸ್‌ ವಿರುದ್ಧ ವಂಚನೆ ಮತ್ತು ಫೋರ್ಜರಿ ಕೇಸು ದಾಖಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಅವರ ವಿರುದ್ಧ ಇನ್ನೂ ಆರೋಪ ಪಟ್ಟಿ ದಾಖಲಾಗಿಲ್ಲ. ಈ ಪ್ರಕರಣಗಳನ್ನು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರಲಿಲ್ಲ.

TIMESOFINDIA.COM 1 Oct 2019, 2:15 pm

ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನೆಡೆಯಾಗಿದೆ. ಸುಳ್ಳು ಚುನಾವಣಾ ಅಫಿಡವಿಟ್‌ ಸಲ್ಲಿಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್‌ ಫಡ್ನವೀಸ್‌ಗೆ ನೀಡಿದ್ದ ಕ್ಲೀನ್‌ಚಿಟ್‌ನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ಮೂಲಕ ಅವರ ವಿರುದ್ಧದ ವಿಚಾರಣೆಗೆ ಹಾದಿ ಸುಗಮಗೊಳಿಸಿದೆ.
Vijaya Karnataka Web Maharashtra Chief Minister Devendra Fadnavis


ಸುಳ್ಳು ಅಫಿಡವಿಟ್‌ ಪ್ರಕರಣದಲ್ಲಿ ನೀಡಲಾದ ಕ್ಲೀನ್‌ಚಿಟ್‌ನ್ನು ಕಾನೂನಿನಂತೆ ಒಪ್ಪಲಾಗದು ಹಾಗಾಗಿ ಇದ್ದನ್ನು ರದ್ದುಪಡಿಸುತ್ತಿದ್ದೇವೆ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ನ್ಯಾ. ದೀಪಕ್‌ ಗುಪ್ತಾ ಮತ್ತು ನ್ಯಾ. ಅನಿರುದ್ಧ ಬೋಸ್‌ ಅವರಿದ್ದ ತ್ರಿ ಸದಸ್ಯ ನ್ಯಾಯಪೀಠ ಹೇಳಿದೆ.

ಚುನಾವಣಾ ಕಣಕ್ಕೆ ಠಾಕ್ರೆ ಕುಡಿ, ಮಹಾರಾಷ್ಟ್ರ ಸಿಎಂ ಹುದ್ದೆ ಮೇಲೆ ಶಿವಸೇನೆ ಕಣ್ಣು

2014ಲ್ಲಿ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಮ್ಮ ಮೇಲಿದ್ದ ಎರಡು ಕ್ರಿಮಿನಲ್‌ ಪ್ರಕರಣಗಳನ್ನು ಫಡ್ನವೀಸ್‌ ಉಲ್ಲೇಖಿಸಿಲ್ಲ ಎಂದು ದೂರಿ ಸತೀಶ್‌ ಉಕೆ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇದನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಇದಕ್ಕೀಗ ತಡೆ ನೀಡಿರುವ ನ್ಯಾಯಾಲಯ ಸತೀಶ್‌ ಉಕೆ ಸಲ್ಲಿಸಿದ್ದ ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ಸೂಚಿಸಿದೆ.

ಮೈತ್ರಿ ಮಾತುಕತೆ ನಡುವೆಯೂ ಶಿವಸೇನೆಗೆ ಸಿಎಂ ಪಟ್ಟದ ಕನಸು

1996 ಮತ್ತು 1998ರಲ್ಲಿ ದೇವೇಂದ್ರ ಫಡ್ನವೀಸ್‌ ವಿರುದ್ಧ ವಂಚನೆ ಮತ್ತು ಫೋರ್ಜರಿ ಕೇಸು ದಾಖಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಅವರ ವಿರುದ್ಧ ಇನ್ನೂ ಆರೋಪ ಪಟ್ಟಿ ದಾಖಲಾಗಿಲ್ಲ. ಈ ಪ್ರಕರಣಗಳನ್ನು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರಲಿಲ್ಲ.

ಈ ಪ್ರಕರಣದ ಬಿಸಿ ಈಗ ಫಡ್ನವೀಸ್‌ಗೆ ತಟ್ಟಿದೆ. ಚುನಾವಣೆಗೂ ಮುನ್ನ ಅವರು ಈ ಪ್ರಕರಣವನ್ನು ಎದುರಿಸಬೇಕಾಗಿದೆ. ಸುಳ್ಳು ಅಫಿಡವಿಟ್‌ ಸಲ್ಲಿಕೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ, ಕೆಲವೊಮ್ಮೆ ಎರಡೂ ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ