ಆ್ಯಪ್ನಗರ

ಕಂಬಳ ಸುಗ್ರೀವಾಜ್ಞೆ ತಡೆಗೆ ಸುಪ್ರೀಂ ನಕಾರ

ರಾಜ್ಯದ ಕರಾವಳಿ ಭಾಗದ ಜನಪ್ರಿಯ ಜನಪದ ಕ್ರೀಡೆ 'ಕಂಬಳ'ಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ತಡೆ ನೀಡಲು ನಕಾರ

Vijaya Karnataka 6 Nov 2017, 10:44 pm

ಹೊಸದಿಲ್ಲಿ: ರಾಜ್ಯದ ಕರಾವಳಿ ಭಾಗದ ಜನಪ್ರಿಯ ಜನಪದ ಕ್ರೀಡೆ 'ಕಂಬಳ'ಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

Vijaya Karnataka Web supreme court refuses stay peta plea to ban kambala
ಕಂಬಳ ಸುಗ್ರೀವಾಜ್ಞೆ ತಡೆಗೆ ಸುಪ್ರೀಂ ನಕಾರ


ಈ ಸಂಬಂಧ ಪ್ರಾಣಿ ದಯಾ ಸಂಘಟನೆ (ಪೇಟಾ) ಸಲ್ಲಿಸಿದ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು, ಈ ಹಂತದಲ್ಲಿ ಸುಗ್ರೀವಾಜ್ಞೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿತು. ಜತೆಗೆ, ಪ್ರಕರಣ ಕುರಿತಂತೆ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ನ.13ಕ್ಕೆ ನಿಗದಿಪಡಿಸಿತು.

ಕಳೆದ ವರ್ಷ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿನ ಅಪಾಯಕಾರಿ ಜನಪದ ಕ್ರೀಡೆ ಜಲ್ಲಿಕಟ್ಟು ಜತೆಗೆ ರಾಜ್ಯದ ಕಂಬಳಕ್ಕೂ ನಿಷೇಧ ಹೇರಲಾಗಿತ್ತು. ಆದರೆ, ರಾಜ್ಯದಲ್ಲಿ 'ಕಂಬಳ'ದ ಪರವಾಗಿ ನಡೆದ ವ್ಯಾಪಕ ಹೋರಾಟದ ಪರಿಣಾಮವಾಗಿ ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಈ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿತ್ತು. ಈ ಸುಗ್ರೀವಾಜ್ಞೆ ರದ್ದುಪಡಿಸಬೇಕೆಂದು ಪೇಟಾ ಪರ ವಕೀಲ ಸಿದ್ಧಾರ್ಥ ಲೂತ್ರಾ ವಾದ ಮಂಡಿಸಿದರು. ಆದರೆ, ಈ ವಾದವನ್ನು ಪೀಠ ಒಪ್ಪಲಿಲ್ಲ.

ಮುಂದಿನ ವಿಚಾರಣೆ ವೇಳೆ ಪೇಟಾ ಅರ್ಜಿಗೆ ರಾಜ್ಯ ಸರಕಾರ ಪ್ರತಿಕ್ರಿಯೆ ನೀಡಬೇಕು ಮತ್ತು ಆಗ ಅಟಾರ್ನಿ ಜನರಲ್‌ ಸಹ ಉಪಸ್ಥಿತರಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಸೂಚಿಸಿದರು. ನ್ಯಾಯಮೂರ್ತಿಗಳಾದ ಎ.ಎಂ.ಕನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಪೀಠದಲ್ಲಿದ್ದರು. ರಾಜ್ಯ ಸರಕಾರದ ಪರವಾಗಿ ವಕೀಲ ವಿ.ಎನ್‌.ರಘುಪತಿ ಹಾಜರಿದ್ದರು.

Supreme Court refuses stay PETA plea to ban Kambala

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ