ಆ್ಯಪ್ನಗರ

ಸಚಿನ್‌ ಪೈಲಟ್‌ಗೆ ಗೆಲುವು: ನೋಟಿಸ್‌ ಬಗ್ಗೆ ಹೈ ಕೋರ್ಟ್ ಆದೇಶ ನೀಡಬಹುದು ಎಂದ ಸುಪ್ರೀಂಕೋರ್ಟ್‌

ರಾಜಸ್ಥಾನ ಹೈ ಕೋರ್ಟ್‌ ಶಾಸಕರ ಅನರ್ಹತೆಯ ನೋಟಿಸ್‌ ಬಗ್ಗೆ ತೀರ್ಪು ನೀಡಬಹುದು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಈ ಮೂಲಕ ಬಂಡಾಯ ಶಾಸಕ ಸಚಿನ್‌ ಪೈಲಟ್‌ ಹಾಗೂ ಅವರ ಬಣಕ್ಕೆ ಗೆಲುವು ಸಿಕ್ಕಿದಂತಾಗಿದೆ.

TIMESOFINDIA.COM 23 Jul 2020, 2:13 pm
ನವದೆಹಲಿ: ಮಾಜಿ ಡಿಸಿಎಂ, ಕಾಂಗ್ರೆಸ್‌ನ ಬಂಡಾಯ ಶಾಸಕ ಸಚಿನ್‌ ಪೈಲಟ್‌ಗೆ ಸುಪ್ರೀಂಕೋರ್ಟ್‌ನಲ್ಲಿ ಮೊದಲ ಜಯ ಸಿಕ್ಕಿದೆ. ರಾಜಸ್ಥಾನ ಹೈ ಕೋರ್ಟ್‌ ಶಾಸಕರ ಅನರ್ಹತೆಯ ನೋಟಿಸ್‌ ಬಗ್ಗೆ ತೀರ್ಪು ನೀಡಬಹುದು ಎಂದು ತಿಳಿಸಿದೆ. ಪೈಲಟ್‌ ಸೇರಿ 18 ಶಾಸಕರಿಗೆ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಅನರ್ಹತೆ ಸಂಬಂಧ ನೋಟಿಸ್‌ ಜಾರಿಗೊಳಿಸಿದ್ದರು.
Vijaya Karnataka Web 76952788


ಇದನ್ನ ಪ್ರಶ್ನಿಸಿ ಬಂಡಾಯ ಶಾಸಕರು ರಾಜಸ್ಥಾನ ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನ ವಿರೋಧಿಸಿ ಸ್ಪೀಕರ್ ಸಿ ಪಿ ಜೋಶಿ ಹೈ ಕೋರ್ಟ್‌ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ. ಅಲ್ಲದೆ ತೀರ್ಪು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಹೈ ಕೋರ್ಟ್‌ ನೀಡುವ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೆ ಹೈ ಕೋರ್ಟ್ ನೋಟಿಸ್‌ ಸಂಬಂಧ ತೀರ್ಪು ನೀಡಬಹುದು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಮೂಲಕ ಒಂದು ಹಂತದಲ್ಲಿ ಸ್ಪೀಕರ್‌ಗೆ ಮುಖಭಂಗವಾಗಿದ್ದು ಸಚಿನ್‌ ಪೈಲಟ್‌ ಬಣಕ್ಕೆ ಗೆಲುವು ಸಿಕ್ಕಿದಂತಾಗಿದೆ. ಶುಕ್ರವಾರ ಈ ಬಗ್ಗೆ ರಾಜಸ್ಥಾನ ಹೈ ಕೋರ್ಟ್‌ ತೀರ್ಪು ಪ್ರಕಟಿಸಿಲಿದೆ.
ಲೋನ್‌ ಪಡೆಯಲು ಹೋದ ಚಹಾ ವ್ಯಾಪಾರಿಗೆ ಶಾಕ್‌ ಕೊಟ್ಟ ಬ್ಯಾಂಕ್‌, ಹಳೆಯ 50 ಕೋಟಿ ಬಾಕಿ ಕಟ್ಟಿ ಎಂದ ಅಧಿಕಾರಿ!

ಸುಪ್ರೀಂಕೋರ್ಟ್‌ ಹೇಳಿದ್ದೇನು?
ರಾಜಸ್ಥಾನ ಸ್ಪೀಕರ್ ಜೋಶಿಯವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೈ ಕೋರ್ಟ್‌ಗೆ ಆದೇಶ ನೀಡಲು ಅವಕಾಶ ನೀಡಿದೆ. ಹೀಗಾಗಿ ಹೈ ಕೋರ್ಟ್‌ ಶುಕ್ರವಾರ ಈ ಬಗ್ಗೆ ತೀರ್ಪು ನೀಡಿದೆ. ಅಲ್ಲದೇ ಜೋಶಿಯವರ ಅರ್ಜಿ ಸಂಬಂಧ ಇನ್ನಷ್ಟು ವಿಚಾರಣೆ ನಡೆಸುವ ಉದ್ದೇಶದಿಂದ ಸೋಮವಾರಕ್ಕೆ ಈ ವಿಚಾರಣೆಯನ್ನ ಮುಂದೂಡಿದೆ. ಇನ್ನು ವಿಚಾರಣೆ ವೇಳೆ ಅನೇಕ ವಿಚಾರಗಳನ್ನ ಸುಪ್ರೀಂಕೋರ್ಟ್‌ ಪ್ರಸ್ತಾಪಸಿದೆ. ‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯವನ್ನ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಸಚಿನ್‌ ಪೈಲಟ್‌ ಅವರನ್ನ ವಜಾಗೊಳಿಸಿರುವುದು ಹಾಗೂ ಶಾಸಕರಿಗೆ ಅನರ್ಹತೆಯ ನೋಟಿಸ್‌ ಜಾರಿಗೊಳಿಸಿದ ಕಾರಣವನ್ನು ಸುಪ್ರೀಂಕೋರ್ಟ್‌ ಕೇಳಿದೆ. ಈ ಬಗ್ಗೆ ಕೂಲಂಕುಷ ವಿಚಾರಣೆಯ ಅಗತ್ಯವಿದೆ ಎಂದಿರುವ ಸುಪ್ರೀಂಕೋರ್ಟ್‌. ಅನರ್ಹತೆ ಮಾಡುವ ಬಗ್ಗೆ ಅನುಮತಿ ಇದೆಯೋ? ಅಥವಾ ಇಲ್ಲವೋ? ಎನ್ನುವ ಬಗ್ಗೆ ಕಂಡುಹಿಡಿಯುತ್ತೇವೆ ಅಂತಲೂ ಕೋರ್ಟ್‌ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ