Please enable javascript.4 ವಾರದೊಳಗೆ ಮತ್ತೆ ಎಐಪಿಎಂಟಿ ಪರೀಕ್ಷೆಗೆ ಸುಪ್ರೀಂ ಆದೇಶ - Supreme Court scraps AIPMT 2015, asks CBSE to conduct fresh exams within four weeks - Vijay Karnataka

4 ವಾರದೊಳಗೆ ಮತ್ತೆ ಎಐಪಿಎಂಟಿ ಪರೀಕ್ಷೆಗೆ ಸುಪ್ರೀಂ ಆದೇಶ

ಏಜೆನ್ಸೀಸ್ 15 Jun 2015, 1:19 pm
Subscribe

ಎಂಬಿಬಿಎಸ್‌ ಕೋರ್ಸ್‌ ಪ್ರವೇಶಕ್ಕೆ ಸಿಬಿಎಸ್‌ಇ ನಡೆಸಿದ್ದ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದ ಆರೋಪ ಕೇಳಿ ಬಂದ ನಂತರ ಎಐಪಿಎಂಟಿ 2015 ಅನ್ನು ಸುಪ್ರೀಂಕೋರ್ಟ್‌ ಅನೂರ್ಜಿತಗೊಳಿಸಿದೆ.

supreme court scraps aipmt 2015 asks cbse to conduct fresh exams within four weeks
4 ವಾರದೊಳಗೆ ಮತ್ತೆ ಎಐಪಿಎಂಟಿ ಪರೀಕ್ಷೆಗೆ ಸುಪ್ರೀಂ ಆದೇಶ
ಹೊಸದಿಲ್ಲಿ: ದೇಶಾದ್ಯಂತ ಇರುವ ವೈದ್ಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಕೋರ್ಸ್‌ ಪ್ರವೇಶಕ್ಕೆ ಸಿಬಿಎಸ್‌ಇ ನಡೆಸಿದ್ದ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ನಂತರ ಎಐಪಿಎಂಟಿ 2015 ಅನ್ನು ಸುಪ್ರೀಂಕೋರ್ಟ್‌ ಸೋಮವಾರ ಅನೂರ್ಜಿತಗೊಳಿಸಿದೆ.

ನಾಲ್ಕು ವಾರದೊಳಗೆ ಮತ್ತೆ ಹೊಸದಾಗಿ ಪರೀಕ್ಷೆ ನಡೆಸುವಂತೆ ನ್ಯಾಯಮೂರ್ತಿಗಳಾದ ಆರ್.ಕೆ. ಅಗರ್‌ವಾಲ್‌ ಹಾಗೂ ಅಮಿತ್ವ ರಾಯ್‌ ಅವರನ್ನೊಳಗೊಂಡ ಪೀಠ ಸಿಬಿಎಸ್‌ಇಗೆ ನಿರ್ದೇಶಿಸಿದೆ. ಸುಪ್ರೀಂಕೋರ್ಟ್‌ನ ಈ ಆದೇಶದಿಂದ, ಸುಮಾರು 6.3 ಲಕ್ಷ ವಿದ್ಯಾರ್ಥಿಗಳು ವೈದ್ಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮತ್ತೆ ಹೊಸದಾಗಿ ಪರೀಕ್ಷೆ ಬರೆಯಬೇಕಾಗಿದೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾದ ನಂತರ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಕೋರ್ಟ್‌ ಹೇಳಿದ್ದೇನು ?

ತಂತ್ರಜ್ಞಾನದ ಅರಿವನ್ನು ಪರೀಕ್ಷಾ ಪ್ರಕ್ರಿಯೆ ಹಾಳು ಮಾಡಲು ಬಳಸಿಕೊಂಡ ವಿದ್ಯಾರ್ಥಿಗಳು ಸಿಬಿಎಸ್‌ಸಿ ಮಂಡಳಿ ಕಣ್ಣಿಗೆ ಮಣ್ಣೆರಚಿದ್ದಾರೆ. ರಾತ್ರಿ ಇಡೀ ನಿದ್ದೆಗೆಟ್ಟು ಓದಿದ್ದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜತೆಗೆ ಅನರ್ಹರಿಗೆ ವೈದ್ಯ ಸೀಟು ದೊರೆಯುವುದನ್ನು ತಪ್ಪಿಸಲು ಅನಿವಾರ್ಯವಾಗಿ ಹಿಂದಿನ ಪರೀಕ್ಷೆಯನ್ನು ರದ್ದು ಪಡಿಸಬೇಕಾಯಿತು ಎಂದು ಕೋರ್ಟ್‌ ಹೇಳಿದೆ.

ಅಕ್ರಮ ಏನು ?

ದೇಶದ ನಾನಾ ಕೇಂದ್ರಗಳಲ್ಲಿ ನಡೆದ ಎಐಪಿಎಂಟಿ 2015 ಪರೀಕ್ಷೆ ವೇಳೆ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಒಯ್ದಿದ್ದರು. ಅದರ ಮೂಲಕ ವಿದ್ಯಾರ್ಥಿಗಳಿಗೆ ಹೊರಗಿನಿಂದ ಉತ್ತರಗಳನ್ನು ಕಳುಹಿಸಲಾಗಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ