ಆ್ಯಪ್ನಗರ

ಚಿದು ವಿರುದ್ಧ ಪಿಐಎಲ್: ವಿಚಾರಣೆಗೆ ಸುಪ್ರೀಂ ಅಸ್ತು

ಇಶ್ರಾತ್ ಜಹಾನ್ ಎನ್‌ಕೌಂಟರ್ ಅಸಾಂವಿಧಾನಿಕ ಎಂದು ಘೋಷಿಸಿದ್ದ ಮಾಜಿ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತರಕ್ಷಣಾ ಅರ್ಜಿ ಸಲ್ಲಿಸಲಾಗಿದೆ.

ಏಜೆನ್ಸೀಸ್ 2 Mar 2016, 4:33 am
ಹೊಸದಿಲ್ಲಿ: ಇಶ್ರಾತ್ ಜಹಾನ್ ಎನ್‌ಕೌಂಟರ್ ಅಸಾಂವಿಧಾನಿಕ ಎಂದು ಘೋಷಿಸಿದ್ದ ಮಾಜಿ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತರಕ್ಷಣಾ ಅರ್ಜಿ ಸಲ್ಲಿಸಲಾಗಿದೆ.
Vijaya Karnataka Web supreme court to hear plea against p chidambaram on ishrat jahan
ಚಿದು ವಿರುದ್ಧ ಪಿಐಎಲ್: ವಿಚಾರಣೆಗೆ ಸುಪ್ರೀಂ ಅಸ್ತು


ವಕೀಲ ಎಂ. ಎಲ್. ಶರ್ಮಾ ಸಲ್ಲಿಸಿರುವ ಅರ್ಜಿ ಪರಿಶೀಲನೆ ನಡೆಸಿದ, ಮುಖ್ಯನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾ. ಉದಯ್ ಲಲಿತ್ ವಿಚಾರಣೆಗೆ ಸ್ವೀಕರಿಸಿದರು. ಇಶ್ರತ್ ಜಹಾನ್ ಪ್ರಕರಣದಲ್ಲಿ, ಚಿದಂಬರಂ ಸುಪ್ರೀಕೋರ್ಟ್ ಮತ್ತು ಹೈಕೋರ್ಟ್‌ಗೆ ಸುಳ್ಳು ಹೇಳಿ ಹಾದಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೇಸ್ ಖುಲಾಸೆಗೆ ಅರ್ಜಿ: ಇನ್ನೊಂದೆಡೆ, ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಡೇವಿಡ್ ಹೆಡ್ಲಿ ಸಾಕ್ಷ್ಯದ ಆಧಾರದ ಮೇಲೆ, ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್ ವಜಾಗೊಳಿಸುವಂತೆ ಗುಜರಾತ್ ಪೊಲೀಸರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

ವಕೀಲ ಎಂಎಲ್ ಶರ್ಮಾ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟ್ ವಿಚಾರಣೆಗೆ ಅಸ್ತು ಎಂದಿದೆ. ಇಶ್ರತ್ ಜಹಾನ್, ಲಷ್ಕರೆ ತಯ್ಬಾ ಸಂಘಟನೆಯ ಭಯೋತ್ಪಾದಕಿಯಾಗಿದ್ದಳು ಎಂದು ಉಗ್ರ ಡೆವಿಡ್ ಕೊಲ್ಮನ್ ಹೆಡ್ಲಿ ಸಾಕ್ಷ್ಯ ನುಡಿದಿದ್ದರು. ಇದನ್ನು ಪರಿಗಣಿಸಿ, ನಮ್ಮ ಮೇಲಿರುವ ನಕಲಿ ಎನ್‌ಕೌಂಟರ್ ಆರೋಪ ಹಾಗೂ ನಮ್ಮೆಲ್ಲರ ವಿರುದ್ಧ ದಾಖಲಾಗಿರು ಕ್ರಿಮಿನಲ್ ಪ್ರಕರಣಗಳನ್ನು ಕೈ ಬಿಡುವಂತೆ ಗುಜರಾತ್ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳಾದ ಟಿ.ಎಸ್ ಠಾಕೂರ್ ಮತ್ತು ಯು.ಯು ಲಲಿತ್ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಆಗಿನ ಗುಜರಾತ್ ಡಿಐಜಿ ವಂಜಾರಾ ಸಹ ಅರ್ಜಿದಾರರ ಲಿಸ್ಟ್‌ನಲ್ಲಿದ್ದಾರೆ. ಪ್ರಸ್ತುತ ಅವರು, ಮುಂಬಯಿ ಹೈಕೋರ್ಟ್‌ನಲ್ಲಿ ಎನ್‌ಕೌಂಟರ್ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ.

ಹಿನ್ನೆಲೆ: ಆಗಿನ ಸಿಎಂ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಇಶ್ರಾತ್ ಜಹಾನ್ ಸೇರಿದಂತೆ ಒಟ್ಟು ನಾಲ್ವರನ್ನು ಜೂನ್ 15, 2004 ರಂದು ಅಹಮದಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು. ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದ್ದು, ನಾನಾ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ