ಆ್ಯಪ್ನಗರ

ಶಾರದಾ ಚಿಟ್‌ಫಂಡ್ ಹಗರಣ: ಸಿಬಿಐ ವರದಿಯಲ್ಲಿ 'ಅತ್ಯಂತ ಗಂಭೀರ' ವಿಷಯಗಳಿವೆ: ಸುಪ್ರೀಂ ಕೋರ್ಟ್

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, 'ಕೆಲವು ಅತ್ಯಂತ ಗಂಭೀರ ವಾಸ್ತವಗಳು' ಸಿಬಿಐ ವರದಿಯಲ್ಲಿದ್ದು, ತಾನು 'ಕಣ್ಣು ಮುಚ್ಚಿ' ಕೂರಲಾರೆ ಎಂದು ಹೇಳಿದೆ. ಕುಮಾರ್ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಿ ಇನ್ನೊಂದು ಅರ್ಜಿ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೇಶನ ನೀಡಿದೆ.

Vijaya Karnataka Web 26 Mar 2019, 11:28 pm

ಹೈಲೈಟ್ಸ್‌:

ಕೋಲ್ಕತದ ಮಾಜಿ ಪೊಲೀಸ್ ಕಮಿಷನರ್‌ ವಿರುದ್ಧ ಸಿಬಿಐ ಸಲ್ಲಿಸಿದ ಇತ್ತೀಚಿನ ವರದಿಯಲ್ಲಿ 'ಅತ್ಯಂತ, ಅತ್ಯಂತ ಗಂಭೀರ ವಿಷಯಗಳಿವೆ' ಎಂದ ಸುಪ್ರೀಂ ಕೋರ್ಟ್‌ಮೊಹರಾದ ಲಕೋಟೆಯಲ್ಲಿ ಸಿಬಿಐ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಎದುರು ಪಕ್ಷದ ಅಹವಾಲು ಆಲಿಸದೆ ಯಾವುದೇ ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಕೋಲ್ಕತದ ಮಾಜಿ ಪೊಲೀಸ್ ಕಮಿಷನರ್‌ ರಾಜೀವ್ ಕುಮಾರ್ ವಿರುದ್ಧ ಸಿಬಿಐ ಇತ್ತೀಚೆಗೆ ನಡೆಸಿದ ತನಿಖಾ ವರದಿಯಲ್ಲಿ 'ಅತ್ಯಂತ ಗಂಭೀರ ಅಂಶಗಳು' ಇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, 'ಕೆಲವು ಅತ್ಯಂತ ಗಂಭೀರ ವಾಸ್ತವಗಳು' ಸಿಬಿಐ ವರದಿಯಲ್ಲಿದ್ದು, ತಾನು 'ಕಣ್ಣು ಮುಚ್ಚಿ' ಕೂರಲಾರೆ ಎಂದು ಹೇಳಿದೆ. ಕುಮಾರ್ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಿ ಇನ್ನೊಂದು ಅರ್ಜಿ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೇಶನ ನೀಡಿದೆ.

ಪಶ್ಚಿಮ ಬಂಗಾಳ ಸರಕಾರ ಈ ಹಗರಣದ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ಎಸ್‌ಐಟಿ (ವಿಶೇಷ ತನಿಖಾ ದಳ) ಮುಖ್ಯಸ್ಥರಾಗಿದ್ದ ರಾಜೀವ್ ಕುಮಾರ್‌ ವಿರುದ್ಧ ಮಹತ್ವದ ದಾಖಲೆಗಳನ್ನು ನಾಶಪಡಿಸಿದ ಆರೋಪ ಕೇಳಿ ಬಂದಿತ್ತು. ಇದೇ ನೆಲೆಯಲ್ಲಿ ಸಿಬಿಐ ಅವರ ವಿಚಾರಣೆ ನಡೆಸಿತ್ತು.

ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ಸಂಜೀವ್ ಕುಮಾರ್‌ ಅವರಿದ್ದ ನ್ಯಾಯಪೀಠ, ಅರ್ಜಿ ಸಲ್ಲಿಸಲು ಸಿಬಿಐಗೆ 10 ದಿನಗಳ ಕಾಲಾವಕಾಶ ನೀಡಿದೆ.

ಕುಮಾರ್ ಮತ್ತು ಇತರರು ಸಿಬಿಐ ಅರ್ಜಿಗೆ 7 ದಿನಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಬಹುದಾಗಿದೆ.

ಮೊಹರು ಮಾಡಿದ ಲಕೋಟೆಯಲ್ಲಿ ಸಿಬಿಐ ವರದಿ ಸಲ್ಲಿಸಿದ್ದು, ಮತ್ತೊಂದು ಕಡೆಯ ವಾದವನ್ನು ಆಲಿಸದೆ ಯಾವುದೇ ಆದೇಶ ನೀಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಪಶ್ಚಿಮ ಬಂಗಾಳ ಡಿಜಿಪಿ ಸೇರಿದಂತೆ ರಾಜ್ಯ ಸರಕಾರದ ಹಲವು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಿಬಿಐ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ