ಆ್ಯಪ್ನಗರ

ಮದ್ಯ ಹೋಮ್‌ ಡೆಲಿವರಿಗೆ ಸುಪ್ರೀಂ ಕೋರ್ಟ್‌ ಸಲಹೆ

ಲಾಕ್‌ಡೌನ್‌ ಅವಧಿಯಲ್ಲಿಮದ್ಯ ಮಾರಾಟ ಮಾಡುವ ನಿರ್ಧಾರವು ಸರಕಾರದ ವಿವೇಚನೆಗೆ ಸಂಬಂಧಿಸಿದ್ದು. ಸಂವಿಧಾನದ 32ನೇ ಪರಿಚ್ಛೇದದಡಿ ಅದನ್ನು ಪ್ರಮಾದ ಎಂದು ಪರಿಗಣಿಸಲಾಗಿದು.

Vijaya Karnataka Web 8 May 2020, 9:14 pm
ಹೊಸದಿಲ್ಲಿ: ಕೊರೊನಾ ಸೋಂಕು ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದು ಈ ದಿಸೆಯಲ್ಲಿಮದ್ಯದಂಗಡಿಗಳ ಮುಂದೆ ಜನಜಂಗುಳಿ ತಪ್ಪಿಸಲು ನೇರ ಸಂಪರ್ಕ ಇಲ್ಲದ ರೀತಿಯಲ್ಲಿಅಥವಾ ಆನ್‌ಲೈನ್‌ ಮೂಲಕ ಮನೆಗಳಿಗೆ ಮದ್ಯ ತಲುಪಿಸುವ ಪರ್ಯಾಯ ವ್ಯವಸ್ಥೆ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸಲಹೆ ನೀಡಿದೆ.
Vijaya Karnataka Web ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್


ಲಾಕ್‌ಡೌನ್‌ ಅವಧಿಯಲ್ಲಿ ನೇರ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ ಕಿಶನ್‌ ಕೌಲ್‌ ಮತ್ತು ಬಿ.ಆರ್‌.ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠ, ಈ ಸಲಹೆ ನೀಡಿತು.

ಲಾಕ್‌ಡೌನ್‌ ಅವಧಿಯಲ್ಲಿಮದ್ಯ ಮಾರಾಟ ಮಾಡುವ ನಿರ್ಧಾರವು ಸರಕಾರದ ವಿವೇಚನೆಗೆ ಸಂಬಂಧಿಸಿದ್ದು. ಸಂವಿಧಾನದ 32ನೇ ಪರಿಚ್ಛೇದದಡಿ ಅದನ್ನು ಪ್ರಮಾದ ಎಂದು ಪರಿಗಣಿಸಲಾಗಿದು. ಆದರೆ, ಸೋಂಕು ಹರಡುವುದನ್ನು ನಿಯಂತ್ರಿಸಲು ಜನಜಂಗುಳಿ ಸೇರುವುದನ್ನು ತಪ್ಪಿಸಬೇಕಿದೆ ಎನ್ನುವ ವಾದ ಸರಿಯಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರಗಳು ಆನ್‌ಲೈನ್‌ ಮೂಲಕ ಮದ್ಯವನ್ನು ಹೋಮ್‌ ಡೆಲಿವರಿ ಕೊಡುವ ಬಗ್ಗೆ ಬೇಕಾದರೆ ಪರಿಶೀಲಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಈ ಕುರಿತು ಯಾವುದೇ ಆದೇಶ ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿತು.

ದೇಶಾದ್ಯಂತ 70,000 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಈವರೆಗೆ 5 ಕೋಟಿಗಿಂತ ಹೆಚ್ಚಿನ ಜನರಿಗೆ ನೇರ ಮದ್ಯ ಮಾರಾಟವಾಗಿದೆ. ಈ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಿರುವುದರಿಂದ ಕೋವಿಡ್‌ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವಕೀಲ ಸಾಯಿ ದೀಪಕ್‌ ತಕರಾರು ಅರ್ಜಿಯಲ್ಲಿಆತಂಕ ವ್ಯಕ್ತಪಡಿಸಿದ್ದರು.

''ಇದಕ್ಕೆ ನಾವೇನು ಮಾಡಲು ಸಾಧ್ಯ? ಸರಕಾರದ ಕ್ರಮವನ್ನು ತಡೆಯಲಾಗದು. ಆದರೆ, ನಿಮ್ಮ ಆತಂಕದಲ್ಲಿ ಹುರುಳಿರುವುದರಿಂದ ರಾಜ್ಯ ಸರಕಾರಗಳಿಗೆ ಪರ್ಯಾಯ ಕ್ರಮ ಕೈಗೊಳ್ಳಲು ಸಲಹೆ ಮಾಡಬಹುದು. ಹೋಮ್‌ ಡೆಲಿವರಿ ಅಥವಾ ನೇರ ಸಂಪರ್ಕಕ್ಕೆ ಬಾರದ ರೀತಿಯಲ್ಲಿ ಮದ್ಯ ಮಾರಲು ಸಾಧ್ಯವೇ ಎಂದಷ್ಟೇ ಹೇಳಬಹುದು. ಈ ದಿಸೆಯಲ್ಲಿಚರ್ಚೆ ನಡೆದಿರುವ ಬಗ್ಗೆಯೂ ನಮಗೆ ಅರಿವಿದೆ,'' ಎಂದು ನ್ಯಾಯಮೂರ್ತಿಗಳು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ