ಆ್ಯಪ್ನಗರ

ಆರ್ಥಿಕವಾಗಿ ಸದೃಢ ಹಿಂದುಳಿದವರಿಗೆ ಮೀಸಲು ಬೇಡ: ಸುಶೀಲ್‌ ಕುಮಾರ್‌ ಶಿಂದೆ

ಮೀಸಲು ವಿಚಾರ ಈಗ ಮತ್ತೆ ಗರಿಗೆದರಿದೆ.

Vijaya Karnataka Web 27 Nov 2017, 8:10 pm
ನಾಗಪುರ: ಆರ್ಥಿಕವಾಗಿ ಸದೃಢವಾಗಿರುವ ಹಿಂದುಳಿದ ವರ್ಗದವರು ಮೀಸಲು ಪಡೆಯಬಾರದು. ಇದರಿಂದ ಬೇರೆಯವರಿಗೆ ಅವಕಾಶ ನೀಡಿದಂತಾಗುತ್ತದೆ. ಅಂಬೇಡ್ಕರ್‌ ಕೂಡ ಇದೇ ವಾದವನ್ನು ಮಂಡಿಸುತ್ತಿದ್ದರು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಶಿಂದೆ ತಿಳಿಸಿದ್ದಾರೆ.
Vijaya Karnataka Web sushil kumar shinde on reservation
ಆರ್ಥಿಕವಾಗಿ ಸದೃಢ ಹಿಂದುಳಿದವರಿಗೆ ಮೀಸಲು ಬೇಡ: ಸುಶೀಲ್‌ ಕುಮಾರ್‌ ಶಿಂದೆ


ಮೀಸಲು ವಿಚಾರ ಈಗ ಮತ್ತೆ ಗರಿಗೆದರಿದ್ದು, ಶಿಂದೆ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ನಾಗಪುರದಲ್ಲಿ ನಡೆದ ಖ್ಯಾತ ಮರಾಠಿ ಸಾಹಿತಿ ಪ್ರೊ. ದತ್ತ ಭಗತ್‌ ಅವರಿಗೆ ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಮಾತನಾಡಿದ ಕೇಂದ್ರದ ಮಾಜಿ ಸಚಿವರೂ ಆಗಿದ್ದ ಶಿಂದೆ, ಆರ್ಥಿಕವಾಗಿ ಸದೃಢರಾಗಿದ್ದವರಿಗೆ ಮೀಸಲು ಅಗತ್ಯವಿಲ್ಲ. ನಾನು ಕೂಡ ಯಾವುದೇ ಸಮಯದಲ್ಲೂ ಮೀಸಲಾತಿ ಪಡೆದಿರಲಿಲ್ಲ. ಡಾ. ಅಂಬೇಡ್ಕರ್ ಅವರು ಕೂಡ ಇದನ್ನೇ ಪ್ರತಿಪಾದಿಸಿದ್ದರು. ಆತ್ಮಗೌರವದಿಂದ ಬಾಳಬೇಕು ಎಂಬುದರ ಕುರಿತು ಬೋಧನೆ ಮಾಡಿದ್ದರು ಎಂದರು.

ಕೆಲವು ದಶಕಗಳ ಹಿಂದೆ ಅಸ್ಪೃಶ್ಯತೆ ಇದ್ದಾಗ ಮೀಸಲಾತಿ ಅವಶ್ಯಕತೆ ಇತ್ತು. ಆದರೆ ಕಾಲಾನುಕ್ರಮದಲ್ಲಿ ಹಿಂದುಳಿದವರು ಸಾಕಷ್ಟು ಮುಂದೆ ಬಂದಿದ್ದಾರೆ. ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಅವರೆಲ್ಲರೂ ಈಗ ಕೆನೆಪದರದಲ್ಲಿದ್ದಾರೆ. ಇಂಥವರು ಕೂಡ ಮೀಸಲು ಪಡೆಯುತ್ತಿರುವುದು ವಿಪರ್ಯಾಸ. ತೀರಾ ಹಿಂದುಳಿದವರು ಈಗ ಮೀಸಲು ಅಪೇಕ್ಷಿಸುತ್ತಿದ್ದಾರೆ ಅಂಥವರಿಗೆ ನೀಡಬೇಕು ಎಂದು ಶಿಂದೆ ತಿಳಿಸಿದರು.

ಈ ಹಿಂದೆ ವೃತ್ತಿ ಧರ್ಮದ ಮೂಲಕ ಜಾತಿಯನ್ನು ಗುರುತಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಯಾರು ಯಾವ ಕೆಲಸವನ್ನು ಬೇಕಾದರೂ ಮಾಡುತ್ತಾರೆ ಎಂದು ಶಿಂದೆ ವಿಶ್ಲೇಷಿಸಿದರು.

ಮೂಲ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ