ಆ್ಯಪ್ನಗರ

ನನ್ನ ಜನ್ಮದಿನದಂದು ಇಷ್ಟದ ಕೇಕ್‌ ತರಲು ಸುಷ್ಮಾ ಮರೆಯುತ್ತಲೇ ಇರಲಿಲ್ಲ: ಅಡ್ವಾಣಿ

ರಾಜಕೀಯ ಭೀಷ್ಮ ಎಲ್‌ಕೆ ಅಡ್ವಾಣಿ, ಸುಷ್ಮಾ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಡ್ವಾಣಿ ಹುಟ್ಟು ಹಬ್ಬದ ದಿನ, ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ಅಡ್ವಾಣಿ ನೆನಪಿಸಿಕೊಂಡಿದ್ದಾರೆ. ಸುಷ್ಮಾ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಅವರು ತೀವ್ರ ದುಃಖತಪ್ತರಾದರು.

THE ECONOMIC TIMES 7 Aug 2019, 12:46 pm
ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ, ರಾಜಕೀಯ ಭೀಷ್ಮ ಲಾಲ್‌ ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್‌ ಅವರ ಹಠಾತ್‌ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Vijaya Karnataka Web sushma


ಅತ್ಯಂತ ಆಪ್ತ ಸಹೋದ್ಯೋಗಿಯಾಗಿಯಲ್ಲಿ ಒಬ್ಬರಾಗಿದ್ದ ಅವರು, 80ರ ದಶಕದಲ್ಲಿ ಪಕ್ಷಕ್ಕೆ ಸೇರಿದ್ದ ಯುವ ಪಡೆಯಲ್ಲಿ ಒಬ್ಬರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಅಗಲಿದ ನಾಯಕಿ ಸುಷ್ಮಾ ಸ್ವರಾಜ್‌ಗೆ ರಾಷ್ಟ್ರಪತಿ, ಪ್ರಧಾನಿ ಅಂತಿಮ ನಮನ, ಸಂಜೆ ಅಂತ್ಯಕ್ರಿಯೆ


ಅತ್ಯಂತ ಚುರುಕಿನ ಹೆಣ್ಣುಮಗಳಾಗಿದ್ದ ಅವರು, ಅತ್ಯಂತ ಕಡಿಮೆ ಸಮಯದಲ್ಲಿ ಪಕ್ಷದ ಪ್ರಮುಖ ನಾಯಕರ ಪಟ್ಟಿಯಲ್ಲಿ ಸೇರಿದ್ದರು. ಪಕ್ಷ ನಿಷ್ಠೆ ಹಾಗೂ ಕರ್ತವ್ಯದ ಕಡೆಗೆ ಅವರಿಗಿದ್ದ ಬದ್ಧತೆ ಎಲ್ಲರಿಗೂ ಮಾದರಿ. ಎಲ್ಲ ಮಹಿಳೆಯರಿಗೆ ಆಕೆ ಅನುಕರಣೀಯರು ಎಂದು ಅಡ್ವಾಣಿ ಹೇಳಿದ್ದಾರೆ.

ನನ್ನ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್‌ ಅವರ ಹಠಾತ್‌ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ.
ವಾಗ್ಮಿ, ವಾಕ್ಚತುರೆಯಾಗಿದ್ದ ಅವರು, ವಿಚಾರಗಳನ್ನು ಅತ್ಯಂತ ಸ್ಪಷ್ಟ ಹಾಗೂ ಸ್ಫುಟವಾದ ಶಬ್ಧಗಳಿಂದ ತಿಳಿಸುವ ಶಕ್ತಿ ಹೊಂದಿದ್ದರು. ಬಿಜೆಪಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಅವರು ಬಿಜೆಪಿ ಸೇರಿ, ಆ ಬಳಿಕ ಪಕ್ಷಕ್ಕೆ ತೋರಿದ ನಿಷ್ಠೆ ಎಂದಿಗೂ ಅಜರಾಮರ ಎಂದು ಅಡ್ವಾಣಿ ಹೇಳಿದ್ದಾರೆ.

ಅಗಲುವ 1 ಗಂಟೆ ಮುನ್ನ ಸುಷ್ಮಾ 1 ರೂ. ಫೀಸು ಪಡೆಯುವಂತೆ ವಿನಂತಿಸಿದ್ದರು: ಹರೀಶ್‌ ಸಾಳ್ವೆ

ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬದ ದಿನ, ನನಗಿಷ್ಟವಾದ ಚಾಕಲೇಟ್‌ ಕೇಕ್‌ ತಂದು, ಶುಭಾಶಯ ಕೋರುತ್ತಿದ್ದ ಸುಷ್ಮಾ ಇನ್ನಿಲ್ಲ ಎಂಬುದೇ ಬೇಸರದ ಸಂಗತಿ. ಎಲ್ಲರಲ್ಲೂ ವಿನಯ ಹಾಗೂ ಪ್ರೀತಿಯಿಂದ ಕಾಣುತ್ತಿದ್ದ ಸುಷ್ಮಾ ಅವರನ್ನು ನಾಡು ಮರೆಯಲಾರದು. ಅವರ ಅಗಲಿಕೆಯಿಂದ ದೇಶ ಅಪ್ರತಿಮ ನಾಯಕಿಯನ್ನು ಕಳೆದುಕೊಂಡಿದೆ. ನಾನು ಸುಷ್ಮಾ ಅವರನ್ನು ತುಂಬಾ ನೆನಪಿಸಿಕೊಳ್ಳಲಿದ್ದೇನೆ. ಅವರ ಅಗಲಿಕೆ ತೀರಾ ನೋವು ತಂದಿದೆ ಎಂದು ಅಡ್ವಾಣಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ