ಆ್ಯಪ್ನಗರ

ಅಕ್ರಮ ಮುಚ್ಚಿಟ್ಟ ಆರೋಪದಲ್ಲಿ ಪಿಎಂಸಿ ಬ್ಯಾಂಕ್‌ ಮಾಜಿ ಎಂಡಿ ಬಂಧನ

ಥಾಮಸ್‌ ಅವರಿಗೆ ವಿಚಾರಣೆಗೆ ಬರುವಂತೆ ಮುಂಬಯಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ದಳ(ಇಒಡಬ್ಲ್ಯು) ಸಮನ್ಸ್‌ ನೀಡಿತ್ತು.

PTI 5 Oct 2019, 5:00 am
ಮುಂಬಯಿ: ಪಂಜಾಬ್‌ ಮಹಾರಾಷ್ಟ್ರ ಕೋಆಪರೇಟಿವ್‌(ಪಿಎಂಸಿ) ಬ್ಯಾಂಕ್‌ನಲ್ಲಿನ 4,355 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌ ಅವರನ್ನು ಮುಂಬಯಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಥಾಮಸ್‌ ಅವರಿಗೆ ವಿಚಾರಣೆಗೆ ಬರುವಂತೆ ಮುಂಬಯಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ದಳ(ಇಒಡಬ್ಲ್ಯು) ಸಮನ್ಸ್‌ ನೀಡಿತ್ತು. ವಿಚಾರಣೆ ಬಳಿಕ ಥಾಮಸ್‌ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿನಡೆದ 6,500 ಕೋಟಿ ರೂ. ಅವ್ಯವಹಾರವನ್ನು ಮುಚ್ಚಿಟ್ಟಿದ್ದನ್ನು ಜಾಯ್‌ ಥಾಮಸ್‌ ತಪ್ಪೊಪ್ಪಿಗೆಯಲ್ಲಿಬಹಿರಂಗಪಡಿಸಿದ್ದರು. ಬ್ಯಾಂಕ್‌ನ 6 ಮಂದಿ ಅಧಿಕಾರಿಗಳು 21,049 ನಕಲಿ ಖಾತೆಗಳನ್ನು ತೆರೆದಿದ್ದರು ಮತ್ತು 10 ವರ್ಷಗಳ ಕಾಲ ಆರ್‌ಬಿಐಗೆ ತಪ್ಪು ವರದಿ ಸಲ್ಲಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ಚುರುಕಾಗಿದೆ. ಗುರುವಾರವಷ್ಟೇ ಹೌಸಿಂಗ್‌ ಡೆವಲಪ್‌ಮೆಂಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌(ಎಚ್‌ಡಿಐಎಲ್‌) ನಿರ್ದೇಶಕರಾದ ರಾಕೇಶ್‌ ವಾಧ್ವಾನ್‌ ಮತ್ತು ಅವರ ಪುತ್ರ ಸಾರಂಗ್‌ ವಾಧ್ವಾನ್‌ರನ್ನು ಪೊಲೀಸರು ಬಂಧಿಸಿದ್ದರು. ಎಚ್‌ಡಿಐಎಲ್‌ನ 3,500 ಕೋಟಿ ರೂ. ಆಸ್ತಿಯನ್ನು ಇಡಬ್ಲ್ಯು ಮುಟ್ಟುಗೋಲು ಹಾಕಿಕೊಂಡಿದೆ. ಈ ಇಬ್ಬರು ನಿರ್ದೇಶಕರಿಗೆ ಸರಕಾರ ಇತ್ತೀಚೆಗೆ ಲುಕ್‌ ಔಟ್‌ ನೋಟಿಸ್‌ ಹೊರಡಿಸಿತ್ತು.
Vijaya Karnataka Web thomas

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ