ಆ್ಯಪ್ನಗರ

ಗಿಲಾನಿ ದಿಲ್ಲಿ ನಿವಾಸ ಜಪ್ತಿ

ಗಿಲಾನಿ ಅವರು ತಮಗೆ ಇರುವ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಸುಮಾರು 3.62 ಕೋಟಿ ರೂ. ತೆರಿಗೆ ವಂಚಿಸಿದ ಪ್ರಕರಣ ಅವರ ವಿರುದ್ಧ ದಾಖಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 2 Apr 2019, 5:00 am
ಹೊಸದಿಲ್ಲಿ: ತೆರಿಗೆ ವಂಚನೆ ಪ್ರಕರಣದಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಸೈಯದ್‌ ಅಲಿ ಶಾ ಗಿಲಾನಿ ಅವರ ದಿಲ್ಲಿ ನಿವಾಸವನ್ನು ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ಮುಟ್ಟುಗೋಲು ಹಾಕಿದ್ದಾರೆ.
Vijaya Karnataka Web syed ali shah geelanis delhi home seized over alleged tax evasion
ಗಿಲಾನಿ ದಿಲ್ಲಿ ನಿವಾಸ ಜಪ್ತಿ


ಗಿಲಾನಿ ಅವರು ತಮಗೆ ಇರುವ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಸುಮಾರು 3.62 ಕೋಟಿ ರೂ. ತೆರಿಗೆ ವಂಚಿಸಿದ ಪ್ರಕರಣ ಅವರ ವಿರುದ್ಧ ದಾಖಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

1996-97ರಿಂದ 2001-02ರ ವರೆಗಿನ ಅವಧಿಯಲ್ಲಿ ಅವರು ಆದಾಯ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದರು. ಈ ಸಾಲಿನಲ್ಲಿ ಅಪಾರ ಗಳಿಕೆ ಇದ್ದರೂ ಅದನ್ನು ಅವರು ಮುಚ್ಚಿಟ್ಟು ವಂಚನೆ ಎಸಗಿದ್ದರು. ನಂತರ ಹೊರಡಿಸಿದ ನೋಟಿಸ್‌ಗೂ ಅವರು ಸ್ಪಂದಿಸಿರಲಿಲ್ಲ. ಅಂತಿಮ ಕ್ರಮವಾಗಿ ದಕ್ಷಿಣ ದಿಲ್ಲಿಯ ಮಾಳವೀಯ ನಗರದ ಅವರ ನಿವಾಸವನ್ನು ಜಪ್ತಿ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಅಕ್ರಮವಾಗಿ ವಿದೇಶಿ ಕರೆನ್ಸಿ ಹೊಂದಿದ ಮತ್ತೊಂದು ಪ್ರಕರಣದಲ್ಲಿ ಕಳೆದ ತಿಂಗಳಷ್ಟೇ ಗಿಲಾನಿಗೆ ಜಾರಿ ನಿರ್ದೇಶನಾಲಯ 14.40 ಲಕ್ಷ ರೂ. ದಂಡ ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ