ಆ್ಯಪ್ನಗರ

ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗೆ ಜತೆಯಾದ ನಟ ಅಜಿತ್

ತಮಿಳು ಚಿತ್ರನಟ ಅಜಿತ್ ಚೆನ್ನೈನ ಅಣ್ಣಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಜತೆ ಸೇರಿ ಡ್ರೋನ್ ಒಂದನ್ನು ತಯಾರಿಸಿದ್ದು, ಅದು ನಿರಂತರ ಆರು ಗಂಟೆ ಕಾಲ ಹಾರಾಟ ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ.

Samayam Tamil 13 Jul 2018, 8:54 pm
Vijaya Karnataka Web Ajith Student 2
ಚೆನ್ನೈ: ತಮಿಳು ಚಿತ್ರನಟ ಅಜಿತ್ ಚೆನ್ನೈನ ಅಣ್ಣಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಜತೆ ಸೇರಿ ಡ್ರೋನ್ ಒಂದನ್ನು ತಯಾರಿಸಿದ್ದು, ಅದು ನಿರಂತರ ಆರು ಗಂಟೆ ಕಾಲ ಹಾರಾಟ ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ.

ಸಿನಿಮಾರಂಗದಲ್ಲಿ ಥಲಾ ಎಂದು ಕರೆಯಲ್ಪಡುವ ನಟ ಅಜಿತ್, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಡಿಕಲ್ ಎಕ್ಸ್‌ಪ್ರೆಸ್ 2018 ಯುಎವಿ ಚಾಲೆಂಜ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಎಂಐಟಿ ತಂಡದ ವಿದ್ಯಾರ್ಥಿಗಳ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 111 ಕಾಲೇಜುಗಳ ತಂಡಗಳು ಪಾಲ್ಗೊಳ್ಳುತ್ತಿವೆ.


ಅಜಿತ್ ನೇತೃತ್ವದ ತಂಡ ನಿರ್ಮಿಸಿರುವ ಡ್ರೋನ್ ರಕ್ತದ ಮಾದರಿಯನ್ನು ಸಾಗಿಸಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಸಿನಿಮಾದಲ್ಲಿ ಕೋಟಿ ರೂ. ಸಂಭಾವನೆ ಪಡೆಯುವ ನಟ ಅಜಿತ್, ಕಾಲೇಜಿನಲ್ಲಿ ಪ್ರತಿ ದಿನದ ಭೇಟಿಗೆ 1000 ರೂ. ವೇತನ ಪಡೆಯುತ್ತಿದ್ದಾರೆ. ಆ ವೇತನವನ್ನು ಎಂಐಟಿಯ ಬಡಮಕ್ಕಳಿಗೆ ನೀಡಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಫರ್ಧೆಯಲ್ಲಿ ವಿಜೇತರಿಗೆ ಮೊದಲ ಬಹುಮಾನವಾಗಿ 1 ಲಕ್ಷ ರೂ., ಎರಡನೇ ಬಹುಮಾನ 50 ಸಾವಿರ ಮತ್ತು ಮೂರನೇ ಬಹುಮಾನ 25 ಸಾವಿರ ದೊರೆಯಲಿದೆ. ಎಂಐಟಿಯ ದಕ್ಷ ತಂಡ ತಯಾರಿಸಿದ ಡ್ರೋನ್, ಸತತ 6 ಗಂಟೆ ಹಾರಾಟ ನಡೆಸಿರುವುದು ವಿಶೇಷವಾಗಿದೆ. ಅವುಗಳನ್ನು ಮುಂದಿನ ದಿನಗಳಲ್ಲಿ ಸಂಚಾರ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ.

ಮೂಲ ವರದಿ: ಸಮಯಂ ತಮಿಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ