ಆ್ಯಪ್ನಗರ

ತಮಿಳುನಾಡು ಕಾಳ್ಗಿಚ್ಚು: 9 ಚಾರಣಿಗರ ಸಾವು

ತಮಿಳುನಾಡಿನ ಕುರುಂಗಣಿ ಬೆಟ್ಟದಲ್ಲಿ ಭಾನುವಾರ ಸಂಭವಿಸಿದ ಭಾರೀ ಕಾಳ್ಗಿಚ್ಚಿನ ನಡುವೆ ಸಿಕ್ಕಿ ಬಿದ್ದು, ಕನಿಷ್ಠ 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ ಎಂದು ಥೇಣಿ ಜಿಲ್ಲಾಧಿಕಾರಿ ಎಂ. ಪಲ್ಲವಿ ಬಲದೇವ್‌ ತಿಳಿಸಿದ್ದಾರೆ.

TIMESOFINDIA.COM 12 Mar 2018, 12:13 pm
ಚೆನ್ನೈ/ಥೇಣಿ: ತಮಿಳುನಾಡಿನ ಕುರುಂಗಣಿ ಬೆಟ್ಟದಲ್ಲಿ ಭಾನುವಾರ ಸಂಭವಿಸಿದ ಭಾರೀ ಕಾಳ್ಗಿಚ್ಚಿನ ನಡುವೆ ಸಿಕ್ಕಿ ಬಿದ್ದು, ಕನಿಷ್ಠ 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ ಎಂದು ಥೇಣಿ ಜಿಲ್ಲಾಧಿಕಾರಿ ಎಂ. ಪಲ್ಲವಿ ಬಲದೇವ್‌ ತಿಳಿಸಿದ್ದಾರೆ.
Vijaya Karnataka Web tamil nadu forest fire claims lives of nine trekkers
ತಮಿಳುನಾಡು ಕಾಳ್ಗಿಚ್ಚು: 9 ಚಾರಣಿಗರ ಸಾವು


ಚೆನ್ನೈನಿಂದ 24 ಮಂದಿ ಹಾಗೂ ತಿರುಪ್ಪೂರ್‌ನಿಂದ 12 ಮಂದಿ ಕುರುಂಗಣಿ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಭಾಣುವಾರ ಅಪರಾಹ್ನ ಹಬ್ಬಿದ ಕಾಳ್ಗಿಚ್ಚಿನ ನಡುವೆ ಅವರು ಸಿಕ್ಕಿಬಿದ್ದು 9 ಮಂದಿ ಮೃತಪಟ್ಟರು. ಜಿಲ್ಲಾಡಳಿತದ ದುರಂತ ನಿರ್ವಹಣಾ ತಂಡದ ಆಯುಕ್ತ ಡಾ. ಕೆ. ಸತ್ಯಗೋಪಾಲ್‌ ಈ ವಿಷಯ ತಿಳಿಸಿದರು.

ಚೆನ್ನೈನಿಂದ 24 ಮಂದಿ (ಅವರಲ್ಲಿ 23 ಮಂದಿ ಮಹಿಳೆಯರು) ಹಾಗೂ ತಿರುಪ್ಪೂರ್‌ನಿಂದ ಮೂವರು ಮಹಿಳೆಯರು, ಮೂರು ಮಕ್ಕಳು ಸೇರಿದಂತೆ 12 ಮಂದಿ ಚಾರಣಿಗರು ಬೆಟ್ಟವೇರಿದ್ದರು.

ಮೃತರನ್ನು ಶುಭಾ, ಹೇಮಲತಾ, ಪುನೀತಾ, ಅಖಿಲಾ, ಅರುಣ್‌, ವಿಪಿನ್ ದಿವ್ಯಾ, ವಿವೇಕ್‌ ಮತ್ತು ತಮಿಳ್‌ಸೆಲ್ವನ್‌ ಎಂದು ಗುರುತಿಸಲಾಗಿದೆ.

ಬತ್ತಿದ ತೊರೆಯೊಂದರಲ್ಲಿ ರಕ್ಷಣೆ ಪಡೆದುಕೊಳ್ಳಲು ಚಾರಣಿಗರು ಪ್ರಯತ್ನಿಸಿದರು. ಆದರೆ ಒಣಗಿದ ಹುಲ್ಲಿನಿಂದಾಗಿ ಬೆಂಕಿ ಬೇಗನೆ ವ್ಯಾಪಿಸಿತು. ಕೆಲವರು ಹೊಂಡವೊಂದಕ್ಕೆ ಇಳಿದು ರಕ್ಷಣೆ ಪಡೆಯಲು ಯತ್ನಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭಾರತೀಯ ವಾಯುಪಡೆ ತಂಡದ ನೆರವಿನೊಂದಿಗೆ 21 ಮಂದಿಯನ್ನು ರಕ್ಷಿಸಲಾಯಿತು. 8 ಮಂದಿ ಚಾರಣಿಗರನ್ನು ಸರ್ಕಿಟ್‌ ಹೌಸ್‌ಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್‌ ತಿಳಿಸಿದರು. ಎಲ್ಲರಿಗೂ ಕುರುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ಬಳಿಕ ಬೋಧಿ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

TOI photo by K Antony Xavier

ಗಂಭೀರವಾಗಿ ಗಾಯಗೊಂಡ ಐವರಿಗೆ ಥೇಣಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಮತ್ತು ಆರು ಮಂದಿಯನ್ನು ಮದುರೈ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದೆ. ಇನ್ನು ಮೂವರಿಗೆ ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಗಂಭೀರ ಸ್ಥಿತಿಯಲ್ಲಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಗಾಯಾಳುಗಳ ಬಗ್ಗೆ ಮಾಹಿತಿ ನೀಡಲು ಮದುರೈ ರಾಜಾಜಿ ಆಸ್ಪತ್ರೆಯಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ