ಆ್ಯಪ್ನಗರ

ಮೂತ್ರಪಾನ ಮಾಡಿದ ತ.ನಾಡು ರೈತರು!

ಚಿತ್ರವಿಚಿತ್ರ ಪ್ರತಿಭಟನೆಗಳಿಂದ ಕೇಂದ್ರದ ಗಮನ ಸೆಳೆಯಲು ಯತ್ನಿಸುತ್ತಿರುವ ತಮಿಳುನಾಡು ರೈತರು, ಶನಿವಾರ ಸ್ವಮೂತ್ರ ಪಾನ ಮಾಡುವ ಮೂಲಕ ಪ್ರತಿಭಟನೆ ದಾಖಲಿಸಿದರು...

Agencies 23 Apr 2017, 8:00 am

ಹೊಸದಿಲ್ಲಿ: ಚಿತ್ರವಿಚಿತ್ರ ಪ್ರತಿಭಟನೆಗಳಿಂದ ಕೇಂದ್ರದ ಗಮನ ಸೆಳೆಯಲು ಯತ್ನಿಸುತ್ತಿರುವ ತಮಿಳುನಾಡು ರೈತರು, ಶನಿವಾರ ಸ್ವಮೂತ್ರ ಪಾನ ಮಾಡುವ ಮೂಲಕ ಪ್ರತಿಭಟನೆ ದಾಖಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿರುವ ಪಿ.ಅಯ್ಯಕಣ್ಣು ಮಾತನಾಡಿ, ''ಕೇಂದ್ರ ಸರಕಾರ ನಮಗೆ ನೀರು ಕೊಡುತ್ತಿಲ್ಲ. ಹೀಗಾಗಿ, ಮೂತ್ರವನ್ನೇ ಕುಡಿಯುತ್ತಿದ್ದೇವೆ,'' ಎಂದರು.

ಕಳೆದ 39 ದಿನಗಳ ಧರಣಿಯಲ್ಲಿ ಅರ್ಧ ತಲೆಕೂದಲು ಹಾಗೂ ಅರ್ಧ ಗಡ್ಡ ಬೋಳಿಸಿ, ಬಾಯಿಯಲ್ಲಿ ಸತ್ತ ಇಲಿ, ಹಾವುಗಳನ್ನಿಟ್ಟುಕೊಂಡು, ಅಣಕು ಶವಸಂಸ್ಕಾರ ನಡೆಸಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಅಸ್ತಿಪಂಜರ ಪ್ರದರ್ಶನ, ನಗ್ನ ಪ್ರತಿಭಟನೆ ಸೇರಿದಂತೆ ಹಲವು ರೀತಿಯಾಗಿ ಸರಕಾರದ ಗಮನ ಸೆಳೆಯಲು ರೈತರು ಯತ್ನಿಸಿದ್ದಾರೆ.

...............

ಶುಕ್ರವಾರವಷ್ಟೇ ಕೇಂದ್ರವು ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಮೂತ್ರ ಕುಡಿಯುವುದಾಗಿ ಹೇಳಿದ್ದ ರೈತರು, ಶನಿವಾರ ಅದನ್ನು ಪೋಲೀಸರ ವಿಫಲ ತಡೆಯತ್ನದ ನಡುವೆಯೇ ಕಾರ್ಯರೂಪಕ್ಕಿಳಿಸಿದ್ದಾರೆ.

ಸಾಲಮನ್ನಾ, ಬರ ಪರಿಹಾರ ಪ್ಯಾಕೇಜ್‌ ತಿದ್ದುಪಡಿ ಹಾಗೂ ತಮ್ಮ ಬೆಳೆಗಳಿಗೆ ಉತ್ತಮ ದರ ನಿಗದಿಗೊಳಿಸುವ ಬೇಡಿಕೆಗಳನ್ನಿಟ್ಟುಕೊಂಡು ರೈತರು ಧರಣಿ ಕೂತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ