ಆ್ಯಪ್ನಗರ

ಪುನರ್ಜನ್ಮಕ್ಕಾಗಿ 12 ದಿನ ಶವವಿಟ್ಟು ಕಾದರು

ಮೃತ ಬಾಲಕನ ಪುನರ್ಜನ್ಮಕ್ಕೆ ಪ್ರಾರ್ಥಿಸುತ್ತಾ ಹನ್ನೆರಡು ದಿನ ಕಾದು ಕುಳಿತ ಕುಟುಂಬ ಕೊನೆಗೂ ಪೊಲೀಸರಿಗೆ ನೀಡಿದ್ದ ಮಾತಿನಂತೆ ಶವ ಸಂಸ್ಕಾರ ನಡೆಸಿದೆ.

Vijaya Karnataka Web 8 Nov 2017, 11:33 am
ಮುಂಬಯಿ: ಮೃತ ಬಾಲಕನ ಪುನರ್ಜನ್ಮಕ್ಕೆ ಪ್ರಾರ್ಥಿಸುತ್ತಾ ಹನ್ನೆರಡು ದಿನ ಕಾದು ಕುಳಿತ ಕುಟುಂಬ ಕೊನೆಗೂ ಪೊಲೀಸರಿಗೆ ನೀಡಿದ್ದ ಮಾತಿನಂತೆ ಶವ ಸಂಸ್ಕಾರ ನಡೆಸಿದೆ.
Vijaya Karnataka Web teen buried after 12 days of prayers for resurrection
ಪುನರ್ಜನ್ಮಕ್ಕಾಗಿ 12 ದಿನ ಶವವಿಟ್ಟು ಕಾದರು


ಸ್ತೋತ್ರ ಪಠಿಸುತ್ತಾ 'ನೀನು ವಾಪಸ್‌ ಬಾ' ಎಂದು ಕೂಗುತ್ತಾ ಚರ್ಚ್‌ನಲ್ಲಿ ಹನ್ನೆರಡು ದಿನ ಕಾದ ಕುಟುಂಬ ಸೆವ್ರಿ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಕೊನೆಗೂ ಅಂತ್ಯಕ್ರಿಯೆ ನಡೆಸಿದೆ.

ಮೆಶಕ್‌ ನೆವಿಸ್‌ ಎಂಬ ಬಾಲಕ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ. ಆತನ ತಂದೆ ಒಕ್ಟವಿಯೊ ನೆವಿಸ್‌ ಅದ್ಭುತ ಶಮನಕಾರಿ ಶಕ್ತಿ ಇದೆ ಎಂದು ಹೇಳಿಕೊಂಡು ಅಂತ್ಯ ಸಂಸ್ಕಾರ ನಡೆಸುವ ಬದಲು ಮೃತದೇಹದ ಎದುರು ಪ್ರಾರ್ಥನೆ ಶುರು ಹಚ್ಚಿಕೊಂಡಿದ್ದರು.

ಬಿಷಪ್‌ ಮತ್ತು ಅನುಯಾಯಿಗಳು ಮೆಶಕ್‌ ಬದುಕಿ ಬರಲೆಂಬ ನಂಬಿಕೆಯೊಂದಿಗೆ ಪ್ರಾರ್ಥನೆ ಮಾಡಿದ್ದು, ಹೆಚ್ಚಿನ ಮಾಧ್ಯಮ ವರದಿಗಳು ಸುಳ್ಳು ಎಂದು ಬಿಷಪ್‌ ನೆವಿಸ್‌ ಹೇಳಿದ್ದಾರೆ. ಕೊನೆಗೆ, ನಾವು ಆತನನ್ನು ನಿನ್ನ ಕೈಗೊಪ್ಪಿಸುತ್ತೇವೆ. ನೀನೇ ಶ್ರೇಷ್ಆ. ಜೀಸಸ್‌ ಕ್ರ್ಐಸ್ತನಿಗೆ ಜಯವಾಗಲಿ ಎಂದು ಬಿಷಪ್‌ ಪಠಿಸಿದ್ದಾರೆ.

ನಾಗ್‌ಪದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸದಿದ್ದಲ್ಲಿ ಮೂಢನಂಬಿಕೆ ವಿರೋಧಿ ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ಕುಟುಂಬದವರಿಗೆ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ