ಆ್ಯಪ್ನಗರ

ಇಂದೋರ್ ಆಸ್ಪತ್ರೆಯಲ್ಲಿ ಎರಡು ಬಾರಿ ಸತ್ತ ಯುವಕ

ವೈದ್ಯರ ನಿರ್ಲಕ್ಷದಿಂದಾಗಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಸಂಪೂರ್ಣ ರಾತ್ರಿ ನರಳಾಡಿ ಮುಂಜಾನೆ ಪ್ರಾಣ ಬಿಟ್ಟಿದ್ದಾನೆ.

TIMESOFINDIA.COM 30 Sep 2018, 2:22 pm
ಇಂದೋರ್: ಜೀವಂತವಾಗಿದ್ದ ಯುವಕನನ್ನು ವೈದ್ಯರು ಸತ್ತಿದ್ದಾನೆ ಎಂದು ಘೋಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಾತ್ರಿ ಇಡೀ ಬದುಕಿದ್ದ ಯುವಕ ದುರದೃಷ್ಟವಶಾತ್ ಬದುಕಿದ್ದಾನೆ ಎಂದು ತಿಳಿದ ಕೆಲ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ.
Vijaya Karnataka Web Kailash


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕೈಲಾಸ್ ಚೌಹಾನ್‌ನನ್ನು ಪರೀಕ್ಷಿಸಿದ್ದ ಇಂದೋರ್‌ನ ಮೈ ಹಾಸ್ಪಿಟಲ್ ವೈದ್ಯರು ಗುರುವಾರ ರಾತ್ರಿ ಆತ ಸತ್ತಿರುವುದಾಗಿ ಘೋಷಿಸಿದ್ದರು. ಆತನ ದೇಹವನ್ನು ಶವಾಗಾರದಲ್ಲಿರಿಸಲಾಗಿತ್ತು.

ಶುಕ್ರವಾರ ಮುಂಜಾನೆ ಆತನ ಪರಿವಾರದವರು ದೇಹವನ್ನು ಕೊಂಡೊಯ್ಯಲು ಬಂದಾಗ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆತನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸ್ವಲ್ಪ ಹೊತ್ತಿನ ಮೊದಲು ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಬದುಕಿದ್ದ ಮಗನಿಗೆ ಸೂಕ್ತ ಚಿಕಿತ್ಸೆ ನೀಡಿ ವೆಂಟಿಲೇಟರ್‌ನಲ್ಲಿಡುವ ಬದಲು ಸತ್ತಿದ್ದಾನೆ ಎಂದು ಶವಾಗಾರದಲ್ಲಿಡಲಾಯಿತು. ಸಂಪೂರ್ಣ ರಾತ್ರಿ ಆತ ಜೀವಂತವಾಗಿದ್ದ. ಸೂಕ್ತ ಚಿಕಿತ್ಸೆ ನೀಡಿದ್ದರೆ ಆತ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷದಿಂದ ಮಗ ಸತ್ತಿದ್ದಾನೆ ಎಂದು ಮೃತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ