ಆ್ಯಪ್ನಗರ

ಮಳೆಗಾಗಿ ನೀರಲ್ಲಿ 8 ತಾಸು ಡಾನ್ಸ್ ಮಾಡಿದ ಬಾಲಕಿ

15 ವರ್ಷದ ಬಾಲಕಿಯೊಬ್ಬಳು ಮಳೆಗಾಗಿ ಸತತ ಎಂಟು ತಾಸು ನೀರಿನಲ್ಲಿ ಡಾನ್ಸ್ ಮಾಡಿದ್ದಾಳೆ.

ಟೈಮ್ಸ್ ಆಫ್ ಇಂಡಿಯಾ 27 Jun 2016, 4:13 pm
ಲಖನೌ: ಬುಂದೇಲ್‌ಖಂಡ್‌ ಮತ್ತು ಉತ್ತರಪ್ರದೇಶದ ಇತರ ಭಾಗಗಳಲ್ಲಿ ರೈತರಿಗೆ ಒಳಿತಾಗಲೆಂದು ಉತ್ತಮ ಮಳೆ ಗಾಗಿ 15 ವರ್ಷದ ಬಾಲಕಿಯೊಬ್ಬಳು ಶನಿವಾರ ರಾತ್ರಿ ಸತತ ಎಂಟು ತಾಸು ನೀರಿನಲ್ಲಿ ಡಾನ್ಸ್ ಮಾಡಿದ್ದಾಳೆ. ಇದು ಇಂಡಿಯನ್ ಬುಕ್ ಆಫ್‌ ರೆಕಾರ್ಡ್ಸ್ ಮತ್ತು ಮಾರ್ವೆಲಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಯತ್ನವೂ ಆಗಿದೆ.
Vijaya Karnataka Web teenager dances in water for 8 hours for rains in bkhand
ಮಳೆಗಾಗಿ ನೀರಲ್ಲಿ 8 ತಾಸು ಡಾನ್ಸ್ ಮಾಡಿದ ಬಾಲಕಿ


15 ವರ್ಷದ ಅಂಕಿತಾ ಬಾಜಪೇಯಿ ಈ ಸಾಧನೆ ಮಾಡಿದ ಬಾಲಕಿ. ಈಕೆ ಈಗಾಗಲೇ ಒಂದು ನಿಮಿಷದಲ್ಲಿ 120 ಕಥಕ್ ಸುತ್ತು ಮತ್ತು ಒಂದು ಮಣ್ಣಿನ ಮಡಕೆ ಮೇಲೆ ಐದು ಗಂಟೆ ನೃತ್ಯ ಮಾಡಿ ಇಂಡಿಯನ್ ಬುಕ್‌ ಆಫ್‌ ರೆಕಾರ್ಡ್ಸ್‌ ನಲ್ಲಿ ಹೆಸರು ದಾಖಲಿಸಿದ್ದಾಳೆ.

ಅಂಕಿತಾ ಮೊಣಕಾಲವರೆಗೆ ನೀರಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಐದು ತಾಸು ಡಾನ್ಸ್ ಮಾಡಲು ನಿರ್ಧರಿಸಿದ್ದಳು. ಸಾರ್ವಜನಿಕರ ಪ್ರೋತ್ಸಾಹದಿಂದ ಎಂಟು ಗಂಟೆಗೆ ವಿಸ್ತರಿಸಿದ್ದಾಳೆ. 'ಈ ಡಾನ್ಸ್‌ಗೆ ಮೊಣಕಾಲು ಮತ್ತು ಪಾದದ ಕೆಳಗಿ ನಿಂದ ಹೆಚ್ಚು ಶಕ್ತಿಯ ಅಗತ್ಯವಿದೆ. ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಅಭ್ಯಾಸದಿಂದ ಇದು ಸಾಧ್ಯವಾಗಿದೆ,' ಎಂದು ಅಂಕಿತಾ ಹೇಳಿದ್ದಾಳೆ.

ಈ ನೃತ್ಯಕ್ಕೆ ಅಂಕಿತಾ ಮಳೆಯನ್ನು ವಸ್ತುವನ್ನಾಗಿ ಹೊಂದಿರುವ 'ಬರ್ಸೊ ರೆ ಮೇಘ' ಗೀತೆ ಆಯ್ಕೆ ಮಾಡಿದ್ದಳು. ಶಾಲಾ ಪ್ರಾಚಾರ್ಯರು ಮತ್ತು ಶಿಕ್ಷಕರು ಕೂಡ ಹಾಜರಿದ್ದು, ಪ್ರೋತ್ಸಾಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ