ಆ್ಯಪ್ನಗರ

ನಾಲ್ಕುವರೆ ವರ್ಷಗಳಲ್ಲಿ ರೈತನಾಗಿ ಬದಲಾದ ತೆಲಂಗಾಣ ಸಿಎಂ ಪುತ್ರ ಕೆಟಿ ರಾಮ್ ರಾವ್

2014 ರಲ್ಲಿ, ಕೆ.ಟಿ.ಆರ್ ತಾವು ವೃತ್ತಿಯಲ್ಲಿ"ಶಾಸಕಾಂಗ ಸಭೆಯ ಸದಸ್ಯ" ಎಂದು ಘೋಷಿಸಿದ್ದರು. ಮತ್ತೀಗ ನಾಲ್ಕುವರೆ ವರ್ಷಗಳಲ್ಲಿ ರೈತನಾಗಿ ಸಹ ಬದಲಾಗಿದ್ದಾರೆ.

TIMESOFINDIA.COM 20 Nov 2018, 11:27 am
ಸಿರಿಸಿಲ್ಲಾ: ತೆಲಂಗಾಣ ಮುಖ್ಯಮಂತ್ರಿ ಕೆ. ಸಿ ಚಂದ್ರಶೇಖರ್ ರಾವ್ ಪುತ್ರ ಕೆ.ಟಿ ರಾಮ ರಾವ್ ಕಳೆದ ನಾಲ್ಕುವರೆ ವರ್ಷಗಳಿಂದ ರೈತನಾಗಿ ಬದಲಾಗಿದ್ದಾರೆ.
Vijaya Karnataka Web K T Ram Rao


ಸೋಮವಾರ ಸಿರಿಸಿಲ್ಲಾ ಕ್ಷೇತ್ರದ ವಿಧಾಸಭಾ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅವರು ತಮ್ಮ ಅಫಿಡವಿಟ್‌ನಲ್ಲಿ ತಾವು ರೈತರು ಮತ್ತು ಮಾಜಿ ಸಚಿವರೆಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ 60 ಲಕ್ಷ ಕೃಷಿ ಆದಾಯವನ್ನು ತೋರಿಸಿದ್ದಾರೆ. 2017-18ರಲ್ಲಿ ಇತರ ಮೂಲಗಳಿಂದ ಅವರ ಆದಾಯ 14.57 ಲಕ್ಷ ರೂ.

2014 ರಲ್ಲಿ, ಕೆ.ಟಿ.ಆರ್ ತಾವು ವೃತ್ತಿಯಲ್ಲಿ"ಶಾಸಕಾಂಗ ಸಭೆಯ ಸದಸ್ಯ" ಎಂದು ಘೋಷಿಸಿದ್ದರು. ಮತ್ತೀಗ ನಾಲ್ಕುವರೆ ವರ್ಷಗಳಲ್ಲಿ ರೈತನಾಗಿ ಸಹ ಗುರುತಿಸಿಕೊಂಡಿದ್ದಾರೆ.

ಎರಡು ವಿಧಾನಸಭಾ ಚುನಾವಣೆಗಳ ನಡುವೆ ಅವರ ಆದಾಯ 40% ರಷ್ಟು ಹೆಚ್ಚಾಗಿದೆ. ಇದರಲ್ಲಿ ಅವರ ಸ್ಥಿರ ಆಸ್ತಿಗಳ ಮಾರುಕಟ್ಟೆಯ ಮೌಲ್ಯದಲ್ಲಾದ ಏರಿಕೆ ಸಹ ಸೇರಿದೆ. ಕೆಟಿಆರ್ ಒಟ್ಟು 5.67 ಕೋಟಿ ಸ್ವತ್ತು ಮತ್ತು ಆದಾಯವನ್ನು ಘೋಷಿಸಿದ್ದಾರೆ. 2014 ರ ಚುನಾವಣೆಯಲ್ಲಿ ಇದು ಸುಮಾರು 4 ಕೋಟಿ ಆಗಿತ್ತು.

ಉದ್ಯಮಿಯಾಗಿರುವ ಅವರ ಪತ್ನಿ ಶೈಲಿಮಾ ಅವರ ಆಸ್ತಿ ಈ ನಾಲ್ಕುವರೆ ವರ್ಷಗಳಲ್ಲಿ 10 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಅವರ ಆಸ್ತಿ 4.20 ಕೋಟಿ ಇತ್ತು. ಮತ್ತೀಗ 4 ಕೋಟಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ