ಆ್ಯಪ್ನಗರ

ಮುಸ್ಲಿಮರ ಓಲೈಸಿರುವ ಕಾಂಗ್ರೆಸ್‌: ತೆಲಂಗಾಣ ಚುನಾವಣೆ ಪ್ರಣಾಳಿಕೆಯಲ್ಲಿ ಮುಸ್ಲಿಮ್‌ ಪರ ಯೋಜನೆಗಳ ಘೋಷಣೆ

ಟೈಮ್ಸ್‌ ನೌಗೆ ಸಿಕ್ಕಿದೆ ಚುನಾವಣೆ ಪ್ರಣಾಳಿಕೆಯ ಕರಡು

Vijaya Karnataka Web 27 Nov 2018, 6:14 pm
ಹೈದರಾಬಾದ್‌: ಶೇಕಡ 90ರಷ್ಟು ಮುಸ್ಲಿಮರು ಮತ ಚಲಾಯಿಸದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲನಾಥ್‌ ವೀಡಿಯೋ ಬಹಿರಂಗವಾದ ಬೆನ್ನಲ್ಲೇ ಮತ್ತೊಂದು ಮುಸ್ಲಿಮ್‌ ಓಲೈಕೆ ಪ್ರಕರಣ ಬಯಲಾಗಿದೆ.
Vijaya Karnataka Web ಕಾಂಗ್ರೆಸ್‌ ಪ್ರಣಾಳಿಕೆ ಕರಡು
ಕಾಂಗ್ರೆಸ್‌ ಪ್ರಣಾಳಿಕೆ ಕರಡು


ತೆಲಂಗಾಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಲಿರುವ ಪ್ರಣಾಳಿಕೆಯಲ್ಲಿ ಸಂಪೂರ್ಣ ಮುಸ್ಲಿಮ್‌ ಪರ ಯೋಜನೆಗಳಿವೆ.

ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್‌ ನೌಗೆ ಚುನಾವಣೆ ಪ್ರಣಾಳಿಕೆಯ ಕರಡು ದೊರೆತಿದ್ದು, ಇದರಲ್ಲಿ ಸಂಪೂರ್ಣ ಮುಸ್ಲಿಮ್‌ ಓಲೈಕೆ ಯೋಜನೆಗಳಿವೆ ಎಂದು ಹೇಳಲಾಗಿದೆ.

ಪ್ರಣಾಳಿಕೆಯಲ್ಲಿರುವ ಪ್ರಕಾರ, ಏಳು ಯೋಜನೆಗಳು ಅಲ್ಪಸಂಖ್ಯಾತರ ಪರವಾಗಿವೆ.

ಮಸೀದಿಗಳು, ಚರ್ಚ್‌ಗಳಿಗೆ ಉಚಿತ ವಿದ್ಯುತ್‌, ಸರಕಾರಿ ಗುತ್ತಿಗೆ ಟೆಂಡರ್‌ನಲ್ಲಿ ಮುಸ್ಲಿಮ್‌ ಯುವಕರಿಗೆ ವಿಶೇಷ ಅವಕಾಶ, ಮುಸ್ಲಿಮ್‌ ಬಡ ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿವರೆಗೂ ಅನುದಾನ, ಮುಸ್ಲಿಮ್‌ ವಿದ್ಯಾರ್ಥಿಗಳಿಗೆ ರೆಸೆಡೆನ್ಷಿಯಲ್‌ ಶಾಲೆ, ಅಲ್ಪಸಂಖ್ಯಾತರಿಗೆ ಆಸ್ಪತ್ರೆ, ಮುಸ್ಲಿಮರಿಗೆ ಜಿಲ್ಲಾ ಆಯ್ಕೆ ಸಮಿತಿ ರಚಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಈ ನಡುವ ತೆಲಂಗಾಣದಲ್ಲಿ ರಚನೆಯಾಗಿರುವ ಪೀಪಲ್ಸ್‌ ಫ್ರಂಟ್‌ (ಕಾಂಗ್ರೆಸ್‌, ತೆಲುಗುದೇಶಂ, ಸಿಪಿಎಂ, ತೆಲಂಗಾಣ ಜನ ಸಮಿತಿ) ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ ಕೂಡ ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ನಡೆಸಿದೆ. ಅದರಲ್ಲಿರುವ ಯೋಜನೆಗಳು ಮುಸ್ಲಿಮ್‌ ಮಯವಾಗಿವೆ.

ಕಾಂಗ್ರೆಸ್‌ನ ಈ ಓಲೈಕೆ ತಂತ್ರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಕೇಂದ್ರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ದೇಶದ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಇಬ್ಭಾಗದ ರಾಜಕಾರಣ ಮಾಡುತ್ತಿದೆ ಎಂದು ನಖ್ವಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ