ಆ್ಯಪ್ನಗರ

ಸ್ಥಳೀಯ ಸಂಸ್ಥೆ ಚುನಾವಣೆ: ತೆಲಂಗಾಣದ ಕೆಸಿಆರ್‌ ಭದ್ರಕೋಟೆಯಲ್ಲಿ ಅರಳಿದ ಕಮಲ

ಒಟ್ಟು 31 ಜಿಲ್ಲೆಯ 534 ಜಿಲ್ಲಾ ಪಂಚಾಯಿತಿ ಪ್ರಾಂತೀಯ ಕ್ಷೇತ್ರಗಳು, 5,659 ಮಂಡಲ ಪಂಚಾಯಿತಿಯಲ್ಲಿ ಚುನಾವಣೆ ನಡೆದಿವೆ. ಈ ಪೈಕಿ ಬಹುತೇಕ ಸೀಟುಗಳು ತೆಲಂಗಾಣ ರಾಷ್ಟ್ರ ಸಮಿತಿ ಪಾಲಿಗೆ ದಕ್ಕಿವೆ.

Vijaya Karnataka Web 4 Jun 2019, 5:44 pm
ಹೈದರಾಬಾದ್‌: ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿರುವ ಬಿಜೆಪಿ ಈಗ ಈಶಾಣ್ಯ ಮತ್ತು ದಕ್ಷಿಣ ರಾಜ್ಯಗಳಲ್ಲೂ ಕಮಲ ಅರಳಿಸುತ್ತಿದೆ.
Vijaya Karnataka Web ಕೆಸಿಆರ್‌, ಕವಿತಾ
ಕೆಸಿಆರ್‌, ಕವಿತಾ


ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ತೆಲಂಗಾಣದ ಸ್ಥಳಿಯ ಸಂಸ್ಥೆ ಚುನಾವಣೆ.

ತೆಲಂಗಾಣ ಮುಖ್ಯಮಂತ್ರಿ, ತೆಲಂಗಾಣ ರಾಷ್ಟ್ರ ಸಮಿತಿ ವರಿಷ್ಠ ನಾಯಕ ಕೆ. ಚಂದ್ರಶೇಖರ್‌ ರಾವ್‌ ಭದ್ರಕೋಟೆಯನ್ನೇ ಬಿಜೆಪಿ ಭೇದಿಸಿದೆ. ತೆಲಂಗಾಣದ ನಿಜಾಮಬಾದ್‌ನಲ್ಲಿ ಚಂದ್ರಶೇಖರ್‌ ರಾವ್‌ ಪುತ್ರಿ ಕವಿತಾಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸೋಲುಣಿಸಿದ್ದರು. ಅದರ ಶಾಕ್‌ನಿಂದ ಹೊರಬರುವ ಮೊದಲೇ ಮತ್ತೊಂದು ಶಾಕ್‌ ಆಗಿದೆ.

ಕೆಸಿಆರ್‌ ಪುತ್ರಿ ಕವಿತಾ ಅವರ ತವರೂರು ನವೆಪೇಟ್‌ ಮಂಡಲದ ಪೊನ್ನಂಗಲ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಆರ್‌ಎಸ್‌ ಅಭ್ಯರ್ಥಿ ವಿರುದ್ಧ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಾಜು 90 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

ಮತ್ತೊಂದು ಶಾಕ್‌ ಎಂದರೆ ಕೆಸಿಆರ್‌ ದತ್ತು ತೆಗೆದುಕೊಂಡ ಕರೀಂ ನಗರ ಜಿಲ್ಲೆಯ ಗ್ರಾಮ ಚಿನ್ನ ಮುಲ್ಕಲೂರುನಲ್ಲಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಟಿಆರ್‌ಎಸ್‌ ಅಭ್ಯರ್ಥಿ ಸೋತಿದ್ದಾರೆ.

ಕೆಸಿಆರ್‌ ಅತ್ತೆ ಮಾವ ಅವರ ಸಿರಿಸಿಲ್ಲಾ ಜಿಲ್ಲೆಯ ಬೊಯೆನಪಲ್ಲಿಯ ಕೊಂಡುರುಪಕದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎದುರು ಟಿಆರ್‌ಎಸ್‌ ಅಭ್ಯರ್ಥಿ ರಜಿತಾ ಸೋಲನುಭವಿಸಿದ್ದಾರೆ.

ಒಟ್ಟು 31 ಜಿಲ್ಲೆಯ 534 ಜಿಲ್ಲಾ ಪಂಚಾಯಿತಿ ಪ್ರಾಂತೀಯ ಕ್ಷೇತ್ರಗಳು, 5,659 ಮಂಡಲ ಪಂಚಾಯಿತಿಯಲ್ಲಿ ಚುನಾವಣೆ ನಡೆದಿವೆ. ಈ ಪೈಕಿ ಬಹುತೇಕ ಸೀಟುಗಳು ತೆಲಂಗಾಣ ರಾಷ್ಟ್ರ ಸಮಿತಿ ಪಾಲಿಗೆ ದಕ್ಕಿವೆ.

ಮೂಲ ವರದಿ: ತೆಲುಗು ಸಮಯಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ