ಆ್ಯಪ್ನಗರ

ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಜೆಡಿಯು ಸೇರಿ 10 ಪಕ್ಷಗಳ ವಿರೋಧ

ಮೇಘಾಲಯ ಮುಖ್ಯಮಂತ್ರಿ ಕನ್ರಾಡ್‌ ಸಂಗ್ಮಾ ಮತ್ತು ಎಜಿಪಿ ಅಧ್ಯಕ್ಷ ಅತುಲ್‌ ಬೋರಾ ಮಂಗಳವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

Vijaya Karnataka 30 Jan 2019, 5:00 am
ಗುವಾಹಟಿ: ಬಿಜೆಪಿಯ ಮಿತ್ರ ಪಕ್ಷಗಳೂ ಸೇರಿದಂತೆ ಹತ್ತು ರಾಜಕೀಯ ಪಕ್ಷಗಳು ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಒಮ್ಮತದ ತೀರ್ಮಾನ ಕೈಗೊಂಡಿವೆ. ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವ ಉದ್ದೇಶದ ಈ ವಿಧೇಯಕ ಈಶಾನ್ಯ ರಾಜ್ಯಗಳ ಸಮಗ್ರ ಒಳಿತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿವೆ.
Vijaya Karnataka Web ten ne political parties jdu oppose citizenship bill
ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಜೆಡಿಯು ಸೇರಿ 10 ಪಕ್ಷಗಳ ವಿರೋಧ


ಮೇಘಾಲಯ ಮುಖ್ಯಮಂತ್ರಿ ಕನ್ರಾಡ್‌ ಸಂಗ್ಮಾ ಮತ್ತು ಎಜಿಪಿ ಅಧ್ಯಕ್ಷ ಅತುಲ್‌ ಬೋರಾ ಮಂಗಳವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

''ಬಹುಪಾಲು ಎಲ್ಲ ರಾಜಕೀಯ ಪಕ್ಷಗಳು ಈ ವಿಧೇಯಕವನ್ನು ವಿರೋಧಿಸಿವೆ. ಅಸ್ಸಾಂ ಸೇರಿದಂತೆ ಈಶಾನ್ಯ ಭಾಗಕ್ಕೆ ವಿಧೇಯಕದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಒಗ್ಗಟ್ಟಿನ ಹೋರಾಟಕ್ಕೆ ನಿರ್ಧರಿಸಲಾಯಿತು,'' ಎಂದು ಸಂಗ್ಮಾ ತಿಳಿಸಿದ್ದಾರೆ. ಲೋಕಸಭೆ ಸಮ್ಮತಿ ಪಡೆದಿರುವ ವಿಧೇಯಕ, ರಾಜ್ಯಸಭೆಯ ಒಪ್ಪಿಗೆಗಾಗಿ ಕಾಯ್ದಿದೆ.

ಸಭೆಯಲ್ಲಿ ಪಾಲ್ಗೊಂಡ ಪ್ರಮುಖು ಪಕ್ಷಗಳು: ಜೆಡಿಯು, ಮಿಜೊ ನ್ಯಾಷನಲ್‌ ಫ್ರಂಟ್‌, ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ, ಅಸ್ಸಾಂ ಗಣ ಪರಿಷತ್‌, ನಾಗಾ ಪೀಪಲ್ಸ್‌ ಫ್ರಂಟ್‌, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ, ನ್ಯಾಷನಲ್‌ ಡೆಮಾಕ್ರಟಿಕ್‌ ಪ್ರೋಗ್ರಾಸಿವ್‌ ಪಾರ್ಟಿ, ಪೀಪಲ್ಸ್‌ ಡೆಮಾಕ್ರಟಿಕ್‌ ಫ್ರಂಟ್‌.

ತಿರಸ್ಕಾರ: ಏತನ್ಮಧ್ಯೆ, ವಿದ್ಯಾರ್ಥಿಗಳು ಹಾಗೂ ಬುಡಕಟ್ಟು ಜನರ ಪ್ರಬಲ ವಿರೋಧಕ್ಕೆ ಗುರಿಯಾಗಿರುವ ಪೌರತ್ವ ತಿದ್ದುಪಡಿ ವಿಧೇಯಕವನ್ನು ನಾಗಾಲ್ಯಾಂಡ್‌ ಸಚಿವ ಸಂಪುಟ ಮಂಗಳವಾರ ತಿರಸ್ಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ