ಆ್ಯಪ್ನಗರ

ಉಗ್ರ ಹಣ ಪ್ರಕರಣ: ಯಾಸಿನ್ ಮಲಿಕ್‌ಗೆ ಮೇ 24ರ ವರೆಗೆ ನ್ಯಾಯಾಂಗ ಬಂಧನ

ಮಲಿಕ್‌ನನ್ನು ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಕಾಶ್ಮೀರದ ಕೋರ್ಟ್‌ ಅನುಮತಿ ನೀಡಿದ ಬಳಿಕ ಆತನನ್ನು ಎನ್‌ಐಎ ವಶಕ್ಕೆ ಪಡೆದಿದ್ದು ದಿಲ್ಲಿಯ ತಿಹಾರ್‌ ಜೈಲಿಗೆ ಕಳಿಸಿತ್ತು. ಮಲಿಕ್ ವಿರುದ್ಧದ ಮೂರು ದಶಕಗಳ ಹಿಂದಿನ ಪ್ರಕರಣದ ಮರು ವಿಚಾರಣೆ ನಡೆಸಬೇಕೆಂಬ ಸಿಬಿಐ ಕೋರಿಕೆ ಮೇಲಿನ ತೀರ್ಪನ್ನು ಜಮ್ಮು-ಕಾಶ್ಮೀರ ಹೈಕೋರ್ಟ್ ಕಾಯ್ದಿರಿಸಿದೆ.

Vijaya Karnataka Web 24 Apr 2019, 8:29 pm
ಹೊಸದಿಲ್ಲಿ: ಪ್ರತ್ಯೇಕತಾವಾದಿ ಹಾಗೂ ಉಗ್ರಸಂಘಟನೆ ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್‌) ಮುಖ್ಯಸ್ಥ ಯಾಸಿನ್ ಮಲಿಕ್‌ ನ್ಯಾಯಾಂಗ ಬಂಧನ ಅವಧಿಯನ್ನು ಮೇ 24ರ ವರೆಗೆ ವಿಸ್ತರಿಸಲಾಗಿದೆ.
Vijaya Karnataka Web Yasin Malik

ಭದ್ರತಾ ಕಾರಣಗಳಿಂದಾಗಿ ವಿಚಾರಣೆಗೆ ಮಲಿಕ್‌ನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಅನುಮತಿಸಬೇಕೆಂಬ ಕೋರಿಕೆಗೆ ಡಿಫೆನ್ಸ್ ವಕೀಲರಿಂದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ರಾಕೇಶ್ ಸಿಯಾಲ್ ಅವರು ಉತ್ತರ ಬಯಸಿದ್ದಾರೆ.

ಮಲಿಕ್‌ನನ್ನು ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಕಾಶ್ಮೀರದ ಕೋರ್ಟ್‌ ಅನುಮತಿ ನೀಡಿದ ಬಳಿಕ ಆತನನ್ನು ಎನ್‌ಐಎ ವಶಕ್ಕೆ ಪಡೆದಿದ್ದು ದಿಲ್ಲಿಯ ತಿಹಾರ್‌ ಜೈಲಿಗೆ ಕಳಿಸಿತ್ತು. ಮಲಿಕ್ ವಿರುದ್ಧದ ಮೂರು ದಶಕಗಳ ಹಿಂದಿನ ಪ್ರಕರಣದ ಮರು ವಿಚಾರಣೆ ನಡೆಸಬೇಕೆಂಬ ಸಿಬಿಐ ಕೋರಿಕೆ ಮೇಲಿನ ತೀರ್ಪನ್ನು ಜಮ್ಮು-ಕಾಶ್ಮೀರ ಹೈಕೋರ್ಟ್ ಕಾಯ್ದಿರಿಸಿದೆ.

1989ರಲ್ಲಿ ನಡೆದ ಕೇಂದ್ರದ ಮಾಜಿ ಗೃಹಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಯಾಸಿನ್ ಮಲಿಕ್ ಪ್ರಧಾನ ಆರೋಪಿಯಾಗಿದ್ದಾನೆ. ಅಲ್ಲದೆ ನಾಲ್ವರು ವಾಯುಪಡೆ ಸಿಬ್ಬಂದಿಗಳ ಹತ್ಯೆ ಪ್ರಕರಣವೂ ಈತನ ಮೇಲಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಜೆಕೆಎಲ್‌ಎಫ್‌ ಮೇಲೆ ನಿಷೇಧ ಹೇರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ