ಆ್ಯಪ್ನಗರ

ಲಷ್ಕರೆ ಉಗ್ರ ಪರಾರಿ: ಜೈಲು ಅಧೀಕ್ಷಕ ಅಮಾನತು

ವೈದ್ಯಕೀಯ ತಪಾಸಣೆಗೆ ಕರೆತುತ್ತಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ಪಾಕಿಸ್ತಾನ ಉಗ್ರ ಜವೀದ್‌ ಜುಟ್ಟ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಘಟನೆಯ ಮಾಸ್ಟರ್‌ ಮೈಂಡ್‌ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ನಿರ್ಲಕ್ಷ್ಯದ ಆರೋಪದ ಮೇಲೆ ಕೇಂದ್ರ ಕಾರಗೃಹದ ಅಧೀಕ್ಷಕರನ್ನು ಜಮ್ಮು-ಕಾಶ್ಮೀರ ಸರಕಾರ ಅಮಾನತುಗೊಳಿಸಿದೆ.

Vijaya Karnataka 9 Feb 2018, 10:21 am

ಶ್ರೀನಗರ: ವೈದ್ಯಕೀಯ ತಪಾಸಣೆಗೆ ಕರೆತುತ್ತಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ಪಾಕಿಸ್ತಾನ ಉಗ್ರ ಜವೀದ್‌ ಜುಟ್ಟ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಘಟನೆಯ ಮಾಸ್ಟರ್‌ ಮೈಂಡ್‌ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ನಿರ್ಲಕ್ಷ್ಯದ ಆರೋಪದ ಮೇಲೆ ಕೇಂದ್ರ ಕಾರಾಗೃಹದ ಅಧೀಕ್ಷಕರನ್ನು ಜಮ್ಮು-ಕಾಶ್ಮೀರ ಸರಕಾರ ಅಮಾನತುಗೊಳಿಸಿದೆ.

Vijaya Karnataka Web terrorist escape srinagar jail superintendent suspended
ಲಷ್ಕರೆ ಉಗ್ರ ಪರಾರಿ: ಜೈಲು ಅಧೀಕ್ಷಕ ಅಮಾನತು


ಶಕೀಲ್‌ ಭಟ್‌ ಇಡೀ ಪ್ರಕರಣದ ರೂವಾರಿ, ಉಗ್ರ ನವೀದ್‌ ತಪ್ಪಿಸಿಕೊಳ್ಳಲು ಈತನ ಬೈಕ್‌ ಅನ್ನೇ ಬಳಸಲಾಗಿದೆ ಎನ್ನುವುದು ಪೊಲೀಸರ ಶಂಕೆ. ಈ ಮಧ್ಯೆ ತಪ್ಪಿಸಿಕೊಂಡಿರುವ ಉಗ್ರ ಮೊಹಮ್ಮದ್‌ ನವೀದ್‌ ಜಾಟ್‌, ಲಷ್ಕರೆ ಸಂಘಟನೆಯ ಇನ್ನೊಬ್ಬ ಉಗ್ರ ಸದ್ದಾಂ ಪೆದ್ದಾರ್‌ ಜತೆಗಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರಿಬ್ಬರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಉಗ್ರ ನವೀದ್‌ ಜುಟ್‌ನನ್ನು ಕಳೆದ ಮಂಗಳವಾರ ಆರೋಗ್ಯ ತಪಾಸಣೆಗೆಂದು ಶ್ರೀನಗರ ಜೈಲಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸ್‌ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಜುಟ್‌ ಪರಾರಿಯಾಗಿದ್ದ. ಪೊಲೀಸರೂ ಇದರಲ್ಲಿ ಶಾಮೀಲಾಗಿರುವ ಆರೋಪಗಳು ಕೇಳಿಬಂದಿದ್ದು, ಆ ಹಿನ್ನೆಲೆಯಲ್ಲಿಯೂ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ