ಆ್ಯಪ್ನಗರ

ಸರ್ಜಿಕಲ್‌ ಸ್ಟ್ರೈಕ್‌ ಭೀತಿ: ಪಾಕ್‌ಗೆ ನಡುಕ, ಗಡಿಯಿಂದ ಉಗ್ರರನ್ನು ಹಿಂದೆ ಕರೆಸಿಕೊಂಡ ಪಾಪಿಸ್ತಾನ

ಸಾಮಾನ್ಯವಾಗಿ ಪಾಕಿಸ್ತಾನೆ ಸೇನಾ ನೆಲೆಗಳ ಆಸುಪಾಸಿನಿಂದಲೇ ಉಗ್ರರು ಒಳನುಸುಳುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿ ಯಾವುದೇ ಚಲವಲನ ಕಂಡುಬಂದಿಲ್ಲ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 17 Feb 2019, 11:03 am
ಶ್ರೀನಗರ: ಪುಲ್ವಾಮಾ ದಾಳಿಯ ನಂತರ ದೇಶದೆಲ್ಲೆಡೆ ಆಕ್ರೋಶದ ಕಟ್ಟೆಯೊಡೆದಿದೆ. ಪಾಕಿಸ್ತಾನ ಹಾಗೂ ಪಾಕ್‌ ಪ್ರೇರಿತ ಉಗ್ರರ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.
Vijaya Karnataka Web ಯೋಧ
ಯೋಧ


ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್ ಅಥವಾ ಮಿನಿ ಸಮರವನ್ನು ಸಾರಲು ಭಾರತ ಸಜ್ಜಾಗಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.

ಈ ರೀತಿಯ ಸುದ್ದಿಗಳು ಹಾಗೂ ಪೋಖ್ರನ್‌ನಲ್ಲಿ ಭಾರತೀಯ ವಾಯುಪಡೆ ಸಮರಾಭ್ಯಾಸ ನಡೆದ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ.

ಸರ್ಜಿಕಲ್‌ ಸ್ಟ್ರೈಕ್ ಭೀತಿಯ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಬೀಡು ಬಿಟ್ಟಿದ್ದ ಉಗ್ರರನ್ನು ಹಿಂದಕ್ಕೆ ಕರೆಸಿಕೊಂಡಿದೆ.

ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪಾಕ್‌ ಪ್ರೇರಿತ ಉಗ್ರರು ತಮ್ಮ ನಲೆಗಳನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿಂದಲೇ ಉಗ್ರರು ವಿಧ್ವಂಸಕ ಕೃತ್ಯಗಳ ಸಂಚು ರೂಪಿಸುತ್ತಿದ್ದರು.

ಇಂಥ ಉಗ್ರರ ವಿರುದ್ಧ ಸಮರ ಸಾರುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಸಿರು ನಿಶಾನೆ ತೋರಿದೆ.

ಪುಲ್ವಾಮಾ ದಾಳಿಯ ನಂತರ ಇಲ್ಲಿಂದ ಉಗ್ರರು ಎತ್ತಂಗಡಿಯಾಗಿದ್ದಾರೆ. ಯೋಧರು ದಿನವೂ ನಡೆಸುತ್ತಿದ್ದ ಗಸ್ತು ವೇಳೆ ಈ ಮಾಹಿತಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಪಾಕಿಸ್ತಾನೆ ಸೇನಾ ನೆಲೆಗಳ ಆಸುಪಾಸಿನಿಂದಲೇ ಉಗ್ರರು ಒಳನುಸುಳುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿ ಯಾವುದೇ ಚಲವಲನ ಕಂಡುಬಂದಿಲ್ಲ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಸೇನಾ ನೆಲೆಗಳು ಉಗ್ರರಿಗೆ ಲಾಂಚಿಂಗ್‌ ಪ್ಯಾಡ್‌ಗಳಾಗಿದ್ದವು. ಈಗ ಅಲ್ಲಿ ಯಾವುದೇ ಚಟುವಟಿಕೆ ಇಲ್ಲ. ಬಹುಶಃ ಪ್ರತಿದಾಳಿಯ ಭೀತಿಯಿಂದ ಎತ್ತಂಗಡಿಯಾಗಿರಬಹುದು. ಆದರೆ ಮತ್ತೆ ಉಗ್ರರು ಒಳ ನುಸುಳಲು ಯತ್ನಿಸುತ್ತಾರೆ. ಅದನ್ನು ನಿಯಂತ್ರಿಸಲು ನಾವು ಸಜ್ಜಾಗಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ