ಆ್ಯಪ್ನಗರ

ಗೌರಿ ಹತ್ಯೆಗೆ ಆರೆಸ್ಸೆಸ್‌ ಸಂಬಂಧ ಕಲ್ಪಿಸಿದ ಆರೋಪ: ರಾಹುಲ್‌, ಯೆಚೂರಿಗೆ ಕೋರ್ಟ್‌ ಸಮನ್ಸ್‌

ಆರೆಸ್ಸೆಸ್‌ನ ವಿವೇಕ್‌ ಚಂಪನೇರ್ಕರ್‌ ಅವರು ವಕೀಲ ಆದಿತ್ಯ ಮಿಶ್ರಾ ಅವರ ಮೂಲಕ ಸಲ್ಲಿಸಿದ ದಾವೆ ಇದಾಗಿದ್ದು, ಏಪ್ರಿಲ್‌ 30ರಂದು ಹಾಜರಿರುವಂತೆ ಸೂಚಿಸಲಾಗಿದೆ.

Vijaya Karnataka 4 Apr 2019, 5:30 am
ಠಾಣೆ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಆರೆಸ್ಸೆಸ್‌ ಜತೆ ಸಂಬಂಧ ಕಲ್ಪಿಸಿದ್ದನ್ನು ಆಕ್ಷೇಪಿಸಿ ಸಲ್ಲಿಸಲಾದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಠಾಣೆ ಕೋರ್ಟ್‌ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸಿಪಿಐ ನಾಯಕ ಸೀತಾರಾಮ್‌ ಯೆಚೂರಿ ಅವರಿಗೆ ಸಮನ್ಸ್‌ ನೀಡಿದೆ.
Vijaya Karnataka Web raaga


ಆರೆಸ್ಸೆಸ್‌ನ ವಿವೇಕ್‌ ಚಂಪನೇರ್ಕರ್‌ ಅವರು ವಕೀಲ ಆದಿತ್ಯ ಮಿಶ್ರಾ ಅವರ ಮೂಲಕ ಸಲ್ಲಿಸಿದ ದಾವೆ ಇದಾಗಿದ್ದು, ಏಪ್ರಿಲ್‌ 30ರಂದು ಹಾಜರಿರುವಂತೆ ಸೂಚಿಸಲಾಗಿದೆ.

''ಬಿಜೆಪಿ ಮತ್ತು ಆರೆಸ್ಸೆಸ್‌ ಸಿದ್ಧಾಂತಗಳ ವಿರುದ್ಧ ಮಾತನಾಡುವ ಯಾರೇ ಆಗಲಿ ಅವರ ಮೇಲೆ ಒತ್ತಡ ಹೇರಲಾಗುತ್ತದೆ, ದಾಳಿ ಮಾಡಲಾಗುತ್ತದೆ, ಮಾತ್ರವಲ್ಲ, ಕೆಲವೊಮ್ಮೆ ಕೊಲ್ಲಲಾಗುತ್ತದೆ,'' ಎಂದು ರಾಹುಲ್‌ ಗಾಂಧಿ ಹೇಳಿದ್ದರೆ, ಯೆಚೂರಿ ಕೂಡಾ ಇಂತಹುದೇ ಮಾತು ಆಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ