ಆ್ಯಪ್ನಗರ

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಬರೋಬ್ಬರಿ ರೂ.14 ಲಕ್ಷ ಬಿಲ್‌..!

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿರೋ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 14 ಲಕ್ಷ ರೂಪಾಯಿ ಬಿಲ್‌ ನೀಡಿ ಅಚ್ಚರಿ ಮೂಡಿಸಿದೆ. ಇಪ್ಪತ್ತು ದಿನಗಳಿಂದ ಆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರೊಬ್ಬರು ಕಳೆದ ಭಾನುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

Agencies 30 Jun 2020, 3:10 pm
ನೋಯ್ಡಾ: ದೇಶದ ಬಹುತೇಕ ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿಪಡಿಸುವುದರ ಬಗ್ಗೆ ಇನ್ನೂ ಪೂರ್ಣ ತೀರ್ಮಾನ ಕೈಗೊಳ್ಳೋಕೆ ಆಗಿಲ್ಲ. ಇಂತಹ ಗೊಂದಲಗಳ ಮಧ್ಯೆಯೇ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 14 ಲಕ್ಷ ರೂಪಾಯಿ ಬಿಲ್ ನೀಡಿ ಅಚ್ಚರಿಮೂಡಿಸಿದೆ.
Vijaya Karnataka Web NOIDA


ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಉತ್ತರ ಪ್ರದೇಶದ ನೋಯ್ಡಾ ನಿವಾಸಿಯಾಗಿರುವ ಒಬ್ಬ ವೈದ್ಯರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರನ್ನು ಜೂನ್‌ ಏಳರಂದು ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಹದಿನೈದು ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಅವರು ಕಳೆದ ಭಾನುವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಕೋವಿಡ್‌ನಿಂದ ಮೃತಪಟ್ಟ ವೈದ್ಯ ಒಟ್ಟು ಇಪ್ಪತ್ತು ದಿನಗಳ ಕಾಲ ಫೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಅವರು ಮೃತಪಟ್ಟ ಬಳಿಕ ಮೃತ ವ್ಯಕ್ತಿಯ ಕುಟುಂಬದವರಿಂದ ಹದಿನಾಲ್ಕು ಲಕ್ಷ ರೂಪಾಯಿ ಪಾವತಿಸುವುದಾಗಿ ಮುಚ್ಚಳಿಕೆ ಬರೆಸಿದ ನಂತರವೇ ಶವವನ್ನು ಬಿಟ್ಟುಕೊಡಲಾಗಿದೆ ಎಂದು ಮೃತ ವ್ಯಕ್ತಿಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಎತ್ತಿ ಮುದ್ದಾಡಿಸಬೇಕಾಗಿದ್ದ ಮಗುವಿನ ಶವವನ್ನು ಬಿಗಿದಪ್ಪಿ ಅತ್ತ ಹೆತ್ತವರ ನೋವಿದು..!

ಆಸ್ಪತ್ರೆಯ ಆಡಳಿತ ಮಂಡಳಿ ನಿಗದಿ ಪಡಿಸಿದ 14 ಲಕ್ಷ ರೂಪಾಯಿ ಬಿಲ್‌ನಲ್ಲಿ 4 ಲಕ್ಷ ರೂಪಾಯಿ ವಿಮಾ ಸುರಕ್ಷೆ ಮತ್ತು ಕುಟುಂಬದವರು ಮುಂಗಡವಾಗಿ ಪಾವತಿಸಿದ 25 ಲಕ್ಷ ರೂಪಾಯಿ ಕಳೆದು 10.2 ಲಕ್ಷ ರೂಪಾಯಿಗೆ ಪರಿಷ್ಕರಿಸಿದ್ದು, ಈ ಶುಲ್ಕಗಳು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ನಿಯಮಗಳಿಗೆ ಅನುಸಾರವಾಗಿ ಪಾರದರ್ಶಕವಾಗಿದೆ ಎಂದು ಫೋರ್ಟೀಸ್ ಆಸ್ಪತ್ರೆ ಸಮರ್ಥಿಸಿಕೊಂಡಿದೆ. ಅಲ್ಲದೇ ಚಿಕಿತ್ಸೆ ವೇಳೆ ರೋಗಿಯ ಕುರಿತಾದ ವಿವರಗಳನ್ನು ಕುಟುಂಬದ ಸದಸ್ಯರಿಗೆ ನೀಡುತ್ತಿದ್ದೆವು ಎಂದು ಹೇಳಿದ್ದಾರೆ.

ನಾವು ಒಟ್ಟು ನಾಲ್ಕು ಯುದ್ಧ ಗೆದ್ದಿದ್ದೇವೆ, ಇದೀಗ ನಿಮ್ಮ ಸರದಿ: ಕೇಂದ್ರಕ್ಕೆ ಕ್ಯಾ.ಸಿಂಗ್ ಪಂಥಾಹ್ವಾನ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ