ಆ್ಯಪ್ನಗರ

ಇರಾನ್‌ ತೈಲ ಟ್ಯಾಂಕರ್‌ನಲ್ಲಿದ್ದ 4 ಭಾರತೀಯರ ಬಿಡುಗಡೆ

ಕಳೆದ ತಿಂಗಳು ಸ್ಪೇನ್‌ನ ಕರಾವಳಿ ತೀರದಲ್ಲಿ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್‌ ಹಡುಗನ್ನು ಬ್ರಿಟನ್‌ ಆಡಳಿತಕ್ಕೆ ಒಳಪಟ್ಟಿರುವ ಗಿಬ್‌ರಲ್ಟಾರ್‌ ದ್ವೀಪ ಪ್ರಾಂತ್ಯದ ನೌಕಾಪಡೆ ವಶಪಡಿಸಿಕೊಂಡಿತ್ತು.

PTI 16 Aug 2019, 5:00 am
Vijaya Karnataka Web im-98701
ಹೊಸದಿಲ್ಲಿ: ಬ್ರಿಟನ್‌ ವಶಪಡಿಸಿಕೊಂಡಿದ್ದ ಇರಾನ್‌ ತೈಲ ಟ್ಯಾಂಕರ್‌ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಗಿಬ್‌ರಲ್ಟಾರ್‌ ದ್ವೀಪ ಪ್ರಾಂತ್ಯದ ಸರಕಾರ ಗುರುವಾರ ಬಿಡುಗಡೆ ಮಾಡಿದೆ. ಕಳೆದ ತಿಂಗಳು ಸ್ಪೇನ್‌ನ ಕರಾವಳಿ ತೀರದಲ್ಲಿ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್‌ ಹಡುಗನ್ನು ಬ್ರಿಟನ್‌ ಆಡಳಿತಕ್ಕೆ ಒಳಪಟ್ಟಿರುವ ಗಿಬ್‌ರಲ್ಟಾರ್‌ ದ್ವೀಪ ಪ್ರಾಂತ್ಯದ ನೌಕಾಪಡೆ ವಶಪಡಿಸಿಕೊಂಡಿತ್ತು. ಐರೋಪ್ಯ ಒಕ್ಕೂಟದ ನಿರ್ಬಂಧಗಳನ್ನು ಧಿಕ್ಕರಿಸಿ ಇರಾನ್‌ ಈ ಹಡಗಿನ ಮೂಲಕ ಸಿರಿಯಾಗೆ ತೈಲ ಸರಬರಾಜು ಮಾಡುತ್ತಿತ್ತು ಎಂಬ ಆಪಾದನೆ ಮೇರೆಗೆ ಇದನ್ನು ವಶಕ್ಕೆ ಪಡೆದಿರುವುದಾಗಿ ಬ್ರಿಟನ್‌ ಹೇಳಿತ್ತು. ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಹಡಗಿನಲ್ಲಿದ್ದ 23 ಸಿಬ್ಬಂದಿಯ ಪೈಕಿ 4 ಭಾರತೀಯರನ್ನು ಗಿಬ್‌ರಲ್ಟಾರ್‌ ಸರಕಾರ ಬಿಡುಗಡೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ