ಆ್ಯಪ್ನಗರ

'ಭಾರತದಲ್ಲಿ ಕೊರೊನಾ ಸಮುದಾಯ ಹಂತಕ್ಕೆ ತಲುಪಿಲ್ಲ' - ಕೇಂದ್ರ ಆರೋಗ್ಯ ಸಚಿವ

ಗುರುವಾರ ದಿಲ್ಲಿಯಲ್ಲಿ ಮಾತನಾಡಿದ ಡಾ.ಹರ್ಷವರ್ಧನ್ ಭಾರತದಲ್ಲಿ ಕೊರೊನಾ ಸೋಂಕು ಸಮುದಾಯ ಹಂತಕ್ಕೆ ತಲುಪಿದೆ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ. ಕೊರೊನಾ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹಾಗಂತ ಅದನ್ನೇ ಸಮುದಾಯ ಹಂತಕ್ಕೆ ತಲುಪಿದೆ ಅಂತಾ ನಿರ್ಧಾರಕ್ಕೆ ಬರೋದಿಕ್ಕೆ ಆಗೋದಿಲ್ಲ ಎಂದಿದ್ಧಾರೆ.

Agencies 9 Jul 2020, 5:12 pm
ಹೊಸದಿಲ್ಲಿ: ಕೊರೊನಾ ವೈರಸ್ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ ವಿಸ್ತರಿಸುತ್ತಿದ್ದು, ವೈರಸ್ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ಮಧ್ಯೆ ಭಾರತದಲ್ಲಿ ಕೊರೊನಾ ಸೋಂಕು ಸಮುದಾಯ ಹಂತಕ್ಕೆ ಹರಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
Vijaya Karnataka Web Dr Harshavardhan


ನಾನು ವಿಕಾಸ್ ದುಬೆ ಎನ್ನುತ್ತಿದ್ದಂತೇ ಎರಡು ಬಿಟ್ಟ ಪೊಲೀಸರು: ಖಾಕಿ ಏಟಿಗೆ ರೌಡಿ ತಬ್ಬಿಬ್ಬು!

ಇಂದು ದಿಲ್ಲಿಯಲ್ಲಿ ಮಾತನಾಡಿದ ಅವರು ಭಾರತದಲ್ಲಿ ಕೊರೊನಾ ಸೋಂಕು ಸಮುದಾಯ ಹಂತಕ್ಕೆ ತಲುಪಿದೆ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ. ಕೊರೊನಾ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹಾಗಂತ ಅದನ್ನೇ ಸಮುದಾಯ ಹಂತಕ್ಕೆ ತಲುಪಿದೆ ಅಂತಾ ನಿರ್ಧಾರಕ್ಕೆ ಬರೋದಿಕ್ಕೆ ಆಗೋದಿಲ್ಲ ಎಂದಿದ್ಧಾರೆ. ಈ ಮೂಲಕ ವೈದ್ಯಕೀಯ ತಜ್ಞರ ಅಭಿಪ್ರಾಯವನ್ನು ನಿರಾಕರಿಸಿರುವ ಹರ್ಷವರ್ಧನ್, ಕೇವಲ ಎಂಟು ರಾಜ್ಯಗಳಲ್ಲಿ ಮಾತ್ರ 90%ನಷ್ಟು ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದಿದ್ದಾರೆ.

ಚೇತರಿಕೆಯ ಹಸಿರು ಚಿಗುರೊಡೆದಿರುವ ಭಾರತದಲ್ಲಿ ಹೂಡಿಕೆದಾರರಿಗೆ ಕೆಂಪು ಹಾಸು: ಮೋದಿ ಆಹ್ವಾನ!

ಅಲ್ಲದೇ ದೇಶದಲ್ಲಿ ದಿನನಿತ್ಯ 25000 ಮಂದಿಗೆ ಕೊರೊನಾ ಸೋಂಕು ಹರಡುತ್ತಿದ್ದರೂ ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕು ಸಮುದಾಯ ಹಂತಕ್ಕೆ ತಲುಪಿದೆ ಎಂದು ಹಲವು ವೈದ್ಯಕೀಯ ತಜ್ಞರು ಹೇಳಿದ್ದರು. ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಕೊರೊನಾ ಸಮುದಾಯ ಹಂತಕ್ಕೆ ತಲುಪಿರುವ ವಿಚಾರವನ್ನು ಕೇಂದ್ರ ಸರ್ಕಾರವೇ ಘೋಷಣೆ ಮಾಡಬೇಕು, ರಾಜ್ಯ ಸರ್ಕಾರಗಳಿಗೆ ಸಾಧ್ಯವಿಲ್ಲ ಎಂದಿದ್ದರು. ಆದ್ರೆ ಇದೀಗ ಕೇಂದ್ರ ಆರೋಗ್ಯ ಸಚಿವರು ಕೊರೊನಾ ಸಮುದಾಯ ಹಂತಕ್ಕೆ ತಲುಪಿದೆ ಅನ್ನುವ ವಾದವನ್ನು ತಳ್ಳಿ ಹಾಕಿದ್ದಾರೆ.

ಕಾಡಿನ ದುರ್ಗಮ ಹಾದಿಯಲ್ಲಿ ನಡಿಗೆ.. ಜೋಳಿಗೆಯಲ್ಲಿ ಗರ್ಭಿಣಿ..! ಭಾರತ ಪ್ರಕಾಶಿಸುತ್ತಿದೆ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ