ಆ್ಯಪ್ನಗರ

'ತಾಪ'ಕ್ಕೆ ಕುದಿಯುತಿದೆ ಸಮುದ್ರ ಉರಿಯುತಿದೆ ಭೂಮಿ! : ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

2019 ಈ ಶತಮಾನದ ಮೂರನೇ 'ಬಿಸಿ ವರ್ಷ'ವಾಗಿ ದಾಖಲೆ ಬರೆಯಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ತನ್ನ ವರದಿಯಲ್ಲಿ ಸಂದೇಶ ನೀಡಿದೆ. ಸಮುದ್ರಗಳು ಕುದಿಯುತ್ತಿದ್ದು ಭೂಮಿ ಧಗಿಸುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ' ಎಂದು ಎಚ್ಚರಿಸಿದೆ.

Vijaya Karnataka Web 3 Dec 2019, 7:40 pm
ಹೊಸಿದಿಲ್ಲಿ: ಜಾಗತಿಕ ತಾಪಮಾನ ಬದಲಾವಣೆ ಆತಂಕ ಜಗತ್ತನ್ನು ವ್ಯಾಪಿಸಿದ್ದರೂ 2010ರ ದಶಕ ಗರಿಷ್ಠ ತಾಪಮಾನದ ದಶಕವಾಗಿ ಇತಿಹಾಸದಲ್ಲಿ ದಾಖಲಾಗುವ ಅಪಾಯ ಎದುರಾಗಿದೆ. ಅದರಲ್ಲಿಯೂ 2019 ಈ ಶತಮಾನದ ಮೂರನೇ 'ಬಿಸಿ ವರ್ಷ'ವಾಗಿ ದಾಖಲೆ ಬರೆಯಲಿದೆ. ಜಾಗತಿಕ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ವರದಿಯು ಈ ಕುರಿತು ಆತಂಕದ ಸಂದೇಶಗಳನ್ನು ರವಾನಿಸಿದೆ. ವರದಿಯ ಸಾರಾಂಶ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯು 'ಸಮುದ್ರಗಳು ಕುದಿಯುತ್ತಿದ್ದು ಭೂಮಿ ಧಗಿಸುತ್ತಿದೆ. ಹವಾಮಾನ ಬದಲಾವಣೆ ವಿಚಾರದಲ್ಲಿಎಚ್ಚೆತ್ತುಕೊಳ್ಳದಿದ್ದರೆ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ' ಎಂದು ಎಚ್ಚರಿಕೆ ನೀಡಿದೆ.
Vijaya Karnataka Web global warming


ಡಬ್ಲ್ಯೂಎಂಒ ವರದಿಯ ಎಚ್ಚರಿಕೆ ಏನು?
  • - ಹಸಿರುಮನೆ ಅನಿಲಗಳಿಂದ ಸೃಷ್ಟಿಯಾಗುವ ಶೇ.90ರಷ್ಟು ಉಷ್ಣತೆಯನ್ನು ಹೀರಿಕೊಳ್ಳುವ ಸಮುದ್ರಗಳು ತಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟ ತಲುಪಿವ
  • - ಸಮುದ್ರದಲ್ಲಿನ ವೈಪರೀತ್ಯಗಳಿಂದಾಗಿ 2019ರ ಮೊದಲರ್ಧದಲ್ಲಿ10 ದಶಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ7 ದಶಲಕ್ಷ ಮಂದಿ ಪ್ರವಾಹ, ಚಂಡಮಾರುತದಂತಹ ಕಾರಣಗಳಿಂದ ನೆಲೆ ಕಳೆದುಕೊಂಡಿದ್ದಾರೆ. ವರ್ಷಾಂತ್ಯದ ಹೊತ್ತಿಗೆ ಸಂತ್ರಸ್ತರ ಸಂಖ್ಯೆ 22 ದಶಲಕ್ಷಕ್ಕೆ ಏರಿಕೆಯಾಗಲಿದೆ
  • - ಶತಮಾನಕ್ಕೊಮ್ಮೆ ಸಂಭವಿಸುತ್ತಿದ್ದ ಬಿಸಿಗಾಳಿ ಮತ್ತು ಪ್ರವಾಹ ಈಗ ಸಾಮಾನ್ಯ ಸಂಗತಿಗಳಾಗಿ ಪರಿಣಮಿಸಿವೆ
  • - ಕಳೆದ ನಾಲ್ಕು ದಶಕಗಳಲ್ಲಿತಾಪಮಾನ ಏರಿಕೆಯಾಗುತ್ತಲೇ ಇದ್ದು, ಪ್ರತಿ ದಶಕವೂ ಹೊಸ ದಾಖಲೆ ಬರೆಯುತ್ತಲೇ ಇದೆ
  • - ಆರ್ಟಿಕ್‌, ಅಂಟಾರ್ಟಿಕಾ ಸಮುದ್ರಗಳಲ್ಲಿನ ಮಂಜುಗಡ್ಡೆ ಕರಗುವ ಪ್ರಮಾಣದಲ್ಲಿತೀವ್ರ ಏರಿಕೆಯಾಗಿದೆ
  • - ಸಮುದ್ರ ನೀರಿನಲ್ಲಿಶೇ.26ರಷ್ಟು ಆ್ಯಸಿಡ್‌ ಅಂಶಗಳು ಪತ್ತೆಯಾಗಿವೆ
  • - ಸಮುದ್ರದಲ್ಲಿನ ಏರುಪೇರು ಆಹಾರ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ

ಅಪಾಯಕ್ಕೆ ಒಳಗಾಗುವರ ಸಂಖ್ಯೆ
  • 820 ದಶಲಕ್ಷ ಜನರು ವಿಶ್ವದಾದ್ಯಂತ 2018ರಲ್ಲಿಹಸಿವಿನಿಂದ ಬಳಲುತ್ತಿದ್ದಾರೆ. ಅದಕ್ಕೆ ಸಮುದ್ರದಲ್ಲಿನ ಹವಾಮಾನ ಬದಲಾವಣೆ ಮುಖ್ಯ ಕಾರಣ ಎಂದು ಡಬ್ಲ್ಯೂಎಂಒ ವರದಿ ಹೇಳಿದೆ
  • 329 ಶತಕೋಟಿ ಟನ್‌ನಷ್ಟು ಮಂಜುಗಡ್ಡೆ 2019ರಲ್ಲಿಕರಗಿದೆ ಎನ್ನುವುದು ಮತ್ತಷ್ಟು ಕಳವಳ ಮೂಡಿಸಿದೆ

ನಮ್ಮ ಗುರಿಗಳೇನು?
  • 2019ರಲ್ಲಿಜಾಗತಿಕ ತಾಪಮಾನ ಏರಿಕೆಯನ್ನು 1 ಡಿಗ್ರಿ ಸೆಲ್ಶಿಯಸ್‌ ಒಳಗೆ ನಿಯಂತ್ರಿಸುವ ಗುರಿ ಹಾಕಿಕೊಳ್ಳಲಾಗಿತ್ತು
  • 2019ರಲ್ಲಿನ ಸರಾಸರಿ ಜಾಗತಿಕ ತಾಪಮಾನ ಏರಿಕೆ 1.1 ಡಿಗ್ರಿ ಸೆಲ್ಶಿಯಸ್‌
  • 2030ರ ಹೊತ್ತಿಗೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಶಿಯಸ್‌ ಪ್ರಮಾಣದೊಳಗೆ ನಿಯಂತ್ರಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ತಲುಪಲು ಮುಂದಿನ 10 ವರ್ಷಗಳಲ್ಲಿಇಂಗಾಲಾಮ್ಲಹೊರಸೂಸುವಿಕೆಯನ್ನು ಪ್ರತಿವರ್ಷ ಶೇ.7.6ರ ಒಳಗೆ ನಿಯಂತ್ರಿಸಲೇಬೇಕು
  • ಎಲ್ಲದೇಶಗಳು ಪ್ಯಾರಿಸ್‌ ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಂಡರೂ ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ ಏರಿಕೆ ಸರಾಸರಿ ಮೂರು ಡಿಗ್ರಿ ಸೆಲ್ಶಿಯಸ್‌ ತಲುಪಲಿದೆ ಎಂದು ಅಂದಾಜಿಸಲಾಗಿದೆ

ಹವಾಮಾನ ಬದಲಾವಣೆಗೆ ಪ್ರಮುಖ ಕಾರಣಗಳು

  • - ಇಂಧನ ತ್ಯಾಜ್ಯಗಳನ್ನು ದಹಿಸುವುದು
  • - ಎಗ್ಗಿಲ್ಲದೇ ಆಗುತ್ತಿರುವ ನಗರೀಕರಣ
  • - ಬೆಳೆ ಪದ್ಧತಿಯಲ್ಲಿನ ಬದಲಾವಣೆ
  • - ಸಾರಿಗೆ ಸೌಲಭ್ಯಗಳಲ್ಲಿಗಣನೀಯ ಏರಿಕೆ
  • - ಎಲ್ಲದೇಶಗಳನ್ನೂ ಆವರಿಸಿರುವ ಕೊಳ್ಳುಬಾಕ ಸಂಸ್ಕೃತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ