ಆ್ಯಪ್ನಗರ

ಗುಜರಾತ್ ಬುಡಕಟ್ಟು ಜನತೆಯ ಮನೆಗಳಲ್ಲಿದೆ ಉಲ್ಟಾ ಚಲಿಸುವ ಗಡಿಯಾರ

ಗುಜರಾತ್‌ನ ಬುಡಕಟ್ಟು ಜನರ ಮನೆಗಳಲ್ಲಿ ಗಡಿಯಾರದ ಮುಳ್ಳಿನ ಚಲನೆ ಉಲ್ಟಾ ಇರುವುದನ್ನು ಬಳಸಲಾಗುತ್ತಿದೆಯಂತೆ. ಮಧ್ಯ ಗುಜರಾತ್ ಹಾಗೂ ದಕ್ಷಿಣ ಗುಜರಾತ್‌ನ ಬುಡಕಟ್ಟು ಜನತೆ ಈ ರೀತಿಯ ಗಡಿಯಾರಗಳನ್ನು ಕೊಳ್ಳುತ್ತಿದ್ದಾರೆ. ಅಲ್ಲದೆ, ಬುಡಕಟ್ಟು ಚಳುವಳಿಗಾರರೊಬ್ಬರು ಈ ರೀತಿಯ ಗಡಿಯಾರಗಳನ್ನು ತಯಾರಿಸುತ್ತಿದ್ದು, ಇದು ಆದಿವಾಸಿಗಳ ಗಡಿಯಾರ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ.

TIMESOFINDIA.COM 19 Jul 2018, 3:56 pm
ವಡೋದರಾ: ಗುಜರಾತ್‌ನ ಬುಡಕಟ್ಟು ಜನರ ಮನೆಗಳಲ್ಲಿ ಗಡಿಯಾರದ ಮುಳ್ಳಿನ ಚಲನೆ ಉಲ್ಟಾ ಇರುವುದನ್ನು ಬಳಸಲಾಗುತ್ತಿದೆಯಂತೆ. ಮಧ್ಯ ಗುಜರಾತ್ ಹಾಗೂ ದಕ್ಷಿಣ ಗುಜರಾತ್‌ನ ಬುಡಕಟ್ಟು ಜನತೆ ಈ ರೀತಿಯ ಗಡಿಯಾರಗಳನ್ನು ಕೊಳ್ಳುತ್ತಿದ್ದಾರೆ. ಅಲ್ಲದೆ, ಬುಡಕಟ್ಟು ಚಳುವಳಿಗಾರರೊಬ್ಬರು ಈ ರೀತಿಯ ಗಡಿಯಾರಗಳನ್ನು ತಯಾರಿಸುತ್ತಿದ್ದು, ಇದು ಆದಿವಾಸಿಗಳ ಗಡಿಯಾರ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ.
Vijaya Karnataka Web tribal clock


ಗುಜರಾತ್‌ನ ಗೋಧ್ರಾದ ಮಾಥುರ್ ನಿವಾಸದಲ್ಲಿ ಸಹ ಈ ಗಡಿಯಾರವನ್ನು ಅಳವಡಿಸಿಕೊಳ್ಳಲಾಗಿದ್ದು, ಇದರಲ್ಲಿ ಬುಡಕಟ್ಟು ನಿವಾಸಿಗಳ ಹೀರೋ ಬಿರ್ಸಾ ಮುಂಡಾ ಚಿತ್ರವನ್ನು ಸಹ ಹಾಕಲಾಗಿದೆ. ಆದರೆ, ಗಡಿಯಾರ ಮಾತ್ರ ಸಮಯಕ್ಕೆ ವಿರುದ್ಧವಾಗಿ ತಿರುಗುವುದು ವಿಚಿತ್ರವೆನಿಸುತ್ತದೆ. ತಾಪಿ ಜಿಲ್ಲೆಯ ವಲೋದ್ ಗ್ರಾಮದ 40 ವರ್ಷ ವಯಸ್ಸಿನ ಬುಡಕಟ್ಟು ಚಳುವಳಿಗಾರರಾದ ಲಾಲ್‌ಸಿಂಗ್ ಗ್ಯಾಮಿಟ್ ಈ ರೀತಿಯ ಗಡಿಯಾರವನ್ನು ರಚಿಸಿದ್ದು, ಇದು ಆದಿವಾಸಿಗಳ ಗಡಿಯಾರ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ. ಅಲ್ಲದೆ, ಕಳೆದ 2 ವರ್ಷಗಳಲ್ಲಿ ಸುಮಾರು 10 ರಿಂದ 15 ಸಾವಿರ ಆದಿವಾಸಿಗಳ ಗಡಿಯಾರಗಳನ್ನು ಮಾರಾಟ ಮಾಡಲಾಗಿದೆ.

ಬುಡಕಟ್ಟು ಜನರು ಸಾಂಪ್ರದಾಯಿಕವಲ್ಲದ ಚಳುವಳಿಗೆ ಬೆಂಬಲ ನೀಡಲು ಅನೇಕ ಕಾರಣಗಳಿವೆ. ಬುಡಕಟ್ಟು ಜನತೆ ಪ್ರಕೃತಿ ಮತ್ತು ಅದರ ಅಂಶಗಳನ್ನು ಪೂಜಿಸುತ್ತಾರೆ. ಇವರು ಹೋಳಿ ಹಾಗೂ ಮದುವೆ ಸಮಾರಂಭದ ಸಹ ದೇವರಿಗೆ ಪೂಜೆ ಮಾಡುವಾಗ ಗಡಿಯಾರದ ಮುಳ್ಳಿನ ಚಲನೆಗೆ ವಿರುದ್ಧವಾಗಿ ಅಂದರೆ ಅಪ್ರದಕ್ಷಿಣವಾಗಿ ತಿರುಗುತ್ತಾರೆ. ಜಮೀನಿಗೆ ವ್ಯವಸಾಯ ಮಾಡುವಾಗಲೂ ಸಹ ಇದೇ ರೀತಿಯಲ್ಲಿ ಮಾಡುತ್ತಾರೆ. ಹೀಗಾಗಿ, ಆದಿವಾಸಿಗಳ ಗಡಿಯಾರ ಇದನ್ನು ಪ್ರತಿನಿಧಿಸುತ್ತದೆ. ಇದೇ ನಮ್ಮ ಸರಿಯಾದ ಮಾರ್ಗ ಎಂದು 70 ವರ್ಷದ ನಿವೃತ್ತ ಶಿಕ್ಷಕ ಮಾಥುರ್ ಹೇಳಿದ್ದು, ಅವರಿಗೆ ಗೆಳೆಯರೊಬ್ಬರು ಈ ಗಡಿಯಾರವನ್ನು ಉಡುಗೊರೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ