ಆ್ಯಪ್ನಗರ

ಭರ್ತಿ 70 ವರ್ಷದ ಬಳಿಕ ವಿದ್ಯುತ್‌ ಸಂಪರ್ಕ..! ಯುವ ಜಿಲ್ಲಾಧಿಕಾರಿ ಪ್ರಯತ್ನದಿಂದ ಗಡಿ ಗ್ರಾಮಗಳಿಗೆ ಹೊಸ ಬೆಳಕು

ದೇಶ ಸ್ವಾತಂತ್ರ್ಯವಾಗಿ ಭರ್ತಿ ಏಳು ದಶಕಗಳ ಬಳಿಕ ಉತ್ತರ ಕಾಶ್ಮೀರದ ಎಲ್‌ಒಸಿಯಲ್ಲಿನ ಕೇರನ್‌ ಮತ್ತು ಮಛಿಲ್‌ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಬಂದಿದೆ. ತಮ್ಮ ಮನೆಗಳಲ್ಲಿ ವಿದ್ಯುತ್‌ ಸಂಪರ್ಕದಿಂದ ದೀಪ ಬೆಳಗುತ್ತಿರುವುದನ್ನು ಕಂಡು ಗ್ರಾಮಸ್ಥರು ಸಂತಸಪಟ್ಟಿದ್ದಾರೆ.

Agencies 20 Sep 2020, 9:54 pm
ಶ್ರೀನಗರ: ಏಳು ದಶಕಗಳ ಬಳಿಕ ಉತ್ತರ ಕಾಶ್ಮೀರದ ಎಲ್‌ಒಸಿಯಲ್ಲಿನ ಕೇರನ್‌ ಮತ್ತು ಮಛಿಲ್‌ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ವಿದ್ಯುತ್‌ ಸಂಪರ್ಕದಿಂದ ದೀಪ ಬೆಳಗುತ್ತಿರುವುದನ್ನು ಕಂಡು ಸಂತಸಪಟ್ಟಿದ್ದಾರೆ. ಒಂದು ವರ್ಷದ ಸತತ ಶ್ರಮ ಹಾಗೂ ಕೇಂದ್ರ ಸರಕಾರದೊಂದಿಗೆ ನಿರಂತರ ಸಂಪರ್ಕದ ಮೂಲಕ ಈ ಗ್ರಾಮಗಳನ್ನು ರಾಷ್ಟ್ರೀಯ ಎಲೆಕ್ಟ್ರಿಸಿಟಿ ಗ್ರಿಡ್‌ಗೆ ಸಂಪರ್ಕಿಸಲಾಗಿದೆ.
Vijaya Karnataka Web these kashmir villages get electricity for first time in 70 years
ಭರ್ತಿ 70 ವರ್ಷದ ಬಳಿಕ ವಿದ್ಯುತ್‌ ಸಂಪರ್ಕ..! ಯುವ ಜಿಲ್ಲಾಧಿಕಾರಿ ಪ್ರಯತ್ನದಿಂದ ಗಡಿ ಗ್ರಾಮಗಳಿಗೆ ಹೊಸ ಬೆಳಕು


ಕುಪ್ವಾರ ಜಿಲ್ಲಾಧಿಕಾರಿಯಾಗಿರುವ 31ರ ಯುವಕ ಅಂಶುಲ್‌ ಗರ್ಗ್‌ ಈ ಯಶಸ್ಸಿನ ರೂವಾರಿ ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ.

2019ರ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಯಾದ ಕೂಡಲೇ ಎಲ್‌ಒಸಿಯ ಗ್ರಾಮಸ್ಥರು ನನ್ನ ಬಳಿ ಬಂದು ನಮಗೆ ವಿದ್ಯುತ್‌ ಸಂಪರ್ಕ ಸಿಗುತ್ತದೆಯೇ ಎಂದು ಕೇಳಿದರು. ನಾನು ಚಕಿತನಾದೆ. ಸ್ವಾತಂತ್ರ್ಯ ಬಂದು 70 ವರ್ಷವಾಗಿದ್ದರೂ ಕರೆಂಟ್‌ ಇಲ್ಲದೆ ಇವರು ಹೇಗೆ ಬದುಕು ನಡೆಸುತ್ತಿದ್ದಾರೆ ಎಂಬ ಅಚ್ಚರಿ ಮೂಡಿತು. ಆಗಲೇ ಇವರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಂಕಲ್ಪ ಮಾಡಿಕೊಂಡೆ ಎಂದು ಅಂಶುಲ್‌ ಗರ್ಗ್‌ ಹೇಳಿದ್ದಾರೆ.

ಅದರಂತೆ 8 ತಿಂಗಳ ಹಿಮವರ್ಷ, ಕೆಲಸಗಾರರ ಕೊರತೆ, 370ನೇ ವಿಧಿ ರದ್ದತಿ ನಂತರದ ಬಿಗುವಿನ ವಾತಾವರಣ, ಕೊರೊನಾ ಲಾಕ್‌ಡೌನ್‌ನಂತಹ ಸವಾಲುಗಳನ್ನು ಮೆಟ್ಟಿನಿಂತು ಕೊನೆಗೂ ಎಲ್‌ಒಸಿಯಲ್ಲಿ ಒಟ್ಟು ಮೂರು ಗ್ರಾಮಗಳು ವಿದ್ಯುತ್‌ ಸಂಪರ್ಕವನ್ನು ವರ್ಷದ ಎಲ್ಲ ದಿನಗಳು ಪಡೆಯುವಂತಾಗಿದೆ. ಮೊದಲು ಬಲ್ಬ್ ಹೊತ್ತಿದ್ದನ್ನು ಕಂಡು ಗ್ರಾಮಸ್ಥರು 'ಬಿಜ್ಲಿ, ಬಿಜ್ಲಿ' ಎಂದು ಘೋಷಣೆ ಕೂಗಿದ್ದೇ ನಮಗೆ ಸಿಕ್ಕ ಪ್ರಶಂಸೆ ಎಂದು ಗರ್ಗ್‌ ಅವರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಪಾಕ್ ಜೊತೆ ಏಕಿಲ್ಲ?: ಫಾರೂಕ್ ಅಬ್ದುಲ್ಲಾ ಪ್ರಶ್ನೆ!

25 ಸಾವಿರ ಜನಸಂಖ್ಯೆಯ ಈ ಮೂರು ಗ್ರಾಮಗಳಲ್ಲಿ ನಿತ್ಯ ಮೂರು ಗಂಟೆಗಳ ವಿದ್ಯುತ್‌ ಪಡೆಯುವ ಸಲುವಾಗಿ ದಶಕಗಳ ಕಾಲ ಡೀಸೆಲ್‌ ಜನರೇಟರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಜನರೇಟರ್‌ಗಳು ರಿಪೇರಿಗೆ ಬಂದಾಗ ಹಿಮಚ್ಛಾದಿತ ರಸ್ತೆಗಳಲ್ಲಿ ಅವುಗಳನ್ನು ಪಟ್ಟಣಕ್ಕೆ ಒಯ್ಯಲಾಗದೆ ಕತ್ತಲೆಯಲ್ಲಿಯೇ ಹಲವರು ದಿನಗಳನ್ನು ದೂಡುತ್ತಿದ್ದರು.

ಭಾರತದ ವಿರುದ್ಧ ಅಪಪ್ರಚಾರಕ್ಕೆ ಪಾಕ್ ಹುನ್ನಾರ: ಟ್ವಿಟ್ಟರ್‌ನಲ್ಲಿ ಕಾಶ್ಮೀರ ವಾಂಟ್ಸ್ ಫ್ರೀಡಂ ಅಭಿಯಾನ!

2018ರಲ್ಲಿ ದೇಶದ 112 ಜಿಲ್ಲೆಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಸುಧಾರಣಾ ಕ್ರಮಗಳ ಜಾರಿಗೆ ನೀತಿ ಆಯೋಗ ಮುಂದಾದಾಗ ಕುಪ್ವಾರದಲ್ಲಿ 6.5 ಕೋಟಿ ರೂ. ವೆಚ್ಚದ 33/11 ಕಿ. ವ್ಯಾಟ್‌ ವಿದ್ಯುತ್‌ ಲೈನ್‌ ಅಳವಡಿಕೆ ಕಾರ್ಯ ವೇಗ ಪಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ