ಆ್ಯಪ್ನಗರ

ರ‍್ಯಾಗಿಂಗ್ ಪಿಡುಗು: 20 ಡೆಂಟಲ್‌ ಕಾಲೇಜು ನೋಂದಣಿ ರದ್ದು?

ರ‍್ಯಾಗಿಂಗ್ ಪಿಡುಗು ವಿವಾದ ಸುತ್ತಿಕೊಂಡಿರುವ ದೇಶದ 20 ದಂತ ವೈದ್ಯಕೀಯ ಶಿಕ್ಷಣ ಕಾಲೇಜುಗಳ ನೋಂದಣಿ ರದ್ದುಗೊಳಿಸಲು ಶಿಫಾರಸು.

ಟೈಮ್ಸ್ ಆಫ್ ಇಂಡಿಯಾ 29 Jul 2016, 2:52 pm
ಹೊಸದಿಲ್ಲಿ: ರ‍್ಯಾಗಿಂಗ್ ಪಿಡುಗು ವಿವಾದ ಸುತ್ತಿಕೊಂಡಿರುವ ರಾಯಚೂರು ಮತ್ತು ಕೋಲಾರದ ಎರಡು ಕಾಲೇಜುಗಳು ಸೇರಿದಂತೆ ದೇಶದ 20 ದಂತ ವೈದ್ಯಕೀಯ ಶಿಕ್ಷಣ ಕಾಲೇಜುಗಳ ನೋಂದಣಿಯನ್ನು ರದ್ದುಗೊಳಿಸುವಂತೆ ಡೆಂಟಲ್‌ ಕೌನ್ಸಿಲ್ ಆಫ್‌ ಇಂಡಿಯಾ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
Vijaya Karnataka Web these medical colleges may lose registration for ragging menace
ರ‍್ಯಾಗಿಂಗ್ ಪಿಡುಗು: 20 ಡೆಂಟಲ್‌ ಕಾಲೇಜು ನೋಂದಣಿ ರದ್ದು?


ಸಚಿವಾಲಯವು ಮಂಡಳಿಯ ಶಿಪಾರಸಿನಂತೆ ಕ್ರಮ ಕೈಗೊಳ್ಳಲು ಮುಂದಾದರೆ 20 ಕಾಲೇಜುಗಳ ನೋಂದಣಿ ರದ್ದಾಗಲಿವೆ.

ರಾಯಚೂರಿನ ಎಎಂಇ ಡೆಂಟಲ್‌ ಕಾಲೇಜು ಮತ್ತು ಆಸ್ಪತ್ರೆ, ಕೋಲಾರದ ಕೆಜಿಎಫ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್ ಮತ್ತು ಆಸ್ಪತ್ರೆ, ಆಂಧ್ರಪ್ರದೇಶದ ಶ್ರೀ ಬಾಲಾಜಿ ಡೆಂಟಲ್‌ ಕಾಲೇಜು, ಬಿಹಾರದ ಮೂರು, ಅಸ್ಸಾಂ, ಪಂಜಾಬ್‌, ದಿಲ್ಲಿ, ಶ್ರೀನಗರ, ಜಮ್ಮು,ರಾಜಸ್ಥಾನಗಳ ತಲಾ ಒಂದು, ಮಧ್ಯಪ್ರದೇಶ, ಉತ್ತರಪ್ರದೇಶಗಳ ಎರಡು, ಮಹಾರಾಷ್ಟ್ರದ ಮೂರು, ಗ್ರೇಟರ್‌ ನೋಯ್ಡಾದ ಒಂದು ಕಾಲೇಜುಗಳ ನೋಂದಣಿ ರದ್ದುಪಡಿಸಲು ಮಂಡಳಿ ಶಿಫಾರಸು ಮಾಡಿದೆ.

ಕಾಲೇಜುಗಳಲ್ಲಿ ರ‍್ಯಾಗಿಂಗ್ ಪಿಡುಗು ಕೊನೆಗೊಳಿಸಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಡಲು ಇದೊಂದು ಉತ್ತಮ ದಾರಿಯಾಗುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ