ಆ್ಯಪ್ನಗರ

ರಂಜಾನ್ ಉಪವಾಸ ಮಾಡ್ತಾರೆ ಈ ಆಂಜನೇಯನ ಭಕ್ತ

ಆಂಜನೇಯನ ಭಕ್ತರೊಬ್ಬರು ರಂಜಾನ್ ಉಪವಾಸ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆಯುತ್ತಿದ್ದಾರೆ.

ಏಜೆನ್ಸೀಸ್ 9 Jun 2016, 4:42 pm
ಗೋರಖ್‌ಪುರ್: ಎಲ್ಲಿ ನೋಡಿದರೂ ಧಾರ್ಮಿಕ ಅಸಹಿಷ್ಣುತೆಯದ್ದೇ ಸುದ್ದಿ. ಇದರಿಂದ ಬೇಸತ್ತ ಮಂದಿಗೆ ಮುದ ನೀಡುವಂಥ ಸುದ್ದಿಯೊಂದು ಇಲ್ಲಿದೆ. ಆಂಜನೇಯನ ಭಕ್ತರೊಬ್ಬರು ರಂಜಾನ್ ಉಪವಾಸ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆಯುತ್ತಿದ್ದಾರೆ.
Vijaya Karnataka Web this hanuman bhakt is also a rozedaar
ರಂಜಾನ್ ಉಪವಾಸ ಮಾಡ್ತಾರೆ ಈ ಆಂಜನೇಯನ ಭಕ್ತ


ಸತತ ಕಳೆದ 29 ವರ್ಷಗಳಿಂದಲೂ ಲಾಲ್‌ಬಾಬು ಎಂಬ ಇವರು ರಂಜಾನ್ ಉಪವಾಸ ಕೈಗೊಳ್ಳುತ್ತಿದ್ದಾನೆ. ಇಲ್ಲಿನ ಉರ್ದು ಬಜಾರ್‌ನಲ್ಲಿ ಗೊಂಬೆ ಅಂಗಡಿ ಇಟ್ಟಿಕೊಂಡಿರುವ ಇವರಿಗೆ, ಇಂಥ ಸತ್ಕಾರ್ಯದಿಂದ ಆಂಜನೇಯ ಮುನಿಸಿಕೊಳ್ಳುವುದಿಲ್ಲವೆಂಬ ವಿಶ್ವಾಸವಿದೆ.

'ಎಲ್ಲ ಧರ್ಮಗಳ ಉದ್ದೇಶವೂ ಒಂದೇ ಆಗಿದ್ದು, ಅವಿಚ್ಛಿನ್ನ ಶಕ್ತಿಯನ್ನು ಎಲ್ಲರೂ ನಂಬುತ್ತಾರೆ. ಅದಕ್ಕಾಗಿಯೇ ಎಲ್ಲರೂ ಪ್ರಾರ್ಥಿಸುವುದು,' ಎನ್ನುತ್ತಾರೆ ಬಾಬು.

'ನನ್ನ ತಂದೆ ತನ್ನದೇ ಅಂಗಡಿಯೊಂದನ್ನು ತೆರೆದಾಗ ರಂಜಾನ್ ಉಪವಾಸ ಮಾಡುತ್ತೇನೆಂದು ಹರಕೆ ಹೊತ್ತಿದ್ದರು. ಆಸೆ ಈಡೇರಿದ್ದು, ನಂತರ ಪ್ರತಿ ವರ್ಷವೂ ಅದಕ್ಕೆ ಬದ್ಧರಾಗಿರುತ್ತಿದ್ದರು. ನನಗೂ ಒಂದು ಮಗು ಕರುಣಿಸಿದರೆ, 10 ದಿನ ಉಪವಾಸ ಮಾಡುವುದಾಗಿ ಹರಕೆ ಹೊತ್ತಿದ್ದೆ. ದೇವರು ಕಣ್ಣು ತೆರೆದ. ಅದಕ್ಕೆ ಕಳೆದ 29 ವರ್ಷಗಳಿಂದ ರಂಜಾನ್‌ನ ಮೊದಲ 10 ದಿನಗಳ ಕಾಲ ತಪ್ಪದೇ ಉಪವಾಸ ಮಾಡುತ್ತಿದ್ದೇನೆ,' ಎನ್ನುತ್ತಾರೆ ಬಾಬು.

ರಂಜಾನ್ ವೇಳೆಯಲ್ಲಿ ಬಾಬು ಸಾಕಷ್ಟು ಧರ್ಮ ಕಾರ್ಯಗಳನ್ನೂ ಮಾಡುತ್ತಾರೆ. 'ಈ ಪವಿತ್ರ ಮಾಸ ಕೇವಲ ಉಪವಾಸ ಮಾಡುವುದಲ್ಲ, ಬದಲಾಗಿ ಶ್ರದ್ಧಾ ಭಕ್ತಿಯುಳ್ಳ ಜೀವನ ನಡೆಸಲು ಸಹಕಾರಿ. ಈ ವೇಳೆಯಲ್ಲಿ ಅನ್ಯರಿಗೆ ಸಹಾಯ ಮಾಡಬೇಕು. ವಿಶೇಷವಾಗಿ ಮಂಗಳವಾರದಂದು ಆಂಜನೇಯನ ಪೂಜೆಗೆ ಮೀಸಲಿಡುವ ಜತೆಗೆ, ಹೆಚ್ಚಿನ ದಾನ ಧರ್ಮಗಳಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಧರ್ಮದಲ್ಲಿ ಒಳ್ಳೆಯದಿದ್ದರೂ ಅದನ್ನು ಸ್ವೀಕರಿಸಬೇಕು,' ಎನ್ನುತ್ತಾರೆ ಬಾಬು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ