ಆ್ಯಪ್ನಗರ

ಮಹಾರಾಷ್ಟ್ರದ ಈ ಗ್ರಾಮದ ಜನ ಹಾಲಿಗೆ ಹಣ ಪಡೆಯಲ್ಲ, ಉಚಿತವಾಗಿ ನೀಡುತ್ತಾರೆ: ಕಾರಣವೇನು?

ಹಿಂಗೋಲಿ ಜಿಲ್ಲೆಯ ಈ ಗ್ರಾಮದ ಹೆಸರು ಎಲೆಗಾಂವ್‌ ಗೌಳಿ. ಊರಿನ ಹೆಸರಿನ ಅರ್ಥವೇ ಹಾಲು ಮಾರಾಟಗಾರರ ಹಳ್ಳಿ ಎಂದು!. ಆದರೆ ಹಾಲನ್ನು ಮಾರಾಟ ಮಾಡಲ್ಲ, ಉಚಿತವಾಗಿ ಕೊಡುತ್ತಾರೆ. ಗ್ರಾಮದಲ್ಲಿನ ಬಹುತೇಕ ಮನೆಗಳಲ್ಲಿ ವಿವಿಧ ತಳಿಯ ಹಸುಗಳು, ಎಮ್ಮೆಗಳು ಹಾಗೂ ಮೇಕೆಗಳನ್ನು ಸಾಕಿದ್ದಾರೆ.

Vijaya Karnataka Web 14 Aug 2020, 7:47 am
ಗೌಳಿ: ನಿತ್ಯದ ಅಗತ್ಯ ವಸ್ತುಗಳಲ್ಲಿ ದಿನಸಿ, ತರಕಾರಿಗಳಿಂತ ಮೇಲಿನ ಸ್ಥಾನವನ್ನು ಹಾಲು ಪಡೆದುಕೊಂಡಿದೆ. ನಮಗೇ ಕಾಫಿ, ಟೀಗೆ ಹಾಲು ಬೇಕು. ಮಕ್ಕಳಿಗೂ ಪೋಷಕ ಆಹಾರವಿದು. ಹೈನುಗಾರಿಕೆ ಈಗ ಬಹುತೇಕ ಗ್ರಾಮೀಣ ಕುಟುಂಬಗಳ ಆದಾಯದ ಮೂಲವೂ ಹೌದು. ಹೀಗಿರುವಾಗ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿಹಾಲು ಮತ್ತು ಅದರ ಉತ್ಪನ್ನಗಳನ್ನು ಉಚಿತವಾಗಿ ಹಂಚುತ್ತಾರೆ ಎಂದರೆ ನಂಬುತ್ತೀರಾ!
Vijaya Karnataka Web cow-milk


ಹೌದು, ಹಿಂಗೋಲಿ ಜಿಲ್ಲೆಯ ಈ ಗ್ರಾಮದ ಹೆಸರು ಎಲೆಗಾಂವ್‌ ಗೌಳಿ. ಊರಿನ ಹೆಸರಿನ ಅರ್ಥವೇ ಹಾಲು ಮಾರಾಟಗಾರರ ಹಳ್ಳಿ ಎಂದು!. ಆದರೆ ಹಾಲನ್ನು ಮಾರಾಟ ಮಾಡಲ್ಲ, ಉಚಿತವಾಗಿ ಕೊಡುತ್ತಾರೆ. ಗ್ರಾಮದಲ್ಲಿನ ಬಹುತೇಕ ಮನೆಗಳಲ್ಲಿ ವಿವಿಧ ತಳಿಯ ಹಸುಗಳು, ಎಮ್ಮೆಗಳು ಹಾಗೂ ಮೇಕೆಗಳನ್ನು ಸಾಕಿದ್ದಾರೆ.

ಕೃಷ್ಣನೇ ಕುಲದೈವ!
ಈ ಗ್ರಾಮದಲ್ಲೊಂದು ಕೃಷ್ಣನ ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 550 ಕುಟುಂಬಗಳು ಈ ಗ್ರಾಮದಲ್ಲಿ ವಾಸವಾಗಿದ್ದು ಗೌಳಿಗರೇ ಹೆಚ್ಚಿನ ಸಂಖ್ಯೆಯಲಿದ್ದಾರೆ. ವಿವಿಧ ಧರ್ಮಗಳ ಜನರೂ ನೆಲೆಸಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ‌ಆರೋಗ್ಯ ಸ್ವಲ್ಪ ಚೇತರಿಕೆ!

ಅವರು ಕೂಡ ತಮ್ಮ ಮನೆಯ ಹಾಲನ್ನು ಹಣಕ್ಕೆ ಮಾರಿಕೊಳ್ಳುವುದಿಲ್ಲ. ''ಈ ಗ್ರಾಮದ ಮೂಲ ನಿವಾಸಿಗರು ಕೃಷ್ಣನ ವಂಶಸ್ಥರು. ಹೀಗಾಗಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಹಣಕ್ಕೆ ಮಾರುವುದಿಲ್ಲ,'' ಎನ್ನುತ್ತಾರೆ ಗ್ರಾಮದ ಮುಖ್ಯಸ್ಥರಾ¨ ಶೇಖ್‌ ಕೌಸರ್‌ ಮತ್ತು ಗ್ರಾಮದ ನಿವಾಸಿ ರಾಜಾಭಾವು ಮಂದಾಡೆ.

ಹಾಲು ಉತ್ಪಾದನೆ ಹೆಚ್ಚಾದರೆ ಉತ್ಪನ್ನಗಳ ರೂಪ!
ಕೆಲವೊಮ್ಮೆ ಗ್ರಾಮದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾದಾಗ ಅದರಿಂದ ಇತರ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಅಕ್ಕಪಕ್ಕದ ಗ್ರಾಮ, ನಗರಗಳಲ್ಲಿಅಗತ್ಯವಿರುವ ಕಡೆಗೆ ಉಚಿತವಾಗಿ ವಿತರಿಸುತ್ತಾರೆ.

ತಲೆತಲಾಂತರದ ಸಂಪ್ರದಾಯ

ಲೀಟರ್‌ಗಟ್ಟಲೆ ಸಂಗ್ರಹವಾದರೂ ಉಚಿತವಾಗಿಯೇ ಪೂರೈಕೆ

ಹಾಲಿನ ಉತ್ಪನ್ನಗಳಿಗೂ ನಯಾಪೈಸೆ ಪಡೆಯಲ್ಲ

ಇದು ಗ್ರಾಮದಲ್ಲಿತಲೆಮಾರುಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ