ಆ್ಯಪ್ನಗರ

ಮಲ್ಯ ಸಾಲಕ್ಕೆ ಮನಮೋಹನ್‌ ಸಿಂಗ್‌ ಜಾಮೀನುದಾರ!

ಮಲ್ಯ ಸಾಲಕ್ಕೆ ಮನಮೋಹನ್‌ ಸಿಂಗ್‌ ಜಾಮೀನು ನೀಡಿದ್ದಾರಂತೆ, ಹೀಗಂತಾ ನೀವೆಲ್ಲ ಅಚ್ಚರಿ ಆಗಬೇಡಿ.

ಏಜೆನ್ಸೀಸ್ 21 May 2016, 8:13 pm
ಪಿಲಿಬಿತ್‌: ಮಲ್ಯ ಸಾಲಕ್ಕೆ ಮನಮೋಹನ್‌ ಸಿಂಗ್‌ ಜಾಮೀನು ನೀಡಿದ್ದಾರಂತೆ, ಹೀಗಂತಾ ನೀವೆಲ್ಲ ಅಚ್ಚರಿ ಆಗಬೇಡಿ.
Vijaya Karnataka Web this manmohan singh is vijay mallyas guarantor
ಮಲ್ಯ ಸಾಲಕ್ಕೆ ಮನಮೋಹನ್‌ ಸಿಂಗ್‌ ಜಾಮೀನುದಾರ!


ಉತ್ತರ ಪ್ರದೇಶದ ಫಿಲಿಬಿತ್‌ನ ಖಜುರಿಯಾ ನವೀರಾಮ್‌ ಗ್ರಾಮದ ಸಣ್ಣ ರೈತ ಮನಮೋಹನ್‌ ಸಿಂಗ್‌ ಮಲ್ಯ ಸಾಲಕ್ಕೆ ಭದ್ರತೆ ಒದಗಿಸಿದ್ದಾರಂತೆ. ಹೀಗಂತಾ ಹೇಳಿರುವ ಬ್ಯಾಂಕ್‌ ಆಫ್‌ ಬರೋಡಾದ ನಾಂದಾ ಶಾಖೆ, ಸಿಂಗ್‌ಗೆ ನೋಟಿಸ್‌ ನೀಡಿದ್ದು, ಅವರ ಎರಡೂ ಖಾತೆಗಳನ್ನು ಅಮಾನತಿನಲ್ಲಿಟ್ಟಿದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ.

ಮುಂಬಯಿ ಬ್ರಾಂಚ್‌ನಿಂದ ಸ್ಥಳೀಯ ಶಾಖೆಯ ಮ್ಯಾನೇಜರ್‌ಗೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಸ್ಥಳೀಯ ಬ್ಯಾಂಕ್‌ ಈ ಕ್ರಮಕೈಗೊಂಡಿದೆ. ಈ ರೈತನ ಒಂದು ಖಾತೆಯಲ್ಲಿ 12 ಸಾವಿರ ರೂ. ಇದ್ದರೆ, ಮತ್ತೊಂದು ಖಾತೆಯಲ್ಲಿ ನಾಲ್ಕು ಸಾವಿರ ರೂ. ಹಣವಿತ್ತು.

ರೈತನಿಗೆ ತೊಂದರೆ:

ವಿಜಯ… ಮಲ್ಯಗೆ ಜಾಮೀನು ನೀಡಿದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ರೈತನಿಗೆ ಸಿಗಬಹುದಾದ ಎಲ್ಲ ಸವಲತ್ತುಗಳನ್ನೂ ನಿಲ್ಲಿಸಿದೆ. ಸಿಗಬೇಕಾದ ಸಬ್ಸಿಡಿಯೂ ನಿಂತಿದೆ. ಬ್ಯಾಂಕ್‌ನ ಈ ಧೋರಣೆಯಿಂದ ರೈತ ಮನಮೋಹನ್‌ ಸಿಂಗ್‌ ಅಕ್ಷರಶಃ ಕಂಗಾಲಾಗಿದ್ದಾರೆ.

ಮಲ್ಯ ಗೊತ್ತೇ ಇಲ್ಲವಂತೆ: ವಿಶೇಷ ಎಂದರೆ, ಮಲ್ಯ ಸಾಲಕ್ಕೆ ಭದ್ರತೆ ಒದಗಿಸಿರುವ ಮನಮೋಹನ ಸಿಂಗ್‌ಗೆ ಅವರು ಯಾರೂ ಅಂತಾ ಗೊತ್ತೆ ಇಲ್ಲವಂತೆ. ‘ಇವೆಲ್ಲವೂ ಹೇಗೆ ನಡೆದಿವೆ ಎನ್ನವುದು ನನಗೆ ಗೊತ್ತಿಲ್ಲ. ಮಲ್ಯ ಎನ್ನುವವರು ಯಾರೂ ನನ್ನ ಪರಿಚಯದವರಿಲ್ಲ. ನನ್ನ ಜೀವನದಲ್ಲಿಯೆ ಒಮ್ಮೆಯೂ ಮುಂಬಯಿ ಹಾಗೂ ಲಖನೌಗೆ ನಾನು ಭೇಟಿ ನೀಡಿಲ್ಲ’ ಅಂತಿದ್ದಾರೆ ಮನಮೋಹನ್‌ ಸಿಂಗ್‌.

ಬೆಳೆದ ಎಲ್ಲ ಬೆಳೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದೇನೆ.. ಬೆಂಬಲ ಬೆಲೆ, ಸಬ್ಸಿಡಿ ಸೌಲಭ್ಯಗಳು ಇಲ್ಲವಾಗಿದೆ. ಸಬ್ಸಿಡಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಆಗುವ ಕಾರಣ ನನಗೆ ಸಿಗುತ್ತಿಲ್ಲ. ಈ ಕುರಿತು ಮುಂಬಯಿ ಶಾಖೆಗೆ ಪತ್ರ ಬರೆದಿರುವುದಾಗಿ ಮನಮೋಹನ್‌ ಸಿಂಗ್‌ ಹೇಳಿಕೊಂಡಿದ್ದಾರೆ.

ಈ ರೈತ ಹೇಳುವಂತೆ,ಎರಡು ವರ್ಷಗಳ ಹಿಂದೆ ನಾಲ್ಕು ಲಕ್ಷ ರೂ ಸಾಲ ಪಡೆದಿದ್ದೆ, ಈ ಸಂಬಂಧ ನನ್ನ ಹೊಲದ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿದ್ದೆ ಅಷ್ಟೇ ಗೊತ್ತು ಎಂದಿದ್ದಾರೆ.

ದೂರು ನೀಡಿದರೆ ಪರಿಶೀಲಿಸುವೆ: ಈ ನಡುವೆ, ಈ ವಿಷಯ ತಮಗೆ ಗೊತ್ತಿಲ್ಲ. ಏನೆ ಆಗಲಿ ಈ ಬಗ್ಗೆ ನನಗೆ ಲಿಖಿತ ದೂರು ನೀಡಿದರೆ, ಈ ಬಗ್ಗೆ ವಿಚಾರಿಸುತ್ತೇನೆ ಎಂದು ಡಿಸಿ ಮಾಸೂಮ್‌ ಅಲಿ ತಿಳಿಸಿದ್ದಾರೆ.

ಮತ್ತೊಂದೆಡೆ, ಸ್ಥಳೀಯ ಬ್ರಾಂಚ್‌ನ ಮ್ಯಾನೇಜರ್‌ ಮಂಗೆ ರಾಮ್‌ ಮಾತನಾಡಿ, ರೈತ ಕಳೆದ 8 ವರ್ಷಗಳಿಂದ ಖಾತೆ ಹೊಂದಿದ್ದಾರೆ ಎನ್ನುವ ಮೂಲಕ ರೈತರನ ಪರ ಉತ್ತಮ ವರದಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ, ಮುಂಬಯಿ ಬ್ರಾಂಚ್‌ನ ಅಧಿಕಾರಿ ಲಾಲ್‌ ಮಾತನಾಡಿ, ಪ್ರಾದೇಶಿಕ ಬ್ರಾಂಚ್‌ನಿಂದ ಹೊಸ ಮಾಹಿತಿ ಪಡೆದಿದ್ದು, ತಕ್ಷಣವೇ ಅವರ ಖಾತೆ ಚಾಲನೆಗೊಳಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ