ಆ್ಯಪ್ನಗರ

ರಕ್ಷೆ ನೀಡಬೇಕಾದವ ಜೈಲಲ್ಲಿ: 21ವರ್ಷದಿಂದ ಪಾಕ್‌ಗೆ ರಾಖಿ ಕಳುಹಿಸುತ್ತಿರುವ ರೇಖಾ

ಇಂದು ದೇಶಾದ್ಯಂತ ರಕ್ಷಾಬಂಧನದ ಸಂಭ್ರಮ. ಸಹೋದರಿಯರು ತಮ್ಮ ಅಣ್ಣತಮ್ಮಂದಿರಿಗೆ ಇಂದು ರಾಖಿ ಕಟ್ಟುತ್ತಾರೆ. ದೂರದಲ್ಲಿದ್ದ ಸಹೋದರರಿಗೆ ಪೋಸ್ಟ್ ಮಾಡುತ್ತಾರೆ. ಆಕೆ ಕೂಡ ತನ್ನ ಸಹೋದರನಿಗಾಗಿ ರಾಖಿ ಖರೀದಿಸಿದ್ದಾಳೆ. ಪ್ರೀತಿ, ಭರವಸೆ ತುಂಬಿದ ಕಾಗದ ಬರೆದು ಆತನಿಗೆ ರಾಖಿ ರವಾನಿಸಿದ್ದಾಳೆ. ಆಕೆ ರಾಖಿ ರವಾನಿಸಿದ ವಿಳಾಸ ಹೀಗಿದೆ: ಕೋಟ್ ಲಖ್ಪತ್ ಜೈಲು, ಪಾಕಿಸ್ತಾನ.

TIMESOFINDIA.COM 26 Aug 2018, 3:42 pm
ಅಹಮದಾಬಾದ್: ಇಂದು ದೇಶಾದ್ಯಂತ ರಕ್ಷಾಬಂಧನದ ಸಂಭ್ರಮ. ಸಹೋದರಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ದೂರದಲ್ಲಿದ್ದ ಸಹೋದರರಿಗೆ ಪೋಸ್ಟ್ ಮಾಡುತ್ತಾರೆ. ಆಕೆ ಕೂಡ ತನ್ನ ಸಹೋದರನಿಗಾಗಿ ರಾಖಿ ಖರೀದಿಸಿದ್ದಾಳೆ. ಪ್ರೀತಿ, ಭರವಸೆ ತುಂಬಿದ ಕಾಗದ ಬರೆದು ಆತನಿಗೆ ರಾಖಿ ರವಾನಿಸಿದ್ದಾಳೆ. ವಿಳಾಸ ಹೀಗಿದೆ: ಕೋಟ್, ಲಖ್ಪತ್ ಜೈಲು, ಪಾಕಿಸ್ತಾನ.
Vijaya Karnataka Web Rekha


ಹೌದು ಆಕೆ ಪಾಕಿಸ್ತಾನದ ಜೈಲಿನಲ್ಲಿ ಸೆರೆವಾಸವನ್ನು ಅನುಭವಿಸುತ್ತಿರುವ ಸಹೋದರನಿಗೆ ರಾಖಿ ಕಳುಹಿಸಿದ್ದಾಳೆ. ಕಳೆದ 21 ವರ್ಷಗಳಿಂದ ರೇಖಾ ಯಾದವ್ (45) ಪ್ರತಿ ವರ್ಷ ರಕ್ಷಾಬಂಧನ ಸನ್ನಿಹಿತವಾಗುತ್ತಿದ್ದಂತೆ ಈ ಬಾರಿಯಾದರೂ ಸಹೋದರ ಕುಲ್ದೀಪ್ ಮನೆಗೆ ಹಿಂತಿರುಗುತ್ತಾನೆ ಎಂಬ ನಿರೀಕ್ಷೆಯ ನೊಗ ಹೊತ್ತು ರಾಖಿ ಕಳುಹಿಸುತ್ತಾಳೆ. ನನ್ನ ಸಹೋದರ ಬದುಕಿದ್ದರೆ ರಾಖಿ ಅವನಿಗೆ ತಲುಪಿರಬಹುದು ಎಂಬ ಆಶಯದೊಂದಿಗೆ ನಿದ್ದೆ ಇಲ್ಲದ ರಾತ್ರಿಗಳನ್ನು ಸವೆಸುತ್ತಿದ್ದಾಳೆ. ಭಾರತದ ಗುಪ್ತಚರ ಎಂಬ ಆರೋಪದ ಮೇಲೆ 1994ರಿಂದ ಕುಲ್ದೀಪ್ ಯಾದವ್ ಪಾಕಿಸ್ತಾನ ಜೈಲಿನಲ್ಲಿದ್ದಾನೆ.

ಕುಲ್ದೀಪ್ 1994ರಲ್ಲಿ ನಾಪತ್ತೆಯಾಗಿದ್ದ. 1997ರಲ್ಲಿ ಆತ ಪಾಕಿಸ್ತಾನದ ಜೈಲಿನಲ್ಲಿರುವುದು ನಮಗೆ ಗೊತ್ತಾಯಿತು. ಆಗಿನಿಂದ ನಾನು ಪ್ರತಿವರ್ಷ ರಾಖಿ ಕಳುಹಿಸುತ್ತಿದ್ದೇನೆ. 2011ರವರೆಗೆ ಅವನ ಪತ್ರ ಬರುತ್ತಿತ್ತು. ಬಳಿಕ ಆತನಿಂದ ಪತ್ರ ಬರಲೇ ಇಲ್ಲ. ಹೀಗಾಗಿ ನಮಗೆ ಏನೋ ಕೆಟ್ಟದಾಗಿರಬಹುದೆಂಬ ಚಿಂತೆ ಕಾಡುತ್ತದೆ. ಆತ ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ. ನಾ ಕಳುಹಿಸಿದ ರಾಖಿ ಅವನಿಗೆ ತಲುಪಿತಾ? ಅದನ್ನು ಕೈಯಿಗೆ ಕಟ್ಟಿಕೊಂಡನಾ? ಆತ ಬರಲೆಂದು ನಾವು ಪ್ರಾರ್ಥನೆ ಮಾಡುತ್ತಿದ್ದೇವೆ ಎಂಬುದವನಿಗೆ ತಿಳಿಯತ್ತಾ? ಎಂದು ಪ್ರಶ್ನಿಸುತ್ತಾ, ತಡೆ ಹಿಡಿಯಲಾಗದ ಭಾವನೆಗಳನ್ನು ಕಣ್ಣೀರಿನ ಮೂಲಕ ಹರಿಸುತ್ತಾರೆ, ಅಹಮದಾಬಾದಿನ ಚಂದ್ರಖೇಡಾ ನಿವಾಸಿಯಾಗಿರುವ ರೇಖಾ ಹೇಳುತ್ತಾರೆ.

ನನ್ನ ಸಹೋದರ ಬದುಕಿದ್ದಾನೆ ಎಂಬ ಭರವಸೆ ಕೇಳಿ ಬರಲಿದೆ ಎಂದು ನಿರೀಕ್ಷಿಸುತ್ತಿದ್ದೇನೆ. ಸಪ್ಟೆಂಬರ್ 10, 20121ರಲ್ಲಿ ಆತ ಶಿಕ್ಷೆ ಮುಗಿಸಿ ವಾಪಸ್ಸಾಗುತ್ತಾನೆ ಎಂದು ಕೇಂದ್ರ ಸರಕಾರ ಹೇಳಿದೆ. ಇಷ್ಟು ವರ್ಷ ಕಾದಿದ್ದೇವೆ. ಆತ ಬದುಕಿದ್ದಾನೆಂದು ತಿಳಿದು ಬಂದರೆ ಮತ್ತೆ ಮೂರು ವರ್ಷ ಖುಷಿಯಿಂದ ಕಾಯುತ್ತೇನೆ, ಎನ್ನುತ್ತಾಳೆ ರೇಖಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ