ಆ್ಯಪ್ನಗರ

ಪೋಲಿಯೋ ನಿರೋಧಕ ಲಸಿಕೆಯಲ್ಲೇ ಇದೆ ಪೋಲಿಯೋ ವೈರಸ್‌; ವೈದ್ಯಲೋಕದಲ್ಲಿ ಭಾರಿ ಆತಂಕ

ಮಕ್ಕಳಿಗೆಪೋಲಿಯೋ ಬರದಂತೆ ತಡೆಯಲು ನೀಡಿದ ಲಸಿಕೆಯಿಂದಲೇ ಮಕ್ಕಳ ಪ್ರಾಣಕ್ಕೆ ಅಪಾಯ ಎದುರಾಗಿದೆ. ಮಕ್ಕಳಿಗೆ ನೀಡಿದ ಪೋಲಿಯೋ ಲಸಿಕೆಯಲ್ಲಿ ಟೈಪ್ 2 ವೈರಸ್ ಪತ್ತೆಯಾಗಿದೆ.

Times Now 4 Oct 2018, 2:17 pm
ಮುಂಬಯಿ: ಪೋಲಿಯೋ ಮುಕ್ತ ದೇಶ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ ಔಷಧದಿಂದಲೇ ಈಗ ಅಪಾಯ ಎದುರಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ.
Vijaya Karnataka Web polio


ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶದಲ್ಲಿ ಮಕ್ಕಳಿಗೆ ನೀಡಲಾಗಿರುವ ಪೋಲಿಯೋ ಲಸಿಕೆಯಲ್ಲಿ ಟೈಪ್‌ 2 ವೈರಸ್‌ ಪತ್ತೆಯಾಗಿದ್ದು, ಇದರಿಂದ ಸಾವಿರಾರು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಘಾಜಿಯಾಬಾದ್‌ ಮೂಲದ ಖಾಸಗಿ ಔಷಧಿ ತಯಾರಿಕ ಕಂಪನಿ Bio Med Pvt Ltd ತಯಾರಿಸಿದ್ದ 1.5 ಲಕ್ಷ ಪೋಲಿಯೋ ಲಸಿಕೆಯ ವೈಯಲ್ಸ್‌ನಲ್ಲಿ (vials) ನಲ್ಲಿ ವೈರಸ್ ಟೈಪ್‌ 2 ಪತ್ತೆಯಾಗಿದ್ದು, ಈ ಕಂಪನಿಯ ಲಸಿಕೆಗಳನ್ನು ಬ್ಯಾನ್‌ ಮಾಡಲಾಗಿದೆ.

1999ರಲ್ಲಿಯೇ ವಿಶ್ವದಿಂದ ಪೋಲಿಯೋ ಮುಕ್ತ ಮಾಡಲಾಗಿತ್ತು. ಅಲ್ಲದೆ 2016ರ ನಂತರ ಇದಕ್ಕೆ ಲಸಿಕೆಗಳನ್ನು ಕೂಡ ನೀಡುತ್ತಿರಲಿಲ್ಲ.

ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಒಂದು ಮಗುವಿನಲ್ಲಿ ಈ ವೈರಸ್‌ ಪತ್ತೆಯಾಗಿದ್ದು ದೇಶದಾದ್ಯಂತ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

ಈ ಪೋಲಿಯೋ ಲಸಿಕೆಯಲ್ಲಿ ಪಿ1 ಮತ್ತು ಪಿ3 ಅಂಶಗಳೇ ಇಲ್ಲವಾಗಿದೆ. ಆದರೆ ಈಗಾಗಲೇ ಮುಕ್ತ ಮಾಡಲಾಗಿರುವ ಪಿ2 ವೈರಸ್‌ ಹೆಚ್ಚು ಕಂಡುಬಂದಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ.

ವಿಶ್ವದಲ್ಲಿಯೇ ಇಲ್ಲವಾಗಿದ್ದ ಟೈಪ್‌ 2 ವೈರಸ್‌ ಕಂಪನಿಗೆ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆ ಈಗ ಕಾಡಿದೆ.

ಆರೋಗ್ಯ ಇಲಾಖೆ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಮಕ್ಕಳಿಗೆ ನೀಡಿದ್ದ ಓರಲ್‌ ಪೋಲಿಯೋ ಲಸಿಕೆಯಲ್ಲಿ ಟೈಪ್‌ 2 ವೈರಸ್‌ ಇರುವುದಾಗಿ ದೃಢಪಟ್ಟಿದೆ.

ಈ ಲಸಿಕೆ ಪಡೆದಿರುವ ಮಕ್ಕಳಿಗೆ ಅಪಾಯ ಉಂಟಾಗದದಿರಲು ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮಕ್ಕಳಿಗೆ ಟೈಪ್ 1, ಟೈಪ್‌ 2, ಟೈಪ್ 3 ವಿರುದ್ಧ ರೋಗ ನಿರೋಧಕವನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ