ಆ್ಯಪ್ನಗರ

ಮತದಾನ ಗಲಭೆ : ಶ್ರೀನಗರದಲ್ಲಿ 3 ಸಾವು

ಉಪಚುನಾವಣೆಯ ಮತದಾನದ ವೇಳೆ ಘರ್ಷಣೆಯಲ್ಲಿ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 Apr 2017, 4:00 pm
ಶ್ರೀನಗರ: ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭೆ ಉಪ ಚುನಾವಣೆಯ ಮತದಾನದ ವೇಳೆ ನಡೆದ ಘರ್ಷಣೆಯಲ್ಲಿ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
Vijaya Karnataka Web three killed several injured as mobs storm polling booths
ಮತದಾನ ಗಲಭೆ : ಶ್ರೀನಗರದಲ್ಲಿ 3 ಸಾವು


ಬುದ್ಗಾಮ್ ನ ಚರಾರ್-ಇ- ಷರೀಫ್ ಬಳಿಯ ಪಕೇರ್ಪೊರಾ ಮತಗಟ್ಟೆ ಬಳಿ ನೂರಾರು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ತಡೆಗಟ್ಟಲು ಭದ್ರತಾ ಪಡೆ ಹಲವಾರು ಸುತ್ತಿನಲ್ಲಿ ಎಚ್ಚರಿಕೆ ನೀಡಿದ್ದರೂ, ಪ್ರತಿಭಟನಾಕಾರರು ಬಗ್ಗಲಿಲ್ಲ. ನಂತರ ಅನಿವಾರ್ಯವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಯೋಧರು ಗುಂಡು ಹಾರಿಸಿದ್ದಾರೆ, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

ಮೃತರನ್ನು ಮೊಹಮ್ಮದ್‌ ಅಬ್ಬಾಸ್‌ (20) ಹಾಗೂ ಫಯಾಜ್‌ ಅಹ್ಮದ್‌ ರಾಥರ್‌ (15) ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಶ್ರೀನಗರ ಲೋಕಸಭಾ ವ್ಯಾಪ್ತಿಯ ಶ್ರೀನಗರ, ಬುದ್ಗಾಮ್‌ ಮತ್ತು ಗಂದರ್ಬಾಲ್‌ನಲ್ಲಿ ಪ್ರತಿಭಟನಾಕಾರರು ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ, ಮತಗಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ