ಆ್ಯಪ್ನಗರ

ಮೂವರು ಉಗ್ರರ ಬಂಧನ: ಶರಣಾಗಲು ಸ್ಥಳೀಯ ಉಗ್ರರಿಗೆ ಪೊಲೀಸರ ಸೂಚನೆ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

Vijaya Karnataka 17 Oct 2017, 9:19 am

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಲಷ್ಕರೆ ತಯ್ಬಾ ಸಂಘಟನೆಯ ಇಬ್ಬರು ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಗುಂಪಿನ ಒಬ್ಬ ಉಗ್ರರನ್ನು ಬಂಧಿಸಲಾಗಿದೆ ಎಂದು ಕಾಶ್ಮೀರದ ಐಜಿಪಿ ಮುನಿರ್‌ ಖಾನ್‌ ಸೋಮವಾರ ತಿಳಿಸಿದ್ದಾರೆ.

''ಅಕ್ಟೋಬರ್‌ 14ರಂದು ಖಾಝಿಬಂದ್‌ ಪ್ರದೇಶದ ಕುಂದ್‌ನಲ್ಲಿ ಇಬ್ಬರು ಭಯೋತ್ಪಾದಕರು ಗಣ್ಯರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿಗಳ ಶಸ್ತ್ರಾಸ್ತಗಳನ್ನು ಕಸಿಯಲು ಯತ್ನಿಸಿದ್ದಾರೆ. ಆದರೆ, ತಕ್ಷಣವೇ ಸ್ಥಳೀಯರು ಎಚ್ಚೆತ್ತುಕೊಂಡು ಅವರ ಮೇಲೆ ತಿರುಗಿಬಿದ್ದಿದ್ದರಿಂದ ಉಗ್ರರ ಉದ್ದೇಶ ನೆರವೇರಲಿಲ್ಲ,'' ಎಂದು ಖಾನ್‌ ತಿಳಿಸಿದ್ದಾರೆ. ಈ ಮಾಹಿತಿ ದೊರೆತ ತಕ್ಷಣವೇ ಪೊಲೀಸ್‌ ಜಂಟಿ ಕಾರ್ಯಪಡೆ ಪ್ರಮುಖ ರಸ್ತೆಗಳಲ್ಲಿನ ಚೆಕ್‌ ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ಕೈಗೊಂಡು ಮೋಟಾರ್‌ಸೈಕಲ್‌ನಲ್ಲಿ ಪಲಾಯನಗೈದಿದ್ದ ಆ ಇಬ್ಬರು ಉಗ್ರರನ್ನು ಬಂಧಿಸಿತು. ಬಂಧಿತರನ್ನು ಖುರ್ಷೀದ್‌ ಅಹಮದ್‌ ದರ್‌ ಹಾಗೂ ಹಾಝಿಖ್‌ ರಾಥರ್‌ ಎಂದು ಗುರುತಿಸಲಾಗಿದ್ದು, ಅವರಿಂದ ಒಂದು ಪಿಸ್ತೂಲು, ಸ್ವಲ್ಪ ಮದ್ದುಗುಂಡು ಹಾಗೂ ಒಂದು ಜೀವಂತ ಗ್ರೆನೇಡ್‌ ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ಲಷ್ಕರೆ ಸಂಘಟನೆಗೆ ಸೇರಿದವರು.

ಅದಾದ ಬಳಿಕ, ಉಗ್ರಗಾಮಿಗಳಿಗೆ ಸಹಕರಿಸುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಕುಲ್ಗಾಮ್‌ನಲ್ಲಿ ಮೆಡಿಕಲ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಖಾನ್‌ ತಿಳಿಸಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ಜೈಶ್‌-ಇ-ಮೊಹಮ್ಮದ್‌ ಗುಂಪಿನ ಉಗ್ರಗಾಮಿಯನ್ನು ಬಂಧಿಸಲಾಗಿತ್ತು.

ಬಾಕ್ಸ್‌

ಉಗ್ರಗಾಮಿಗಳ ವಿರುದ್ಧ ಒಂದೆಡೆ ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದರೆ, ಇನ್ನೊಂದೆಡೆ 'ಶರಣಾಗಿ ಹೊಸ ಜೀವನ ಆರಂಭಿಸಿ' ಎಂದು ಸ್ಥಳೀಯ ಉಗ್ರರಿಗೆ ಪೊಲೀಸರು ಸಲಹೆ ರವಾನಿಸತೊಡಗಿದ್ದಾರೆ. ಬೇಷರತ್‌ ಆಗಿ ಶರಣಾಗಿದ್ದೇ ಆದರೆ, ಪುನರ್‌ವಸತಿ ಕಲ್ಪಿಸಿಕೊಡುವುದಾಗಿ ಸ್ಥಳೀಯ ಉಗ್ರರಿಗೆ ಹೊಸ ಆಮಿಷವೊಡ್ಡಲಾಗಿದೆ. ''ಅವರು ಶಸ್ತ್ರಾಸ್ತ್ರ ಕೆಳಗಿಡಲೇ ಬೇಕು. ಹಾಗೆ ಮಾಡಿದ್ದೇ ಆದಲ್ಲಿ ಅವರಿಗೆ ಪುನರ್‌ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಕಲ ಸಹಕಾರ ನೀಡಲಿದ್ದೇವೆ. ಎನ್‌ಕೌಂಟರ್‌ ಸಂದರ್ಭದಲ್ಲಿ ಕೂಡ ಅವರು ಶರಣಾಗಬಹುದು,'' ಎಂದು ಐಜಿಪಿ ಖಾನ್‌ ತಿಳಿಸಿದ್ದಾರೆ.

Three militants arrested, police asks local militants to surrender
Vijaya Karnataka Web three militants arrested police asks local militants to surrender
ಮೂವರು ಉಗ್ರರ ಬಂಧನ: ಶರಣಾಗಲು ಸ್ಥಳೀಯ ಉಗ್ರರಿಗೆ ಪೊಲೀಸರ ಸೂಚನೆ


Srinagar: Three militants have been arrested in Kashmir, police said today and made a renewed offer to the local militants that they would be rehabilitated if they surrender.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ