ಆ್ಯಪ್ನಗರ

ಮೂವರು ಎನ್ನಾರೈಗಳಿಗೆ ಆಸ್ಪ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ

ವೈದ್ಯಕೀಯ ಕ್ಷೇತ್ರ ಹಾಗೂ ಸಮುದಾಯ ಸೇವೆಯಲ್ಲಿ ದೊಡ್ಡ ಹೆಸರು ಮಾಡಿರುವ ಭಾರತೀಯ ಮೂಲದ ಮೂವರಿಗೆ ಆಸ್ಪ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ...

Vijaya Karnataka Web 28 Jan 2017, 4:00 am

ಮೆಲ್ಬೋರ್ನ್: ವೈದ್ಯಕೀಯ ಕ್ಷೇತ್ರ ಹಾಗೂ ಸಮುದಾಯ ಸೇವೆಯಲ್ಲಿ ದೊಡ್ಡ ಹೆಸರು ಮಾಡಿರುವ ಭಾರತೀಯ ಮೂಲದ ಮೂವರಿಗೆ ಆಸ್ಪ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್‌ ಆಫ್‌ ಆಸ್ಪ್ರೇಲಿಯಾ' ಪದಕ ಪ್ರಶಸ್ತಿ ಸಂದಿದೆ. ಆಸ್ಪ್ರೇಲಿಯಾ ದಿನಾಚರಣೆ ದಿನವೇ ಮೂವರು ಎನ್ನಾರೈಗಳು ಸೇರಿದಂತೆ 950 ಸಾಧಕರಿಗೆ ವಿವಿಧ ವಿಭಾಗಗಳಡಿ ಪ್ರಶಸ್ತಿ ಘೋಷಿಸಲಾಗಿದೆ.

ಸಿಡ್ನಿಯಲ್ಲಿ ವಾಸವಿರುವ ವೈದ್ಯ ಪುರುಷೋತ್ತಮ್‌ ಸಾರ್ವಿಕರ್‌, ಪರ್ತ್‌ ನಿವಾಸಿ ವೈದ್ಯ ಮಾಕನ್‌ ಸಿಂಗ್‌ ಖಾನ್‌ಗುರೆ ಮತ್ತು ಸಿಡ್ನಿಯ ವಿಜಯ್‌ ಕುಮಾರ್‌ ಅವರಿಗೆ ಈ ಅತ್ಯುನ್ನತ ಗೌರವ ಲಭಿಸಿದೆ. ವೈದ್ಯಕೀಯ ಸೇವೆ ಹಾಗೂ ಸಮುದಾಯ ಸೇವೆಯನ್ನು ಪರಿಗಣಿಸಿ ಈ ಮೂವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಸರಕಾರ ಹೇಳಿದೆ.

ಆಸ್ಪ್ರೇಲಿಯನ್‌ ಇಂಡಿಯನ್‌ ಮೆಡಿಕಲ್‌ ಗ್ಯಾಜುಯೇಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿರುವ ಪುರುಷತ್ತೋಮ ಸಾರ್ವಿಕರ್‌ ಸಿಡ್ನಿಯಲ್ಲಿ ವೈದ್ಯ ವೃತ್ತಿ ನಡೆಸಿಕೊಂಡು ಬರುತ್ತಿದ್ದು, 'ಆಕಾಶವಾಣಿ ಸಿಡ್ನಿ' ಎಂಬ ಕಮ್ಯೂನಿಟಿ ರೇಡಿಯೊ ಸ್ಥಾಪಿಸಿ ಆ ಮೂಲಕ ಭಾರತೀಯರನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಇನ್ನು ಪರ್ತ್‌ನ ಮಾಕನ್‌ ಸಿಂಗ್‌ ಖಾನ್‌ಗುರೆ ಅವರು ನ್ಯೂರೋ ರೇಡಿಯಾಲಜಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ನ್ಯೂಕ್ಲಿಯರ್‌ ಮೆಡಿಸಿನ್‌ ಸ್ಪೆಷಲಿಸ್ಟ್‌ ಆಗಿರುವ ತಮಿಳುನಾಡು ಮೂಲದ ವಿಜಯ ಕುಮಾರ್‌ ಅವರು ನ್ಯೂಕ್ಲಿಯರ್‌ ಮೆಡಿಸಿನ್‌ ಮತ್ತು ಜೀವಶಾಸ್ತ್ರದಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ. ಸಿಡ್ನಿ ತಮಿಳು ಸಂಘ ಸ್ಥಾಪಿಸಿ ಆ ಮೂಲಕ ಸಮುದಾಯ ಸೇವೆಗೆ ದೊಡ್ಡ ಕೊಡುಗೆ ಸಲ್ಲಿಸಿದ್ದಾರೆ. 2007 ಮತ್ತು 2014ರಲ್ಲಿ ಇವರಿಗೆ 'ಆಸ್ಪ್ರೇಲಿಯನ್‌ ನ್ಯೂಕ್ಲಿಯರ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಆರ್ಗನೈಜೇಷನ್‌ ಅವಾರ್ಡ್‌' ಲಭಿಸಿತ್ತು.

ಈ ಮೂವರು ವೈದ್ಯರಲ್ಲದೇ ಡಾರ್ವೆನ್‌ ಮೂಲದ ತೇಜಿಂದರ್‌ ಪಾಲ್‌ ಸಿಂಗ್‌ ಅವರಿಗೆ 'ಲೋಕಲ್‌ ಹೀರೊ ಪ್ರಶಸ್ತಿ' ಲಭಿಸಿದೆ. ಅಕ್ಷಯ ಪಾತ್ರದಂತೆ 'ಪುಡ್‌ ವ್ಯಾನ್‌' ಹೆಸರಿನ ಬಿಸಿಯೂಟ ಯೋಜನೆ ಆರಂಭಿಸಿ, ಆ ಮೂಲಕ ಬಡವರ ಏಳಿಗೆಗೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪ್ರತಿ ತಿಂಗಳು ಕೊನೆ ಭಾನುವಾರದಂದು ಉತ್ತರ ಆಸ್ಪ್ರೇಲಿಯಾದಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ