ಆ್ಯಪ್ನಗರ

ಕಣಿವೆ ರಾಜ್ಯದ ಪೊಲೀಸ್ ಪೇದೆ ಕೊಂದಿದ್ದ ಮೂವರು ಉಗ್ರರ ಹತ್ಯೆ

ಜಮ್ಮು - ಕಾಶ್ಮೀರದಲ್ಲಿ ಇತ್ತೀಚೆಗೆ ಪೊಲೀಸ್ ಕಾನ್ಸ್‌ಟೇಬಲ್‌ ಒಬ್ಬರನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಉಗ್ರರಿಗೆ ತಕ್ಕ ಶಾಸ್ತಿಯಾಗಿದೆ. ಕುಲ್ಗಾಂ ಜಿಲ್ಲೆಯಲ್ಲಿ ಬೆಳಂಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ.

TIMESOFINDIA.COM 22 Jul 2018, 3:10 pm
ಶ್ರೀನಗರ: ಜಮ್ಮು - ಕಾಶ್ಮೀರದಲ್ಲಿ ಇತ್ತೀಚೆಗೆ ಪೊಲೀಸ್ ಕಾನ್ಸ್‌ಟೇಬಲ್‌ ಒಬ್ಬರನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಉಗ್ರರಿಗೆ ತಕ್ಕ ಶಾಸ್ತಿಯಾಗಿದೆ. ಕುಲ್ಗಾಂ ಜಿಲ್ಲೆಯಲ್ಲಿ ಬೆಳಂಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ.
Vijaya Karnataka Web jammu kashmir


ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಮುತಲ್‌ಹಾಮಾ ಪ್ರದೇಶದ ಕಾನ್ಸ್‌ಟೇಬಲ್ ನಿವಾಸದಿಂದ ಕಳೆದ ಶುಕ್ರವಾರ ಕಿಡ್ನಾಪ್ ಮಾಡಲಾಗಿತ್ತು. ನಿನ್ನೆ ಈತನ ಮೃತದೇಹ ಪತ್ತೆಯಾಗಿದ್ದು, ತೀವ್ರ ಚಿತ್ರಹಿಂಸೆ ನೀಡಿರುವ ಗುರುತು ಪತ್ತೆಯಾಗಿದೆ. ಇದಕ್ಕೆ ಕಾರಣವಾದ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದ್ದು, ಈವರೆಗೆ ಉಗ್ರರ ಬಳಿಯಿದ್ದ ಮೂರು ಬಂದೂಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಎಸ್‌ಪಿ ವಾಯಿದ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕುಲ್ಗಾಮ್ ಜಿಲ್ಲೆಯ ಖುದ್ವಾನಿಯಲ್ಲಿ ಪೊಲೀಸ್‌ ಕಾನ್ಸ್‌ಟೇಬಲ್ ಸಿ.ಟಿ. ಮೊಹಮ್ಮದ್ ಸಲೀಂನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಉಗ್ರರು ಜಮ್ಮು ಕಾಶ್ಮೀರ ಪೊಲೀಸ್, ಸೇನೆ ಹಾಗೂ ಸಿಆರ್‌ಪಿಎಫ್‌ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಬೆಳಗ್ಗೆ ಡಿಜಿಪಿ ತಿಳಿಸಿದ್ದರು.

ಖುದ್ವಾನಿ ಪ್ರದೇಶದಲ್ಲಿ ಉಗ್ರರಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ, ಭದ್ರತಾ ಪಡೆಗಳು ಬೆಳಗ್ಗೆ ಉಗ್ರರಿಗಾಗಿ ಹುಡುಕಾಟ ನಡೆಸಿದ್ದವು. ಈ ವೇಳೆ, ಉಗ್ರರು ಬಂದೂಕಿನಿಂದ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ಬೆನ್ನಲ್ಲೇ, ಪ್ರತಿ ದಾಳಿ ನಡೆಸಿದ ಜಂಟಿ ಭದ್ರತಾ ಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಇನ್ನು, ಹತ್ಯೆಯಾದ ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಧೃಡಪಟ್ಟಿಲ್ಲ. ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪೊಲೀಸ್‌ ಕಾನ್ಸ್‌ಟೇಬಲ್‌ ಅನ್ನು ಹತ್ಯೆ ಮಾಡಿದೆ ಎಂದು ಕಣಿವೆ ರಾಜ್ಯದ ಪೊಲೀಸರು ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ