ಆ್ಯಪ್ನಗರ

ಮಹಿಳೆಯರು ಸೇರಿ ನಾಲ್ವರು ನಕ್ಸಲರ ಹತ್ಯೆ

ಛತ್ತೀಸ್‌ಗಢದ ಧಮ್‌ತಾರಿ ಜಿಲ್ಲೆಯಲ್ಲಿ ಶನಿವಾರ ನಡೆದ ಭದ್ರತಾ ಪಡೆಗಳ ಜತೆಗಿನ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಹತರಾಗಿದ್ದಾರೆ...

Agencies 7 Jul 2019, 5:00 am
ರಾಯ್‌ಪುರ: ಛತ್ತೀಸ್‌ಗಢದ ಧಮ್‌ತಾರಿ ಜಿಲ್ಲೆಯಲ್ಲಿ ಶನಿವಾರ ನಡೆದ ಭದ್ರತಾ ಪಡೆಗಳ ಜತೆಗಿನ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಹತರಾಗಿದ್ದಾರೆ.
Vijaya Karnataka Web naxal


ಇಲ್ಲಿನ ಖಲ್ಲಾರಿ ಮತ್ತು ಮೆಚ್ಕಾ ಗ್ರಾಮಗಳ ನಡುವೆ ಕಾಡಿನಲ್ಲಿ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ. ವಿಶೇಷ ಕಾರ್ಯಪಡೆ ತಂಡವು ನಕ್ಸಲ್‌ ಬೇಟೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ಕಾಡಿನಲ್ಲಿ ಅವಿತಿದ್ದ ನಕ್ಸಲರು ಗುಂಡಿನ ದಾಳಿ ನಡೆಸಿದರು. ಕೂಡಲೇ ಎಸ್‌ಟಿಎಫ್‌ ತಂಡ ಪ್ರತಿದಾಳಿ ನಡೆಸಿತು ಪೊಲೀಸರು ಮಾಹಿತಿ ನೀಡಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದಿಂದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮಾವೋವಾದಿಗಳ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಏಳು ಶಸ್ತ್ರಾಸ್ತ್ರಗಳೂ ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ