ಆ್ಯಪ್ನಗರ

ತಮ್ಮ ಸೀರೆಯನ್ನೇ ಬಿಚ್ಚಿ ಡ್ಯಾಂನಲ್ಲಿ ಮುಳುಗುತ್ತಿದ್ದ ಯುವಕರಿಗೆಸೆದು ಪ್ರಾಣ ಕಾಪಾಡಿದ ಮೂವರು ಗಟ್ಟಿಗಿತ್ತಿ ಮಹಿಳೆಯರು..!

ಸಿರುವಾಚೂರ್ ಗ್ರಾಮದ ಯುವಕರು ಅಣೆಕಟ್ಟಿನ ನೀರಿನಲ್ಲಿ ಸ್ನಾನ ಮಾಡುವ ವೇಳೆ ಅದೇ ಏರಿಯಾದ ಮೂವರು ಮಹಿಳೆಯರಾದ ಸೆಂಥಮಿಜ್ ಸೆಲ್ವಿ(38) ಮುತ್ತಮಾಳ್(34) ಅನಂತವಲ್ಲಿ(34) ಅಣೆಕಟ್ಟಿನ ಕೆಳಭಾಗದಲ್ಲಿ ಬಟ್ಟೆ ಒಗೆಯುತ್ತಿದ್ದರು. ಅದೇ ಸಮಯದಲ್ಲಿ ಆಟ ಮುಗಿಸಿ ಬಂದ ಯುವಕರು ಮಹಿಳೆಯರಲ್ಲಿ ಸ್ನಾನ ಮಾಡುವ ಬಗ್ಗೆ ಕೇಳಿದ್ದಾರೆ. ಈ ವೇಳೆ ನೀರು ಆಳವಿರುವುದಾಗಿ ಹೇಳಿ, ನೀರಿಗೆ ಇಳಿಯದಂತೆ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

Agencies 10 Aug 2020, 2:14 pm
ತಮಿಳುನಾಡು: ಆಪತ್ಕಾಲದಲ್ಲಿ ಹಿಂದೆಮುಂದೆ ಯೋಚನೆ ಮಾಡದೆ ತತ್‌ಕ್ಷಣ ನೆರವಿಗೆ ಧಾವಿಸೋರು ನಿಜವಾದ ದೇವರು ಅಂತಾರೆ. ಇಲ್ಲೂ ಕೂಡ ಸಾವಿನ ಕದ ತಟ್ಟಿದ್ದ ನಾಲ್ವರು ಪುರುಷರ ನೆರವಿಗೆ ಧಾವಿಸಿದ ಮೂವರು ಮಹಿಳೆಯರು ಇಬ್ಬರ ಪ್ರಾಣ ಕಾಪಾಡುವಲ್ಲಿ ಸಫಲರಾಗಿದ್ದಾರೆ.
Vijaya Karnataka Web Drowning


ನೀರಲ್ಲಿ ಮುಳುಗುತ್ತಿದ್ದ ಪುರುಷರನ್ನು ರಕ್ಷಿಸಲು ತಾವು ಉಟ್ಟಿದ್ದ ಸೀರೆಯನ್ನೇ ಬಿಚ್ಚಿದ ಮಹಿಳೆಯರು ಇಬ್ಬರ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿರೋದು ತಮಿಳುನಾಡಿನಲ್ಲಿ. ಇಲ್ಲಿನ ಪೆರಂಬಲೂರು ಜಿಲ್ಲೆಯಲ್ಲಿರುವ ಕೊಟ್ಟಾರೈ ಡ್ಯಾಂನ ಹತ್ತಿರ ಆಗಸ್ಟ್ 6ರಂದು ಹತ್ತು ಹನ್ನೆರಡು ಮಂದಿಯ ಯುವಕರ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಆಟದ ನಂತರ ಡ್ಯಾಂನ ನೀರಿನಲ್ಲಿ ಸ್ನಾನ ಮಾಡಲು ಮುಂದಾಗಿದ್ದಾರೆ. ಭಾರೀ ಮಳೆಯಿಂದಾಗಿ ಮರುಐಯಾರು ನದಿಗೆ ಕಟ್ಟಲಾಗಿದ್ದ ಡ್ಯಾಂನಲ್ಲಿ ನೀರು ಭರ್ತಿಯಾಗಿದ್ದು ಸುಮಾರು 10-12 ಅಡಿ ಆಳದಷ್ಟು ನೀರು ಇತ್ತು.

ಮಂಗಳೂರಿನ ಭಯಾನಕ ವಿಮಾನ ದುರಂತವನ್ನು ನೆನಪಿಸಿದ ಕೇರಳದ ವಿಮಾನ ಅಪಘಾತ..!

ಸಿರುವಾಚೂರ್ ಗ್ರಾಮದ ಯುವಕರು ಅಣೆಕಟ್ಟಿನ ನೀರಿನಲ್ಲಿ ಸ್ನಾನ ಮಾಡಲು ಮುಂದಾದ ವೇಳೆ ಅದೇ ಏರಿಯಾದ ಮೂವರು ಮಹಿಳೆಯರಾದ ಸೆಂಥಮಿಜ್ ಸೆಲ್ವಿ(38) ಮುತ್ತಮಾಳ್(34) ಅನಂತವಲ್ಲಿ(34) ಅಣೆಕಟ್ಟಿನ ನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದರು. ಅದೇ ಸಮಯದಲ್ಲಿ ಆಟ ಮುಗಿಸಿ ಬಂದ ಯುವಕರು ಮಹಿಳೆಯರಲ್ಲಿ ಸ್ನಾನ ಮಾಡುವ ಬಗ್ಗೆ ಕೇಳಿದ್ದಾರೆ. ಈ ವೇಳೆ ನೀರು ಆಳವಿರುವುದಾಗಿ ಹೇಳಿ, ನೀರಿಗೆ ಇಳಿಯದಂತೆ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ನಡುವೆಯೂ ನಾಲ್ವರು ಯುವಕರು ನೀರಿಗೆ ಹಾರಿದ್ದು, ನೆಲ ಸಿಗದೆ ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ತಕ್ಷಣ ಹಿಂದೆ ಮುಂದೆ ಯೋಚಿಸದ ಮಹಿಳೆಯರು ತಾವು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ ನೀರಿಗೆಸೆದು ಇಬ್ಬರನ್ನು ರಕ್ಷಿಸಿದ್ದಾರೆ.

ಗೌತಮ ಬುದ್ಧ ಭಾರತೀಯ ಎಂದ ಎಸ್‌ ಜೈಶಂಕರ್: ನೇಪಾಳದ ತೀಕ್ಷ್ಣ ಪ್ರತಿಕ್ರಿಯೆ!

ಆದರೆ ಮತ್ತಿಬ್ಬರು ಯುವಕರು ಈಜಾಡಿ ದೂರ ಹೋಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅದಾಗ್ಯೂ ಮೂವರು ಮಹಿಳೆಯರು ನೀರಿಗೆ ಹಾರಿ ಮುಳುಗಿ, ಈಜಾಡಿ ಇನ್ನಿಬ್ಬರನ್ನೂ ರಕ್ಷಿಸೋಕೆ ತಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಪವಿತ್ರನ್(17) ಮತ್ತು ವೈದ್ಯಕೀಯ ವಿದ್ಯಾರ್ಥಿ ರಂಜಿತ್(25) ಎಂದು ಗುರುತಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾದವರು ಕಾರ್ತಿಕ್ ಮತ್ತು ಸೆಂಥಿವೆಲನ್ ಎಂದು ತಿಳಿದುಬಂದಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಸೋಂಕು: ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ!

ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಂದು ತನಿಖೆ ನಡೆಸಿದ್ದಾರೆ. ಸದ್ಯ ತಾವು ಹಿಂದೆಮುಂದೆ ಯೋಚನೆ ಮಾಡದೇ ಮೂವರು ಮಹಿಳೆಯರಾದ ಸೆಂಥಮಿಜ್ ಸೆಲ್ವಿ ಮುತ್ತಮಾಳ್ ಮತ್ತು ಅನಂತವಲ್ಲಿ ಅವರು ಸೀರೆಯನ್ನು ಎಸೆದು ಇಬ್ಬರನ್ನು ರಕ್ಷಿಸಿದ್ದಲ್ಲದೇ ನೀರಿಗೆ ಹಾರಿ ಇನ್ನಿಬ್ಬರನ್ನು ರಕ್ಷಿಸೋಕೆ ಮುಂದಾಗಿರುವ ಧೈರ್ಯದ ಬಗ್ಗೆ ತಮಿಳುನಾಡಿನೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ