ಆ್ಯಪ್ನಗರ

ನರಭಕ್ಷಕ ಹುಲಿ ಕೊನೆಗೂ ಗುಂಡಿಗೆ ಬಲಿ

ಹುಲಿ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವು | ವನ್ಯಜೀವಿ ಪ್ರೇಮಿಗಳ ವಿರೋಧದ ನಡುವೆಯೇ ಹತ್ಯೆ

Vijaya Karnataka 4 Nov 2018, 8:14 am
ಮುಂಬಯಿ: ಮಹಾರಾಷ್ಟ್ರದ ಯಾವತ್ಮಲ್‌ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿರುವ ಆರೋಪ ಹೊತ್ತಿದ್ದ ಹೆಣ್ಣು ಹುಲಿ 'ಅವನಿ'ಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ.
Vijaya Karnataka Web Tiger


ಸುಮಾರು ಮೂರು ತಿಂಗಳ ಭಾರಿ ಶೋಧಕಾರ್ಯದ ಬಳಿಕ ಶುಕ್ರವಾರ ತಡರಾತ್ರಿ ಹುಲಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ, ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ನರಭಕ್ಷಕ ಹುಲಿಗೆ ಕಂಡಲ್ಲಿ ಗುಂಡು ಹಾರಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿತ್ತು. ನ್ಯಾಯಾಲಯದ ಈ ತೀರ್ಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿತ್ತು.

''ಆವನಿಯನ್ನು ಶಾರ್ಪ್‌ ಶೂಟರ್‌ ಅಸ್ಗರ್‌ ಅಲಿ (ಖ್ಯಾತ ಶಾರ್ಪ್‌ ಶೂಟರ್‌ ನವಾಬ್‌ ಶಫತ್‌ ಅಲಿ ಅವರ ಪುತ್ರ) ಅವರು ರಾಲೆಗನ್‌ ಪೊಲೀಸ್‌ ಠಾಣೆ ವ್ಯಾಪ್ತಿಯ, ಬರೋತಿ ಅರಣ್ಯದಲ್ಲಿ ಗುಂಡಿಟ್ಟು ಕೊಂದಿದ್ದಾರೆ,'' ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಅವನಿ, 2012ರಲ್ಲಿ ಮೊದಲ ಬಾರಿಗೆ ಯಾವತ್ಮಲ್‌ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಇದೇ ಅರಣ್ಯದಲ್ಲಿ 13 ಮೃತದೇಹಗಳು ಪತ್ತೆಯಾಗಿದ್ದವು. 13 ಮಂದಿಯನ್ನೂ ಇದೇ ಹುಲಿ ಕೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ವನ್ಯಜೀವಿ ತಜ್ಞರು ಹಾಗೂ ಪ್ರಾಣಿ ದಯಾ ಸಂಘದವರು ಇದನ್ನು ನಿರಾಕರಿಸಿದ್ದು, ಎಲ್ಲರನ್ನೂ ಹುಲಿಯೇ ಕೊಂದಿದೆ ಎಂಬುದಕ್ಕೆ ಆಧಾರವಿಲ್ಲ ಎಂದಿದ್ದಾರೆ.


ವಿನಾಕಾರಣ ನರಭಕ್ಷಕ ಪಟ್ಟ:
''ಹುಲಿಗೆ ವಿನಾಕಾರಣ 'ನರಭಕ್ಷಕ' ಪಟ್ಟವನ್ನು ಕಟ್ಟಲಾಗಿದೆ. 13 ಮಂದಿಯನ್ನು ಈ ಹುಲಿಯೇ ತಿಂದಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಹುಲಿ ಅರಣ್ಯ ಬಿಟ್ಟು ಹೋಗಿಲ್ಲ. ಆದರೆ, ಮಾನವನೇ ತಪ್ಪಾಗಿ ಅದರ ಪ್ರದೇಶಕ್ಕೆ ಬಂದಿದ್ದಾನೆ. ಹೀಗಾಗಿ ಇದು ಮನುಷ್ಯ ಮಾಡಿದ್ದೇ ತಪ್ಪು,'' ಎಂದು ಬೆಂಗಳೂರು ಮೂಲದ ಹೋರಾಟಗಾರ್ತಿ ಪ್ರೇರಣಾ ಚಕ್ರವರ್ತಿ ಹೇಳಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ