ಆ್ಯಪ್ನಗರ

ಇನ್ನು ಕಾಮುಕರಿಗೆ ಬೀಳಲಿದೆ ಇಲೆಕ್ಟ್ರೋ ಶೂ ಏಟು!

ಈ ಶೂ ದುಷ್ಕರ್ಮಿಗಳಿಗೆ ವಿದ್ಯುತ್ ಶಾಕ್ ನೀಡುವುದರ ಜತೆಗೆ, ಪೊಲೀಸ್ ಮತ್ತು ಸಂಬಂಧಿಕರಿಗೆ ಎಚ್ಚರಿಕೆಯ ಸಂದೇಶವನ್ನು ತಕ್ಷಣ ರವಾನಿಸುತ್ತದೆ.

ಟೈಮ್ಸ್ ಆಫ್ ಇಂಡಿಯಾ 22 May 2017, 3:22 pm
ಹೈದರಾಬಾದ್: ಈ ವಿಶೇಷ ಶೂ ಧರಿಸಿದ ಮಹಿಳೆ ಮೇಲೆ ದುರ್ಷರ್ಮಿಗಳು ಎರಗಿದಾಗ ಅವರಿಗೆ ಶಾಕ್ ಹೊಡೆಯುತ್ತದೆ. ತಕ್ಷಣ ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ಸಂದೇಶವನ್ನೂ ರವಾನಿಸುವ ಮೂಲಕ ಸಂಭವನೀಯ ಅನಾಹುತ ತಪ್ಪಿಸುತ್ತದೆ.
Vijaya Karnataka Web to keep rapists away put on electroshoe
ಇನ್ನು ಕಾಮುಕರಿಗೆ ಬೀಳಲಿದೆ ಇಲೆಕ್ಟ್ರೋ ಶೂ ಏಟು!


ಸಿದ್ಧಾರ್ಥ್ ಮಂಡಲ ಎಂಬ 17 ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ಮಹಿಳೆಯರ ರಕ್ಷಣೆಗಾಗಿ ಈ ವಿಶೇಷ ಶೂ ಕೊಡುಗೆ ನೀಡಿದ್ದಾನೆ. ಕಾಮುಕರಿಂದ ರಕ್ಷಣೆ ಪಡೆಯಲು ಈ ಶೂ ಸಹಾಯಕವಾಗಲಿದೆ.

ಹೈದರಾಬಾದ್‌ನ ಸಿದ್ಧಾರ್ಥ್, ಶಾಲೆಯಲ್ಲಿ ಕಲಿತ ಭೌತಶಾಸ್ತ್ರದ ತತ್ವಗಳು ಮತ್ತು ಕೆಲವು ಮೂಲ ಕೋಡಿಂಗ್‌ ತಂತ್ರಾಂಶ ಬಳಕೆ ಮಾಡಿಕೊಂಡು ವಿದ್ಯುತ್ ಶಾಕ್ ನೀಡುವ 'ಇಲೆಕ್ಟ್ರೋಶೂ' ಎಂಬ ಪಾದರಕ್ಚಷೆ ತಯಾರಿಸಿದ್ದಾನೆ. ಈ ಶೂ ದುಷ್ಕರ್ಮಿಗಳಿಗೆ ವಿದ್ಯುತ್ ಶಾಕ್ ನೀಡುವುದರ ಜತೆಗೆ, ಪೊಲೀಸ್ ಮತ್ತು ಸಂಬಂಧಿಕರಿಗೆ ಎಚ್ಚರಿಕೆಯ ಸಂದೇಶವನ್ನು ತಕ್ಷಣ ರವಾನಿಸುತ್ತದೆ.

'ವಿಶೇಷ ಶೂನಲ್ಲಿ 0.1 ಎಎಂಪಿ ವಿದ್ಯುತ್ ಪ್ರವಹಿಸುತ್ತದೆ. ನಡೆಯುವಾಗ ಚಾರ್ಚ್ ಆಗುವಂತಹ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಇದನ್ನು ಪೀಜೋಇಲೆಕ್ಟ್ರಿಕ್ ಇಫೆಕ್ಟ್ ಎನ್ನಲಾಗುತ್ತದೆ. ಅಂದರೆ ಒತ್ತಡದಿಂದ ಉದ್ಭವಿಸುವ ಶಕ್ತಿ. ಹೆಚ್ಚು ನಡೆದಷ್ಟು ಹೆಚ್ಚು ವಿದ್ಯುತ್ ಉತ್ಪಾದನೆಯಾಗಿ, ರೀಚಾರ್ಜೇಬಲ್ ಬ್ಯಾಟರಿಯಲ್ಲಿ ಸಂಗ್ರಹಗೊಳ್ಳುತ್ತದೆ,' ಎಂದು ಸಿದ್ಧಾರ್ಥ್ ಇಲೆಕ್ಟೋಶೂ ಬಗ್ಗೆ ವಿವರಣೆ ನೀಡಿದ್ದಾನೆ.

'2012ರ ದಿಲ್ಲಿ ಗ್ಯಾಂಗ್ ರೇಪ್ ಪ್ರಕರಣ ನೂತನ ಸಾಧನ ತಯಾರಿಸಲು ಕಾರಣ. ಎಲ್ಲ ಮಹಿಳೆಯರಿಗೆ ರಕ್ಷಣೆ ಬೇಕು,' ಎಂದು ಸಿದ್ಧಾರ್ಥ್ ತಿಳಿಸಿದ್ದಾನೆ.

ಮಹಿಳೆಯರ ವಿರುದ್ಧದ ಅಪರಾಧಗಳು ದಿಲ್ಲಿಯಲ್ಲೇ ಹೆಚ್ಚು. ರಾಷ್ಟ್ರೀಯ ಅಪರಾಧಗಳ ರೆಕಾರ್ಡ್ ಬ್ಯೂರೋ ನೀಡಿದ 2015ರ ವರದಿ ಪ್ರಕಾರ ದಿಲ್ಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿವೆ. ಅಸ್ಸಾಂ, ಒಡಿಶಾ, ರಾಜಸ್ಥಾನ, ಹರಿಯಾಣ ಮತ್ತು ಪಶ್ಚಿಮ ಬಂಗಾಳ ನಂತರದ 5 ಸ್ಥಾನಗಳಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ