ಆ್ಯಪ್ನಗರ

ಮೋದಿ ಜನ್ಮದಿನ ಆಚರಣೆಗೆ ‘ಸೇವಾ ಸಪ್ತಾಹ’

ಈ ಅವಧಿಯಲ್ಲಿ ಸ್ವಚ್ಛತೆ ಹಾಗೂ ವಿವಿಧ ಸಮಾಜ ಸೇವಾ ಕಾರ‍್ಯಕ್ರಮಗಳು ದೇಶಾದ್ಯಂತ ನಡೆಯಲಿವೆ.

PTI 30 Aug 2019, 5:00 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿಶೇಷವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಸೆ.17 ಮೋದಿ ಅವರ ಜನ್ಮದಿನವಾಗಿದ್ದು ಬಿಜೆಪಿ ಸೆ.14 ರಿಂದ 20ರವರೆಗೆ ಸೇವಾ ಸಪ್ತಾಹ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಸ್ವಚ್ಛತೆ ಹಾಗೂ ವಿವಿಧ ಸಮಾಜ ಸೇವಾ ಕಾರ‍್ಯಕ್ರಮಗಳು ದೇಶಾದ್ಯಂತ ನಡೆಯಲಿವೆ. ಈ ವಿಶೇಷ ಕಾರ‍್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಕೇಂದ್ರ ಸಮಿತಿ ರಚಿಸಿದ್ದು ನಾಯಕ ಅವಿನಾಶ್‌ ರಾಯ್‌ ಖನ್ನಾ ಅವರನ್ನು ಸಂಚಾಲಕರನ್ನಾಗಿ ನೇಮಿಸಿದೆ. ಕೇಂದ್ರ ಸಚಿವಾರದ ಅರ್ಜುನ್‌ ರಾಮ್‌ ಮೇಘ್ವಾಲ್‌, ರಾಷ್ಟ್ರೀಯ ಕಾರ‍್ಯದರ್ಶಿಗಳಾದ ಸುಧಾ ಯಾದವ್‌, ಸುನೀಲ್‌ ದಿಯೋದಾರ್‌ ಸಮಿತಿಯ ಸದಸ್ಯರಾಗಿದ್ದಾರೆ.
Vijaya Karnataka Web modi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ