ಆ್ಯಪ್ನಗರ

ಪೇದೆ ಲಲಿತಾಗೆ ಇಂದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮೂಲಕ ಗಂಡಾಗಿ ಬದಲಾಗಬೇಕೆಂದು ಕಾನೂನು ಹೋರಾಟ ನಡೆಸಿದ್ದ ಮಹಾರಾಷ್ಟ್ರದ 29 ವರ್ಷದ ಮಹಿಳಾ ಪೇದೆ ಲಲಿತಾ ಸಾಳ್ವೆ ಅವರ ಆಸೆ ಈಡೇರಲಿದೆ. ವರ್ಷಗಟ್ಟಲೆ ಹೋರಾಟ ನಡೆಸಿ ಅಗತ್ಯ ವೈದ್ಯಕೀಯ ಪರವಾನಗಿ ಹಾಗೂ ಇಲಾಖೆಯಿಂದ ರಜೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಾಳ್ವೆ ಅವರಿಗೆ ಮುಂಬಯಿಯ ಸೇಂಟ್‌ ಜಾರ್ಜ್‌ ಆಸ್ಪತ್ರೆಯಲ್ಲಿ ಶುಕ್ರವಾರ ಲಿಂಗ ಪರಿವರ್ತನೆ ಚಿಕಿತ್ಸೆ ನಡೆಯಲಿದೆ.

Vijaya Karnataka 25 May 2018, 9:34 am
ಮುಂಬಯಿ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮೂಲಕ ಗಂಡಾಗಿ ಬದಲಾಗಬೇಕೆಂದು ಕಾನೂನು ಹೋರಾಟ ನಡೆಸಿದ್ದ ಮಹಾರಾಷ್ಟ್ರದ 29 ವರ್ಷದ ಮಹಿಳಾ ಪೇದೆ ಲಲಿತಾ ಸಾಳ್ವೆ ಅವರ ಆಸೆ ಈಡೇರಲಿದೆ. ವರ್ಷಗಟ್ಟಲೆ ಹೋರಾಟ ನಡೆಸಿ ಅಗತ್ಯ ವೈದ್ಯಕೀಯ ಪರವಾನಗಿ ಹಾಗೂ ಇಲಾಖೆಯಿಂದ ರಜೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಾಳ್ವೆ ಅವರಿಗೆ ಮುಂಬಯಿಯ ಸೇಂಟ್‌ ಜಾರ್ಜ್‌ ಆಸ್ಪತ್ರೆಯಲ್ಲಿ ಶುಕ್ರವಾರ ಲಿಂಗ ಪರಿವರ್ತನೆ ಚಿಕಿತ್ಸೆ ನಡೆಯಲಿದೆ.
Vijaya Karnataka Web Constable Lalitha


''ಕಳೆದ ಮಂಗಳವಾರವೇ ಆಸ್ಪತ್ರೆಗೆ ದಾಖಲಾಗಿರುವ ಅವರನ್ನು ಎಕ್ಸ್‌ರೇ ಸ್ಕ್ಯಾ‌ನ್‌, ಇಸಿಜಿ, ರಕ್ತ ಪರೀಕ್ಷೆ ಹೀಗೆ ಹಲವು ಬಗೆಯಲ್ಲಿ ತಪಾಸಣೆಗೆ ಒಳಪಡಿಸಿ ದೇಹಾರೋಗ್ಯದ ಪೂರ್ಣ ವಿವರ ಸಂಗ್ರಹಿಸಲಾಗಿದೆ. ಅವಳು ಆರೋಗ್ಯವಾಗಿ ಸದೃಢವಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿದೆ,'' ಎಂದು ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿರುವ ಡಾ. ರಜತ್‌ ಕಪೂರ್‌ ತಿಳಿಸಿದ್ದಾರೆ. ''ಮೇಲ್ನೋಟಕ್ಕೆ ಇದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಎನಿಸಿಕೊಂಡರೂ ವಾಸ್ತವದಲ್ಲಿ ಅಲ್ಲ. ಕೆಲವು ವರ್ಷಗಳ ಹಿಂದೆಯೇ ಹಾರ್ಮೋನುಗಳ ಏರಿಳಿತದಿಂದ ಲಲಿತಾ ಸಾಳ್ವೆ ಜೈವಿಕವಾಗಿ ಗಂಡಾಗಿ ಬದಲಾಗಿದ್ದಾರೆ,'' ಎನ್ನುತ್ತಾರೆ ಅವರು.

1988ರಲ್ಲಿ ಜನಿಸಿದ ಲಲಿತಾ ಸಾಳ್ವೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ದೇಹದಲ್ಲಾಗುತ್ತಿರುವ ಲೈಂಗಿಕ ಹಾರ್ಮೋನು ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಬಳಿಕ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟಾಗ ಅವರಲ್ಲಿ, ಪುರುಷರಲ್ಲಿ ಇರುವ 'ಎಕ್ಸ್‌' ಮತ್ತು 'ವೈ' ಕ್ರೋಮೋಸೋಮ್‌ಗಳು ಇರುವುದು ಪತ್ತೆಯಾಗಿತ್ತು. ಆಗ ಗಂಡಾಗಿ ಬದಲಾಗಲು ನಿರ್ಧರಿಸಿದರು. ನಂತರದಲ್ಲಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಪಡಲು ವೈದ್ಯಕೀಯ ಅನುಮತಿ ಹಾಗೂ ಸುಮಾರು ಒಂದು ತಿಂಗಳ ರಜೆ ನೀಡಬೇಕೆಂದು ಕೋರಿ ರಾಜ್ಯದ ಡಿಜಿಪಿಗಷ್ಟೇ ಅಲ್ಲದೇ ಬೀಡ್‌ ಎಸ್ಪಿ ಜಿ.ಶ್ರೀಧರ್‌ಗೆ ಪತ್ರ ಬರೆದರಾದರೂ ನಾನಾ ಕಾರಣಗಳಿಂದ ಅನುಮತಿ ಸಿಕ್ಕಿರಲಿಲ್ಲ. ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದರು. ಕೋರ್ಟ್‌, ಮಹಾರಾಷ್ಟ್ರ ಆಡಳಿತ ಪ್ರಾಧಿಕಾರದಲ್ಲಿ ವಿಷಯ ಬಗೆಹರಿಸಿಕೊಳ್ಳುವಂತೆ ಹೇಳಿ ಕಳುಹಿಸಿತ್ತು. ಅಲ್ಲಿಂದ ಮುಂದೆ ಸಿಎಂ ದೇವೇಂದ್ರ ಫಡ್ನವಿಸ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಕೊನೆಗೂ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಪಡೆಯಲು ಯಶಸ್ವಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ