ಆ್ಯಪ್ನಗರ

ಇಂದು ಪ.ಬಂಗಾಳ ಪಂಚಾಯ್ತಿ ಫೈಟ್

ಭಾರಿ ವಿವಾದ ಹಾಗೂ ರಾಜಕೀಯ ಜಿದ್ದಾಜಿದ್ದಿಯಿಂದ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಭಾರಿ ಬಿಗಿ ಭದ್ರತೆ ನಡುವೆ ಸೋಮವಾರ ನಡೆಯಲಿದೆ.

Vijaya Karnataka 14 May 2018, 7:34 am
ಕೋಲ್ಕೊತಾ: ಭಾರಿ ವಿವಾದ ಹಾಗೂ ರಾಜಕೀಯ ಜಿದ್ದಾಜಿದ್ದಿಯಿಂದ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಭಾರಿ ಬಿಗಿ ಭದ್ರತೆ ನಡುವೆ ಸೋಮವಾರ ನಡೆಯಲಿದೆ.
Vijaya Karnataka Web WB Panchayat


ನಾಮಪತ್ರ ಸಲ್ಲಿಕೆ ವೇಳೆ ಉಂಟಾದ ಹಿಂಸಾಚಾರದಿಂದಾಗಿ ಚುನಾವಣೆ ವಿಚಾರ ಹಲವು ಸಲ ಕೋರ್ಟ್‌ ಕಟಕಟೆವರೆಗೂ ಹೋಗಿತ್ತು. ಮೊದಲ ಸಲ ವಾಟ್ಸಪ್‌, ಇ-ಮೇಲ್‌ ಮೂಲಕ ನಾಮಪತ್ರ ಸಲ್ಲಿಸಲಾಗಿತ್ತು.

ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ನಡೆಯಲಿರುವ ಪ್ರಮುಖ ಮತಸಮರ ಇದಾಗಿರುವುದರಿಂದ 2019ರ ಸಾರ್ವತ್ರಿಕ ಚುನಾವಣೆಯ ಪೂರ್ವಸಿದ್ಧತೆ ಎಂದೇ ರಾಜಕೀಯ ಪಕ್ಷಗಳು ಪರಿಗಣಿಸಿವೆ. ಮೇ 17ರಂದು ಫಲಿತಾಂಶ ಹೊರಬೀಳಲಿದೆ. ಒಂದೇ ಹಂತದಲ್ಲಿ ನಡೆಯಲಿರುವ ಈ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಆದರೆ ಪ್ರಚಾರದಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ ವರಿಷ್ಠೆ ಮಮತಾ ಬ್ಯಾನರ್ಜಿ ಅವರು, ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಗುರುತಿಸಿ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು.

ಒಟ್ಟು ಗ್ರಾಮ ಪಂಚಾಯಿತಿಗಳು - 3,358

ಒಟ್ಟು ಸ್ಥಾನಗಳು - 48,650

ಜಿಲ್ಲಾ ಪಂಚಾಯತಿಗಳು - 20

ಒಟ್ಟು ಜಿ.ಪಂ. ಸ್ಥಾನಗಳು - 82

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ